ದೇಶದ ಹಲವು ಭಾಗಗಳಲ್ಲಿ ಕರೋನಾವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ವೇಗವಾಗಿ ಹರಡುತ್ತಿದೆ. ಈ ಮಧ್ಯೆ 20 ರಿಂದ 30 ಪ್ರತಿಶತ ಹೆಚ್ಚು ಅಪಾಯಕಾರಿಯಾದ ಒಮಿಕ್ರಾನ್ನ ಹಲವು ಹೊಸ ರೂಪಾಂತರಗಳು ಆತಂಕ ಹೆಚ್ಚಿಸಿವೆ. ಈ ಬಗ್ಗೆ ಕಾಳಜಿ ವಹಿಸುವಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.
Omicron's Community Spread - ದೇಶದ ಹಲವು ಮಹಾನಗರಗಳಲ್ಲಿ Omicorn ರೂಪಾಂತರಿಯ ಸಮುದಾಯ ಹರಡುವಿಕೆ ಉಂಟಾದ ಸಂಕೇತಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಸಂಸ್ಥೆಯಾಗಿರುವ INSACOG ಹೇಳಿದೆ.
ಆಸ್ಪತ್ರೆಗಳಲ್ಲಿ ಗುಂಪು ಸೇರುವುದನ್ನು ತಪ್ಪಿಸಲು ಹಾಗೂ ಕೋವಿಡ್-19 ಸೋಂಕು ಹರಡುವಿಕೆ ತಡೆಗಟ್ಟಲು ಸಲುವಾಗಿ ಜ್ವರ ಮತ್ತು ತುರ್ತು ಆರೋಗ್ಯ ಚಿಕಿತ್ಸೆಯ ಅಗತ್ಯವಿರುವ ರೋಗಿಗಳು ಮಾತ್ರ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ಭೇಟಿ ನೀಡಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಕಳೆದ ವಾರದಿಂದ ದೇಶಾದ್ಯಂತ ಕೋವಿಡ್ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಆನ್ಲೈನ್ ಸಭೆ ನಡೆಸಿದ್ದಾರೆ.
ಕರೋನವೈರಸ್ ನ ವಿವಿಧ ರೂಪಾಂತರಗಳು ಜನರಲ್ಲಿ ಭೀತಿಯನ್ನು ಹೆಚ್ಚಿಸುತ್ತಿವೆ. ಹಾಗಂತ ಭಯಪಡುವ ಅಗತ್ಯವಿರುವುದಿಲ್ಲ. ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಈ ವೈರಸ್ ಹರಡುವುದನ್ನು ತಡೆಯಬಹುದು.
ಮಹಾರಾಷ್ಟ್ರದ ಜವಾಹರ್ ನವೋದಯ ವಿಶ್ವವಿದ್ಯಾನಿಲಯದಲ್ಲಿ 19 ಮಕ್ಕಳಿಗೆ ಕೋವಿಡ್ -19 ಸೋಂಕು ತಗುಲಿರುವುದು ಕಂಡುಬಂದಿದ್ದು, ನಂತರ 450 ವಿದ್ಯಾರ್ಥಿಗಳನ್ನು ವೈರಸ್ಗಾಗಿ ಪರೀಕ್ಷಿಸಲಾಯಿತು.ಈಗ ಇನ್ನೂ 33 ಮಕ್ಕಳು ಧನಾತ್ಮಕ ಪರೀಕ್ಷೆ ಮಾಡಿದ್ದಾರೆ.
Lockdown Return: ಭಾರತದಲ್ಲಿಯೂ ಓಮಿಕ್ರಾನ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಇಲ್ಲಿಯವರೆಗೆ 220 ಸೋಂಕಿತ ರೋಗಿಗಳು ಪತ್ತೆಯಾಗಿದ್ದಾರೆ. ಡೆಲ್ಟಾಕ್ಕಿಂತ ಓಮಿಕ್ರಾನ್ ಅಪಾಯಕಾರಿ, ಮತ್ತೆ ಲಾಕ್ಡೌನ್ಗೆ ಸಿದ್ಧರಾಗಿರಿ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಕರ್ನಾಟಕ ಮತ್ತು ಕೇರಳ ಕ್ರಮವಾಗಿ ಆರು ಮತ್ತು ನಾಲ್ಕು ಪ್ರಕರಣಗಳನ್ನು ವರದಿ ಮಾಡಿದ ನಂತರ ಭಾರತದ ಒಮಿಕ್ರಾನ್ ಕೋವಿಡ್ ಸಂಖ್ಯೆ ಶನಿವಾರದಂದು 126 ಕ್ಕೆ ಏರಿದೆ, ಮಹಾರಾಷ್ಟ್ರದಲ್ಲಿ ಇನ್ನೂ ಮೂರು ಜನರು ಸಹ ರೂಪಾಂತರಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.
