ವಿಶ್ವಾಸಾರ್ಹ ಮೂಲಗಳ ಪ್ರಕಾರ, ಇಡೀ ವಿಚಾರಣೆಯ ವೇಳೆ, ಶಿಲ್ಪಾ ಶೆಟ್ಟಿ 3 ರಿಂದ 4 ಬಾರಿ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಇಡೀ ಪ್ರಕರಣದಿಂದಾಗಿ ತನ್ನ ಇಮೇಜ್ ಗೆ ಧಕ್ಕೆಯುಂಟಾಗಿದೆ ಎಂದು, ಶಿಲ್ಪಾ ಶೆಟ್ಟಿ ಅಪರಾಧ ವಿಭಾಗದ ಅಧಿಕಾರಿಗಳಿಗೆ ಹೇಳಿದ್ದಾರೆ.
Pornography Video Case: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧಿತನಾಗಿರುವ ಉದ್ಯಮಿ ರಾಜ್ ಕುಂದ್ರಾನನ್ನು (Raj Kundra) ಕರೆದುಕೊಂಡು ಮುಂಬೈ ಕ್ರೈಂ ಬ್ರಾಂಚ್ ಪೋಲೀಸರ ತಂಡ ಶಿಲ್ಪಾ ಶೆಟ್ಟಿ (Shilpa Shetty) ನಿವಾಸಕ್ಕೆ ತಲುಪಿದೆ.
Pornography Video Case - ತಮ್ಮ ಪತಿ ರಾಜ್ ಕುಂದ್ರಾ (Raj Kundra) ಬಂಧನದ ಬಳಿಕ ಇದೆ ಮೊದಲ ಬಾರಿಗೆ ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ (Shilpa Shetty Kundra), ತಮ್ಮ ಮೌನ ಮುರಿದಿದ್ದಾರೆ ಮತ್ತು ಇದಕ್ಕಾಗಿ ಅವರು ಸಾಮಾಜಿಕ ಮಾಧ್ಯಮದ ನೆರವು ಪಡೆದುಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪುಸ್ತಕವೊಂದರ ಪುಟವನ್ನು ಹಂಚಿಕೊಂಡಿರುವ ಶಿಲ್ಪಾ, ಜೀವನದಲ್ಲಿ ಎದುರಾಗುವ ಪ್ರತಿಯೊಂದು ಸವಾಲಿಗೆ ತಾವು ಸಿದ್ಧರಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಉಮೇಶ್ ಕಾಮತ್ ನೇರವಾಗಿ ರಾಜ್ ಕುಂದ್ರಾನನ್ನು ಉದ್ದೇಶಿಸಿ ಬರೆದಿರುವ ಇ-ಮೇಲ್ ದೊರೆತಿದೆ. ಇದರಲ್ಲಿ ತಾನು ಇನ್ ವಾಯ್ಸ್ ಕಳುಹಿಸಿದ್ದು, ಅದನ್ನು ಪರಿಶೀಲಿಸುವಂತೆ ಉಮೇಶ್ ಕಾಮತ್ ರಾಜ್ ಕುಂದ್ರಾಗೆ ತಿಳಿಸಿದ್ದಾರೆ.
Raj Kundra WhatsApp Chat: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯವರ (Shilpa Shetty) ಪತಿ ರಾಜ್ ಕುಂದ್ರಾ (Raj Kundra) ಅವರ ಹೊಸ ವಾಟ್ಸಾಪ್ ಚಾಟ್ ಬಹಿರಂಗಗೊಂಡಿದೆ. ಈ ಚಾಟ್ ನಲ್ಲಿ ಪೊಲೀಸರು ಕ್ರಮಕೈಗೊಳ್ಳುವ ಕುರಿತು ರಾಜ್ ಕುಂದ್ರಾಗೆ ಮೊದಲೇ ತಿಳಿದಿತ್ತು ಮತ್ತು ಅವರು ಇದೇ ಕಾರಣದಿಂದ ಪ್ಲಾನ್ B ಸಿದ್ಧಪಡಿಸಿದ್ದರು ಎನ್ನಲಾಗಿದೆ.
ಉದ್ಯಮಿ ಮತ್ತು ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಅವರನ್ನು ಸೋಮವಾರ ರಾತ್ರಿ ಮುಂಬೈ ಪೊಲೀಸರ ಅಪರಾಧ ವಿಭಾಗ ಬಂಧಿಸಿ ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಕೆಲವು ಆ್ಯಪ್ಗಳ ಮೂಲಕ ಪ್ರಕಟಿಸಿದ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಫೆಬ್ರವರಿ 15 ರಂದು ಸರೊಗಸಿ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ ಸ್ಟಾರ್ ದಂಪತಿಗಳಾದ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಅವರು ಐದು ವರ್ಷಗಳ ಕಾಲ ಎರಡನೇ ಮಗುವಿಗೆ ಪ್ರಯತ್ನಿಸುತ್ತಿದ್ದರು. ಮುಂಬೈ ಮಿರರ್ ಜೊತೆ ಮಾತನಾಡಿದ ನಟಿ, ತಾನು ಯಾವಾಗಲೂ ಮಗಳಿಗಾಗಿ ಪ್ರಾರ್ಥಿಸುತ್ತಿದ್ದೆ ಮತ್ತು ಕೇವಲ 21 ವರ್ಷದವಳಿದ್ದಾಗ ಮಗಳಿಗೆ ಸಮಿಷಾ ಎಂದು ಹೆಸರಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.