ನವದೆಹಲಿ: Covid-19 Latest Update - ಪಶ್ಚಿಮ ಬಂಗಾಳದಲ್ಲಿ (West Bengal) ಕೋವಿಡ್ (Covid-19), ಓಮಿಕ್ರಾನ್ನ (Omicron) ಹೊಸ ರೂಪಾಂತರದಿಂದಾಗಿ, ಕರೋನಾ ಸೋಂಕಿನ ಮೂರನೇ ಅಲೆಯಲ್ಲಿ ಕೊರೊನಾವೈರಸ್ (Coronavirus) ಪ್ರಕರಣಗಳು ಅನಿಯಂತ್ರಿತ ವೇಗದಲ್ಲಿ ಹೆಚ್ಚಾಗುತ್ತಿವೆ.
ಸೈಪ್ರಸ್ನಲ್ಲಿ ಹೊಸ ಕರೋನವೈರಸ್ ರೂಪಾಂತರ ಡೆಲ್ಟಾಕ್ರಾನ್ ಹೊರಹೊಮ್ಮಿದೆ, ಇದು ಡೆಲ್ಟಾ ರೂಪಾಂತರಕ್ಕೆ ಹೋಲುವ ಆನುವಂಶಿಕ ಹಿನ್ನೆಲೆ ಮತ್ತು ಒಮಿಕ್ರಾನ್ನಿಂದ ಕೆಲವು ರೂಪಾಂತರಗಳನ್ನು ಹೊಂದಿದೆ ಮತ್ತು ಇದು ಸದ್ಯಕ್ಕೆ ಚಿಂತಿಸಬೇಕಾದ ವಿಷಯವಲ್ಲ ಎಂದು ತಜ್ಞರು ಹೇಳಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
Covid-19 Rule Violation: ಗುಜರಾತ್ ನ (Gujrat) ಅಹಮದಾಬಾದ್ನಲ್ಲಿ (Ahmedabad) ಕುಟುಂಬವೊಂದು ತನ್ನ ಸಾಕು ನಾಯಿಯ ಹುಟ್ಟುಹಬ್ಬ (Pet Dog Birthday Celebration) ಆಚರಿಸಲು ದೊಡ್ಡ ಔತಣಕೂದವನ್ನೇ ಆಯೋಜಿಸಿದೆ. ಈ ಸಮಾರಂಭಕ್ಕೆ ಆಗಮಿಸಿದ ಜನರು ಕೋವಿಡ್-19 ನಿಯಮಗಳನ್ನು(Covid-19 Rules) ಉಲ್ಲಂಘಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಇಬ್ಬರು ಸಹೋದರರು ಸೇರಿದಂತೆ ಒಟ್ಟು ಮೂವರನ್ನು ಬಂಧಿಸಿದ್ದಾರೆ.
Anti-Covid-19 Vaccine Precaution Dose - ಜನವರಿ 10 ರಿಂದ ಪ್ರಾರಂಭವಾಗುವ ಕರೋನಾ (Coronavirus) ಲಸಿಕೆ ಪ್ರಿಕಾಶನ್ ಡೋಸ್ಗಾಗಿ (Covid-19 Precaution Dose) ಇಂದಿನಿಂದ ಅಂದರೆ ಶನಿವಾರದಂದು ಅಪಾಯಿಂಟ್ಮೆಂಟ್ಗಳ ಬುಕಿಂಗ್ ಪ್ರಾರಂಭವಾಗುತ್ತಿದೆ. ಮುನ್ನೆಚ್ಚರಿಕೆ ಡೋಸ್ ತೆಗೆದುಕೊಳ್ಳುವವರು ಕೋವಿನ್ ಪೋರ್ಟಲ್ ಅಥವಾ ಆ್ಯಪ್ ಮೂಲಕ ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
Corona Travel Guidelines - ವಿದೇಶದಿಂದ ಭಾರತಕ್ಕೆ ಬರುವ ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರು ಇದೀಗ ಒಂದು ವಾರದವರೆಗೆ ಹೋಮ್ ಕ್ವಾರಂಟೈನ್ನಲ್ಲಿ ಇರಬೇಕಾಗಲಿದೆ. ಹೆಚ್ಚುತ್ತಿರುವ ಕೊರೊನಾ (Coronavirus) ಪ್ರಕರಣಗಳ ನಡುವೆ ಕೇಂದ್ರ ಸರ್ಕಾರವು ಹೊಸ ಪ್ರಯಾಣ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಸಾರ್ವಜನಿಕರು ಅತ್ಯಾವಶ್ಯಕ ಮತ್ತು ತುರ್ತು ಕಾರ್ಯಚಡುವಟಿಕೆಗಳನ್ನು ಹೊರತುಪಡಿಸಿ, ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 05 ಗಂಟೆಯವರೆಗೆ ಜನರ ಓಡಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿರುತ್ತದೆ.
ದೆಹಲಿಯಲ್ಲಿ ಗುರುವಾರದಂದು 15,097 ತಾಜಾ ಕೋವಿಡ್ ಪ್ರಕರಣಗಳನ್ನು ದಾಖಲಿಸಿದೆ, ಮೇ 8 ರಿಂದ ಅತಿ ಹೆಚ್ಚು ಏಕದಿನ ಏರಿಕೆ, ಮತ್ತು ಆರು ಸಾವುಗಳು ಸಂಭವಿಸಿದ್ದು, ಸಕಾರಾತ್ಮಕ ದರವು ಶೇಕಡಾ 15.34 ಕ್ಕೆ ಏರಿದೆ ಎಂದು ನಗರ ಆರೋಗ್ಯ ಇಲಾಖೆ ತಿಳಿಸಿದೆ.
