ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಇನ್ನೂ 1.6 ಕೋಟಿ ರೈತರ ಖಾತೆಗೆ 7 ನೇ ಕಂತಿನ ಹಣ ತಲುಪಿಲ್ಲ. ಕೃಷಿ ಸಚಿವಾಲಯದ ಪ್ರಕಾರ, ಪಿಎಂ ಕಿಸಾನ್ ಯೋಜನೆಯ ಏಳನೇ ಕಂತಿನ ಹಣವನ್ನು ಮಾರ್ಚ್ 2021 ರೊಳಗೆ ಎಲ್ಲಾ ರೈತರ ಖಾತೆಗೆ ವರ್ಗಾಯಿಸಲಾಗುವುದು.
ಫೆಬ್ರವರಿ 1 ರಂದು ಸಾಮಾನ್ಯ ಬಜೆಟ್ ಮಂಡನೆಯಾಗಲಿದೆ. ಅಂತಹ ಪರಿಸ್ಥಿತಿಯಲ್ಲಿ, ಕೃಷಿಯ ವಿಷಯದಲ್ಲಿ ಈ ಬಜೆಟ್ ವಿಶೇಷವಾಗಲಿದೆ ಎಂದು ರೈತರು ಭಾವಿಸುತ್ತಾರೆ. ರೈತರಿಗೆ ನೀಡಲಾಗುತ್ತಿರುವ ಗೌರವದ ನಿಧಿಯನ್ನೂ ಹೆಚ್ಚಿಸಬಹುದು ಎಂಬ ಹೇಳಲಾಗುತ್ತಿದೆ.
ಪಿಎಂ ಕಿಸಾನ್ ಸಮ್ಮನ್ ನಿಧಿ (PM Kisan Yojana)ಯ ಏಳನೇ ಕಂತು ಇನ್ನೂ ಅನೇಕ ರೈತರಿಗೆ ದೊರೆತಿಲ್ಲ. ಪೋರ್ಟಲ್‌ನಿಂದ ಹಲವು ರೈತರ ಹೆಸರನ್ನು ಕೈಬಿಡಲಾಗಿದೆ. ಪೋರ್ಟಲ್‌ನಿಂದ ರೈತರ ಹೆಸರನ್ನು ತೆಗೆದುಹಾಕಲು ಬಹುಮುಖ್ಯ ಕಾರಣವೆಂದರೆ ತಪ್ಪಾದ ಮಾಹಿತಿ ಮತ್ತು ಡೇಟಾವನ್ನು ನವೀಕರಿಸದಿರುವುದು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಇರುವ ಕೋಟ್ಯಂತರ ರೈತರಿಗಾಗಿ ಅನೇಕ ಪ್ರಯೋಜನ ನೀಡುವ ಯೋಜನೆಗಳನ್ನು ಪ್ರಾರಂಭಿಸಿದ್ದಾರೆ. ಈ ಯೋಜನೆಗಳಲ್ಲಿ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕೂಡ ಒಂದು ಮಹತ್ವದ ಯೋಜನೆಯಾಗಿದೆ.
ಕೇಂದ್ರೀಯ ಬ್ಯಾಂಕ್ ಮಂಗಳವಾರ ಹೊರಡಿಸಿದ ಅಧಿಸೂಚನೆಯಲ್ಲಿ ಅಲ್ಪಾವಧಿಯ ಬೆಳೆ ಸಾಲ ಬಡ್ಡಿಗೆ ಎರಡು ಲಕ್ಷ ರೂಪಾಯಿಗಳವರೆಗೆ ಎರಡು ಶೇಕಡಾ (2%) ವಿನಾಯಿತಿ ಮತ್ತು ಪಿಆರ್‌ಐಗೆ ಮೂರು ಪ್ರತಿಶತದಷ್ಟು (3%) ಪ್ರೋತ್ಸಾಹವನ್ನು ಮುಂದುವರಿಸಲು ರೈತರಿಗೆ ಸೂಚಿಸಲಾಗಿದೆ.