ಪಾಕಿಸ್ತಾನದ ಗುಂಡಿನ ದಾಳಿಗೆ ಭಾರತದ ಗಡಿ ಭದ್ರತಾ ಪಡೆ (BSF) ತಿರುಗೇಟು ನೀಡಿ, ಲಷ್ಕರ್-ಎ-ತೊಯ್ಬಾ (LeT) ಉಗ್ರರ ಉಡಾವಣಾ ಕೇಂದ್ರವನ್ನು ಗಡಿಯಿಂದ 3 ಕಿಮೀ ದೂರದಲ್ಲಿ ಧ್ವಂಸಗೊಳಿಸಿದೆ. ಮೇ 9-10 ರ ರಾತ್ರಿ ನಡೆದ ಈ ದಾಳಿಯಲ್ಲಿ ಪಾಕ್ ಚೌಕಿಗಳು ನಾಶವಾದವು, BSFಗೆ ಯಾವುದೇ ಹಾನಿಯಾಗಲಿಲ್ಲ.
S-400 ಟ್ರಯಂಫ್ (ಭಾರತದಲ್ಲಿ "ಸುದರ್ಶನ ಚಕ್ರ") ರಷ್ಯಾದ ಅತ್ಯಾಧುನಿಕ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯಾಗಿದೆ. ಭಾರತವು 2018ರಲ್ಲಿ ₹35,000 ಕೋಟಿಗೆ ಐದು ಘಟಕಗಳನ್ನು ಖರೀದಿಸಿತು. ಇದು 400 ಕಿಮೀ ದೂರದ ಯುದ್ಧವಿಮಾನ, ಡ್ರೋನ್, ಕ್ಷಿಪಣಿಗಳನ್ನು ನಾಶಪಡಿಸಬಲ್ಲದು.
ಈ ಹಿಂದೆ ನಡೆಸಲಾದ ಉರಿ ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಕೋಟ್ ವೈಮಾನಿಕ ದಾಳಿಗೂ ಸಾಕ್ಷಿ ಕೇಳಿದ್ದ ಕಾಂಗ್ರೆಸ್ ಈಗ ʼಆಪರೇಷನ್ ಸಿಂದೂರ್ʼ ಕಾರ್ಯಾಚರಣೆಗೂ ಸೇನೆಯು ಸಾಕಷ್ಟು ಸಾಕ್ಷಿ ನೀಡಿದ್ದರೂ ಸಹ ತನ್ನ ನೀಚ ಬುದ್ಧಿ ಪ್ರದರ್ಶಿಸಿದೆ ಎಂದು ಬಿಜೆಪಿ ಕಿಡಿಕಾರಿದೆ.
ಭಾರತವು ಪಾಕಿಸ್ತಾನದಲ್ಲಿನ ಒಂಬತ್ತು ಪ್ರಮುಖ ಭಯೋತ್ಪಾದಕ ಶಿಬಿರಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಿತು. ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಶಿಬಿರಗಳನ್ನು ಗುರಿಯಾಗಿಸಿ, 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಲ್ಲಲಾಯಿತು.
PM Modi on Operation Sindoor : ಪುಲ್ವಾಮಾ ದಾಳಿಯ ನಂತರ, ಭಾರತವು ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದ ಭಯೋತ್ಪಾದಕ ಸ್ಥಳಗಳ ಮೇಲೆ ವಾಯುದಾಳಿ ನಡೆಸಿತು. ಇದೀಗ ಪ್ರಧಾನಿ ಮೋದಿ ಅವರು "ಆಪರೇಷನ್ ಸಿಂಧೂರ್" ಕುರಿತು ಅಚ್ಚರಿ ವಿಷಯ ಹೊರ ಹಾಕಿದ್ದಾರೆ.. ಮೋದಿ ಮಾತು ಪಾಕ್‌ಗೆ ಮತ್ತೇ ನುಂಗಲಾರದ ತುತ್ತಾಗಿದೆ..
Most Wanted Terrorist Killed In Operation Sindoor: ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ಮೇ 7 ರಂದು ನಡೆಸಿದ ವಿಶೇಷ ಕಾರ್ಯಾಚರಣೆ ಆಪರೇಷನ್ ಸಿಂಧೂರ್‌ನಲ್ಲಿ ಕೆಲ ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ. ಅವರಲ್ಲಿ ಮೊಹಮ್ಮದ್ ಯೂಸುಫ್ ಅಜರ್ ಕೂಡ ಸಾವನ್ನಪ್ಪಿದ್ದಾನೆ.
