ಕ್ರಿಕೆಟ್ ಜಗತ್ತಿನ ಅತ್ಯಂತ ಜನಪ್ರಿಯ ಆಟಗಾರರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಹೆಚ್ಚಾಗಿ ಸುದ್ದಿಯಿಂದ ದೂರವಿರುತ್ತಾರೆ. ಅವರು ಸಾಮಾಜಿಕ ಮಾಧ್ಯಮವನ್ನ ಸಹ ವಿರಳವಾಗಿ ಬಳಸುತ್ತಾರೆ. ಆದರೆ ಧೋನಿಯ ಫೋಟೋವೊಂದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಕಳವಳವನ್ನ ಹೆಚ್ಚಿಸಿದೆ.
ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ 2025ರ ಕ್ವಾಲಿಫೈಯರ್ 2ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್‌ಗಳ ರೋಮಾಂಚಕ ಗೆಲುವು ಸಾಧಿಸಿದ ನಂತರ, ತಂಡದ ಒಡತಿ ಪ್ರೀತಿ ಜಿಂಟಾ ಅವರ ಸಂಭ್ರಮಾಚರಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Indian Premier League 2025: ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕಾದಾಟ ನಡೆಸಲಿದೆ. ಜೂನ್ 3ರಂದು ಈ ಪಂದ್ಯವೂ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿಯೇ ನಡೆಯಲಿದೆ.
PBKS vs MI, Qualifier 2: 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಯಾವುದೇ ರೀತಿಯ ಮೀಸಲು ದಿನ ಇರುವುದಿಲ್ಲ. 120 ನಿಮಿಷಗಳ ಬಳಿಕ ಓವರ್‌ಗಳ ಸಂಖ್ಯೆಯಲ್ಲಿಯೂ ಕಡಿತವಾಗಲಿದೆ. ನಿಗದಿತ ಅವಧಿಯಲ್ಲಿ ಪಂದ್ಯ ಪೂರ್ಣಗೊಳಿಸಲು ಪ್ರಯತ್ನ ನಡೆಯಲಿದೆ.
IPL record holders: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಅನೇಕ ದಾಖಲೆಗಳು ನಿರ್ಮಾಣವಾಗಿವೆ. ಬ್ಯಾಟಿಂಗ್‌ನಂತೆ ಬೌಲಿಂಗ್‌ನಲ್ಲಿಯೂ ಅನೇಕ ಬೌಲರ್‌ಗಳು ಕಮಾಲ್ ಮಾಡಿದ್ದಾರೆ. ಈ ಟೂರ್ನಿಯಲ್ಲಿ ಅತಿಹೆಚ್ಚು ಡಾಟ್ ಬೌಲ್ ಮಾಡಿದ ಟಾಪ್ ಬೌಲರ್‌ಗಳ ಮಾಹಿತಿ ಇಲ್ಲಿದೆ ನೋಡಿ...
ಪ್ಲೇಆಫ್‌ಗೆ ಅರ್ಹತೆ ಪಡೆದ ಮುಂಬೈ ಇಂಡಿಯನ್ಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬರುತ್ತಿದೆ. ಅಂಪೈರ್ ಉದ್ದೇಶಪೂರ್ವಕವಾಗಿ ಮುಂಬೈ ಪರವಾಗಿ ಕೆಲವು ನಿರ್ಧಾರಗಳನ್ನು ನೀಡಿದ್ದಾರೆ. ವಿಶೇಷವಾಗಿ ಬೌಂಡರಿ ಮತ್ತು ಅಭಿಷೇಕ್ ಪೊರೆಲ್ ಸ್ಟಂಪಿಂಗ್ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಇಂಡಿಯನ್ ಪ್ರೀಮಿಯರ್ ಲೀಗ್(IPL)ನ 63ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(MI) ಬುಧವಾರ ಡೆಲ್ಲಿ ಕ್ಯಾಪಿಟಲ್ಸ್(DC) ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ತಂಡ ಪ್ಲೇಆಫ್‌ಗೆ ಹತ್ತಿರವಾಗಿದೆ. ನಿನ್ನೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್, ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಅರ್ಧಶತಕ(73)ದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 180 ರನ್ ಕಲೆ ಹಾಕಿತು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) 63ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡವು ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ 59 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಪ್ಲೇಆಫ್‌ಗೆ ಪ್ರವೇಶಿಸಿದೆ.
Rohit Sharma Retirement: ಐಪಿಎಲ್ ಮಧ್ಯೆ ಟೀಂ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ, ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಹಾಲಿ ಐಪಿಎಲ್ ಟೂರ್ನಿಯಲ್ಲಿ ಪ್ಲೇಆಫ್ ಕನಸು ಕಾಣುತ್ತಿದ್ದ ರಾಜಸ್ತಾನ ರಾಯಲ್ಸ್ ತಂಡಕ್ಕೆ ಡಬಲ್ ಆಘಾತ ಎದುರಾಗಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ರಿಯಾನ್ ಪರಾಗ್ ಪಡೆ ಟೂರ್ನಿಯಿಂದಲೇ ಹೊರಬಿದ್ದಿದ್ದರೆ, ಇತ್ತ ತಂಡದ ಪ್ರಮುಖ ವೇಗಿ ಗಾಯಗೊಂಡು ಬಾಕಿ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಹಾಲಿ ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಮುಂಬೈ ವಿರುದ್ಧ ರಾಜಸ್ತಾನ ತಂಡ 100 ರನ್ ಗಳ ಹೀನಾಯ ಸೋಲುಕಂಡಿದೆ. ಈ ಪಂದ್ಯದ ಸೋಲಿನ ಮೂಲಕ ರಾಜಸ್ತಾನ ರಾಯಲ್ಸ್ ತಂಡ ಟೂರ್ನಿಯಿಂದಲೇ ಹೊರಬಿದ್ದಿದೆ.