ಪ್ರತಿದಿನ ವರದಿಯಾಗುತ್ತಿರುವ ಹೊಸ ಪ್ರಕರಣಗಳಿಂದಾಗಿ COVID-19 ನ ಓಮಿಕ್ರಾನ್ ರೂಪಾಂತರದ ಭಯವು ಹೆಚ್ಚುತ್ತಿದೆ,11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದುವರೆಗೆ 101 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ ಎಂದು ಸರ್ಕಾರ ಹೇಳಿದೆ.
Omicron Symptoms: ಭಾರತದಲ್ಲಿ 'ಓಮಿಕ್ರಾನ್' ಸೋಂಕಿಗೆ ಒಳಗಾದ ಮೊದಲ ಇಬ್ಬರು ಸೊಂಕಿತರಲ್ಲಿ (Coronavirus) ಈ ವೈದ್ಯರು ಕೂಡ ಒಬ್ಬರು. ಇನ್ನೊಂದೆಡೆ ಮಾಹಿತಿ ನೀಡದೆ ದೇಶದಿಂದ ಹೊರ ಹೋಗಿರುವ ದಕ್ಷಿಣ ಆಫ್ರಿಕಾ ಪ್ರಜೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Omicron in India: ಓಮಿಕ್ರಾನ್ನ (Omicron) ಅಪಾಯವನ್ನು ಗ್ರಹಿಸಿದ ಮಹಾರಾಷ್ಟ್ರ (Maharashra) ಸರ್ಕಾರವು ಅಪಾಯದ ದೇಶಗಳಿಂದ ಭಾರತಕ್ಕೆ ಬರುವ ಜನರು ಏಳು ದಿನಗಳ ಕಾಲ ಹೋಮ್ ಕ್ವಾರಂಟೈನ್ನಲ್ಲಿ ಇರಲು ನಿಯಮವನ್ನು ಮಾಡಿದೆ.
Omicron In India - ಕೊರೊನಾ ಹೊಸ ರೂಪಾಂತರಿ (Coronavirus New Variant) ಓಮಿಕ್ರಾನ್ (Omicron) ಕುರಿತು ನಿತ್ಯ ಹೊಸ ಹೊಸ ಮಾಹಿತಿ ಮತ್ತು ವರದಿಗಳು ಬಹಿರಂಗಗೊಳ್ಳುತ್ತಲೇ ಇವೆ. ಆದರೆ, ಇದೀಗ ಕೊರೊನಾದಿಂದ ಚೇತರಿಸಿಕೊಂಡ ಜನರಲ್ಲಿಯೂ ಕೂಡ ಪುನಃ ಓಮಿಕ್ರಾನ್ ಕಾಣಿಸಿಕೊಳ್ಳುತ್ತಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.
Third wave of Corona:ಒಮಿಕ್ರಾನ್ ಸೋಂಕು (Omicron Variant) ದೇಶಾದ್ಯಂತ ಹರಡುತ್ತಿರುವ ಹಿನ್ನೆಲೆ ಕೊರೊನಾ ವೈರಸ್ ಮೂರನೇ ಅಲೆ (Coronavirus 3rd Wave) ಬರುವ ಸಾಧ್ಯತೆ ಎಲ್ಲರ ಮನದಲ್ಲಿ ಮೂಡುತ್ತಿದೆ. ಮೂರನೇ ಅಲೆ ಬರಲಿದೆಯಾ? ಯಾವಾಗ ಬರಲಿದೆ? ಎಂಬ ಪ್ರಶ್ನೆಗಳು ಎಲ್ಲರ ಮನದಲ್ಲಿ ಮೂಡುತ್ತಿವೆ.
Omicron Enters Rajasthan - ರಾಜಸ್ಥಾನದ ಆರೋಗ್ಯ ಇಲಾಖೆ (Rajasthan Health Department), "ರಾಜಸ್ಥಾನದ ಜೈಪುರನಲ್ಲಿ (Omicron In Jaipur) ಇದುವರೆಗೆ ಒಮಿಕ್ರಾನ್ ರೂಪಾಂತರಿಯ ಒಟ್ಟು 9 ಪ್ರಕರಣಗಳು ವರದಿಯಾಗಿವೆ" ಎಂದು ದೃಢಪಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.