Covid-19: ದೆಹಲಿಯಲ್ಲಿ ಕೊರೊನಾ ಪ್ರಕರಣಗಳು ಮತ್ತೊಮ್ಮೆ ವೇಗವಾಗಿ ಹೆಚ್ಚಾಗಲಾರಂಭಿಸಿವೆ. ಏತನ್ಮಧ್ಯೆ, ಕೊರೊನಾ ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದ ನಂತರ ರೋಗಲಕ್ಷಣಗಳು ಬರದಿದ್ದರೆ, ಪರೀಕ್ಷೆಯನ್ನು ಮಾಡುವ ಅಗತ್ಯವಿಲ್ಲ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.
RT-PCR kit to detect Omicron: ಒಮಿಕ್ರಾನ್ ಡಿಟೆಕ್ಟಿಂಗ್ ಆರ್ ಟಿ-ಪಿಸಿಆರ್ ಕಿಟ್ ಅನ್ನು ಟಾಟಾ ಎಂಡಿ ಮತ್ತು ಐಸಿಎಂಆರ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಡಿಸಿಜಿಐ ಅನುಮೋದಿಸಿದೆ.
COVID-19 ಸಾಂಕ್ರಾಮಿಕದ ಮೂರನೇ ಅಲೆಯು ದೆಹಲಿಯನ್ನು ಅಪ್ಪಳಿಸಿದ್ದು, ಬುಧವಾರದಂದು 10,000 ಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಿಸುವ ನಿರೀಕ್ಷೆಯಿದೆ, ಇದು ಶೇಕಡಾ 10 ರಷ್ಟು ಪಾಸಿಟಿವ್ ದರವನ್ನು ಹೊಂದಿದೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.
Health Minister Sudhakar:ಕನಿಷ್ಟ 4 ರಿಂದ 6 ವಾರ ಜನ ಎಚ್ಚರಿಕೆವಹಿಸಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು. ಅಲ್ಲದೆ ಬೆಂಗಳೂರಿನಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆ ಕೊರೊನಾ ನಿಯಂತ್ರಣ ಸಂಬಂಧ ಐಎಎಸ್, ಐಪಿಎಸ್ ಅಧಿಕಾರಿಗಳ ನೇಮಕ ಮಾಡಲಾಗಿದೆ.
COVID-19 India: ಸರ್ಕಾರವು ದೇಶಾದ್ಯಂತ ಲಸಿಕೆ ಅಭಿಯಾನವನ್ನು ನಿರಂತರವಾಗಿ ವೇಗಗೊಳಿಸುತ್ತಿದೆ. ಈ ಮಧ್ಯೆ ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 58,097 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.
Omicron Testing Kit: ಭಾರತದಲ್ಲಿ ಓಮಿಕ್ರಾನ್ ಅಂಕಿ-ಅಂಶಗಳು 1800 ಗಡಿ ದಾಟಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಒಮಿಕ್ರಾನ್ (Omicron) ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ, ಒಮಿಕ್ರಾನ್ ನ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಜ್ಯ ದೆಹಲಿಯಾಗಿದೆ.
Omicron ನಲ್ಲಿ ಎರಡು ಹೊಸ ಲಕ್ಷಣಗಳು ಕಂಡುಬಂದಿವೆ. ಮೊದಲನೆಯದು ರಾತ್ರಿ ಮಲಗುವಾಗ ಬೆವರುವುದು ಮತ್ತು ಎರಡನೆಯದು ದಿನಕ್ಕೆ ಹಲವಾರು ಬಾರಿ ವಾಂತಿ ಮಾಡುವುದು. ಆದ್ದರಿಂದ, ನೀವು ಈ ಯಾವುದೇ ರೋಗಲಕ್ಷಣಗಳನ್ನು ಹೊಂದಿದ್ದರೆ, ನಂತರ ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.
ಕರೋನವೈರಸ್ ನ ವಿವಿಧ ರೂಪಾಂತರಗಳು ಜನರಲ್ಲಿ ಭೀತಿಯನ್ನು ಹೆಚ್ಚಿಸುತ್ತಿವೆ. ಹಾಗಂತ ಭಯಪಡುವ ಅಗತ್ಯವಿರುವುದಿಲ್ಲ. ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಈ ವೈರಸ್ ಹರಡುವುದನ್ನು ತಡೆಯಬಹುದು.
ನಿನ್ನೆ ಅಂದರೆ ಜನವರಿ 2 ರಂದು ಹೊಸದಾಗಿ 10 'ಒಮಿಕ್ರಾನ್' ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿವೆ. ಈ ಪೈಕಿ ಬೆಂಗಳೂರಿನಲ್ಲೇ 8 ಕೇಸ್ ಕನ್ಫರ್ಮ್ ಆಗಿದ್ದು, ಧಾರವಾಡದಲ್ಲಿ ಹೊಸದಾಗಿ ಇಬ್ಬರಿಗೆ 'ಒಮಿಕ್ರಾನ್' (Omicron) ಅಟ್ಯಾಕ್ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.