ಕಳೆದ ಪಂದ್ಯದಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ ಅಬ್ಬರದ ಶತಕದ ನೆರವಿನಿಂದ ಗುಜರಾತ್ ವಿರುದ್ಧ ಗೆದ್ದಿದ್ದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಗುರುವಾರ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲು ಎದುರಾಗಲಿದೆ. ರಾಜಸ್ಥಾನಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಸೋತರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.
Ishan Kishan: ಮುಂಬೈ ವಿರುದ್ಧ ಪಂದ್ಯದಲ್ಲಿ ಇಶಾನ್ ಕಿಶನ್ ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ, ಎನ್ನುವ ಸುದ್ದಿ ಇದೀಗ ಸಿಕ್ಕಾಪಟ್ಟೆ ಚರ್ಚೆಯನ್ನು ಹುಟ್ಟು ಹಾಕಿದೆ. ಅಷ್ಟಕ್ಕೂ ಈ ಚರ್ಚೆಗಳು ಮುನ್ನೆಲೆಗೆ ಬರಲು ಕಾರಣಗಳೇನು? ತಿಳಿಯಲು ಮುಂದೆ ಓದಿ...
MI vs RCB: ಯಶ್ ದಯಾಳ್ ಮತ್ತು ಜಿತೇಶ್ ಶರ್ಮಾ ಇಬ್ಬರು ಸೇರಿ ಸೂರ್ಯ ಕುಮಾರ್ ಕ್ಯಾಚ್ ಕೈಬಿಟ್ಟ ನಂತರ ವಿರಾಟ್ ಕೊಹ್ಲಿ ತುಂಬಾ ಕೋಪಗೊಂಡರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಸಖತ್ ವೈರಲ್ ಆಗುತ್ತಿದೆ.
3 Reasons Why RCB Team Haven't Won IPL Cup in 18 Years: ಆರ್‌ಸಿಬಿಯ ತಂಡದ ಸಂಯೋಜನೆಯಲ್ಲಿ ಯಾವಾಗಲೂ ಸಮತೋಲನದ ಕೊರತೆ ಇದೆ. ತಂಡವು ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್‌ರಂತಹ ದೊಡ್ಡ ಬ್ಯಾಟ್ಸ್‌ಮನ್‌ಗಳ ಮೇಲೆ ಹೆಚ್ಚು ಅವಲಂಬಿತವಾಗ, ಬೌಲಿಂಗ್ ವಿಭಾಗದಲ್ಲಿ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಆರ್‌ಸಿಬಿ ವಿಫಲವಾಗಿದೆ.
ಐಪಿಎಲ್ 2025ರ 12ನೇ ಪಂದ್ಯದಲ್ಲಿ ಮುಂಬೈ ತಂಡ ತವರಿನಲ್ಲಿ 8 ವಿಕೆಟ್‌ಗಳ ಚೊಚ್ಚಲ ಜಯ ಗಳಿಸಿದೆ.ಹಾಲಿ ಚಾಂಪಿಯನ್ಸ್ ಕೆಕೆಆರ್ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ತಂಡ 16.2 ಎರಡು ಓವರ್ ಗಳಲ್ಲಿ ಎದುರಾಳಿ ತಂಡವನ್ನು 116 ರನ್ ಗಳಿಗೆ ನಿರ್ಬಂಧಿಸಿತು. ಸರಳ ರನ್ ಗುರಿ ಬೆನ್ನಟ್ಟಿದ ತಂಡಕ್ಕೆ ಆರಂಭಿಕ ಆಟಗಾರ ರೋಹಿತ್ ಶರ್ಮಾ 12 ಎಸೆತಗಳಲ್ಲಿ 13 ರನ್ ಗಳಿಸಿ ನಿರ್ಗಮಿಸಿದ್ದು ನಿರಾಸೆ ಮೂಡಿಸಿತಾದರೂ ರಯಾನ್ ರಿಕೆಲ್ಟನ್ 41 ಎಸೆತಗಳಲ್ಲಿ 62 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು. ಕೆಕೆಆರ್ ತಂಡದ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದ ರಯಾನ್ ರಿಕೆಲ್ಟನ್- ಸೂರ್ಯಕುಮಾರ್ ಯಾದವ್ (9 ಎಸೆತಗಳಲ್ಲಿ 27 ರನ್) ತಂಡವನ್ನು ಗೆಲುವಿನ ದಡ ಸೇರಿಸಿದರು.
IPL Cheerleaders salaries: ಪ್ರತಿ ಐಪಿಎಲ್ ಋತುವಿನಲ್ಲಿ ಚಿಯರ್‌ಲೀಡರ್‌ಗಳು ಕನಿಷ್ಠ 5 ಲಕ್ಷ ರೂ. ಗಳಿಸುತ್ತಾರೆ. ಆದರೆ ಈ ಆದಾಯವು ಎಲ್ಲಾ ಚಿಯರ್‌ಲೀಡರ್‌ಗಳಿಗೆ ಒಂದೇ ಆಗಿರುವುದಿಲ್ಲ. ಕೆಲವರು ಹೆಚ್ಚು ಹಣ ಗಳಿಸಿದರೆ, ಇನ್ನು ಕೆಲವರು ಸ್ವಲ್ಪ ಕಡಿಮೆ ಗಳಿಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.