Operation Sindoor: ಪಹಲ್ಗಾಮ್ ನಡೆದ ದಾಳಿಗೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆ, ಪಾಕಿಸ್ತಾನಿ 9 ಉಗ್ರ ನೆಲೆಗಳ ಮೇಲೆ ದಾಳಿ ಮಾಡಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದು ಮುಗಿಸಿದೆ. ಇದರ ಬೆನ್ನಲ್ಲೆ ಪಾಕಿಸ್ತಾನಿ ಸುದ್ದಿ ವಾಹಿನಿ ನಿರೂಪಕಿಯೊಬ್ಬರ ವಿಡಿಯೋ ಒಂದು ಇದೀಗ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಫುಲ್ ಟ್ರೋಲ್ ಮಾಡುತ್ತಿದ್ದಾರೆ.
Operation Sindoor: ಪಹಲ್ಗಾಮ್ ನರಮೇಧಕ್ಕೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನಕ್ಕೆ ನುಗ್ಗಿ ಉಗ್ರರನ್ನು ಸದೆಬಡಿದಿದೆ. 'ಆಪರೇಷನ್ ಸಿಂಧೂರ್'ನಲ್ಲಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ನೆಲೆಯಾಗಿದ್ದ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದೆ.
Operation Sindoor: ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಒಳಗೆ ಆಳವಾದ ಭಯೋತ್ಪಾದಕ ನೆಲೆಗಳ ಮೇಲೆ ನಿಖರವಾದ ದಾಳಿ ನಡೆಸಲು ಭಾರತೀಯ ಸಶಸ್ತ್ರ ಪಡೆಗಳು ʻಸ್ಯೂಸೈಡ್ ಡ್ರೋನ್ʼಗಳನ್ನು ಬಳಸಿತ್ತು.
ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ನಿಖರ ದಾಳಿಗಳನ್ನು ನಡೆಸಿದೆ. ಈ ಕಾರ್ಯಾಚರಣೆಯು "ಗುರಿಯತ್ತ ತಿರುಗಿದ, ನಿಖರ ಮತ್ತು ಸಂಯಮಿತ" ಎಂದು ಸರ್ಕಾರ ವಿವರಿಸಿದ್ದು, ಪಾಕಿಸ್ತಾನದ ಯಾವುದೇ ಸೇನಾ ಸೌಲಭ್ಯಗಳನ್ನು ಗುರಿಯಾಗಿಸಲಾಗಿಲ್ಲ ಎಂದು ತಿಳಿಸಿದೆ.
Operation Sindoor: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದ್ದು, ಪಾಕಿಸ್ತಾನದಲ್ಲಿ 9 ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದ್ದು, ಇದೀಗ ಭಾರತದ ಹಲವು ಭಾಗಗಳಲ್ಲಿ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದೆ.
ಈ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ, ಆದರೆ ಸರ್ಕಾರವು ಇಂತಹ ಯಾವುದೇ ಸಲಹೆಯನ್ನು ನೀಡಿಲ್ಲ ಎಂದು ಪಿಐಬಿ ಸ್ಪಷ್ಟಪಡಿಸಿದೆ.
1971 ರ ಯುದ್ಧದ ನಂತರ ಇಂತಹ ದೊಡ್ಡ ಪ್ರಮಾಣದ ವ್ಯಾಯಾಮವು ಭಾರತದ ರಕ್ಷಣಾ ಕಾರ್ಯತಂತ್ರದಲ್ಲಿ ನಾಗರಿಕ ಮತ್ತು ಮಿಲಿಟರಿ ಸಿದ್ಧತೆಯ ಸಮನ್ವಯತೆಯನ್ನು ಒತ್ತಿಹೇಳುತ್ತದೆ. ಜನರ ಸಹಕಾರ ಮತ್ತು ಜಾಗೃತಿಯೊಂದಿಗೆ, ಈ ಡ್ರಿಲ್‌ಗಳು ತುರ್ತು ಸಂದರ್ಭಗಳಲ್ಲಿ ದೇಶದ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಬಹುದು
ಈ ಸೈನಿಕ ಯುದ್ಧಾಭ್ಯಾಸವು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸಾರನ್ ಕಣಿವೆಯಲ್ಲಿ ಏಪ್ರಿಲ್ 22, 2025ರಂದು ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ನಡೆಯುತ್ತಿದೆ. ಈ ದಾಳಿಯಲ್ಲಿ 26 ಜನರು, ಮುಖ್ಯವಾಗಿ ಪ್ರವಾಸಿಗರು ಮೃತಪಟ್ಟಿದ್ದರು.
ಸತತ 12ನೇ ದಿನವು ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ. ಗಡಿಯುದ್ದಕ್ಕೂ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಕುಪ್ವಾರ್, ಪೂಂಚ್, ಅಕ್ನೂರ್ ಪ್ರದೇಶದಲ್ಲಿ ಫೈರಿಂಗ್ ನಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.