India Lockdown: ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಭಾರತದಲ್ಲಿ ಉದ್ವಿಗ್ನತೆ ಭುಗಿಲೆದ್ದಿದೆ. ಗ್ಯಾಸ್ ಮತ್ತು ಪೆಟ್ರೋಲ್ ಕೊರತೆಯ ನಡುವೆ ಮತ್ತೆ ಲಾಕ್ಡೌನ್ ಹೇರಲಾಗುತ್ತಿದೆ ಎಂಬ ಸುದ್ದಿ ವೇಗ ಪಡೆಯುತ್ತಿದೆ. ಈ ಬಗ್ಗೆ ಕೇಂದ್ರದ ನಿರ್ಧಾರವೇನು? ಇಲ್ಲಿದೆ ಸಂಪೂರ್ಣ ವಿವರ..
Neeraj Chopra : ಭಾರತದ ಸ್ಟಾರ್ ಒಲಿಂಪಿಕ್ ಅಥ್ಲೀಟ್ ನೀರಜ್ ಚೋಪ್ರಾ ಅವರಿಗೆ ಬುಧವಾರ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಪ್ರದಾನ ಮಾಡಲಾಯಿತು. ಕ್ರೀಡೆಯಲ್ಲಿನ ಅವರ ಅದ್ಭುತ ಸಾಧನೆ ಮತ್ತು ಯುವಕರಿಗೆ ಸ್ಫೂರ್ತಿ ನೀಡುವುದಕ್ಕಾಗಿ ನೀರಜ್ ಅವರಿಗೆ ಈ ಗೌರವವನ್ನು ನೀಡಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರ ಸಮ್ಮುಖದಲ್ಲಿ ದೆಹಲಿಯಲ್ಲಿ ಅವರಿಗೆ ಈ ಹುದ್ದೆಯನ್ನು ಪ್ರದಾನ ಮಾಡಲಾಯಿತು.
ಕೆಲವು 'ಬಾಸ್ ಗಳಿಗೆಭಾರತದ ತೀವ್ರಗತಿಯ ಬೆಳವಣಿಗೆಯನ್ನು ಸಹಿಸಲಾಗುತ್ತಿಲ್ಲ. 'ನಾವೇ ಎಲ್ಲರಿಗೂ ಬಾಸ್' ಎಂದು ಭಾವಿಸುವವರು, ಭಾರತ ಇಷ್ಟು ವೇಗವಾಗಿ ಬೆಳೆಯುತ್ತಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ," ಎಂದು ಸಿಂಗ್ ಸಭೆಯೊಂದರಲ್ಲಿ ತಿಳಿಸಿದರು.
ಎಚ್‌ಎಎಲ್ ಕಾರ್ಖಾನೆಯನ್ನು ಆಂಧ್ರ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ನೀತಿ ಆಯೋಗದ ಸಭೆಯಲ್ಲಿ ಸಿಎಂ ಚಂದ್ರಬಾಬು ನಾಯ್ಡು ಅವರು ಕೋರಿದ್ದಾರೆ ಎನ್ನಲಾಗಿದೆ. ಇದು ಸರಿಯಾದ ವಿಧಾನವಲ್ಲ ಎಂದು ಸಚಿವ ಎಂ. ಬಿ. ಪಾಟೀಲ್ ಮಾತನಾಡಿದರು..
ರಕ್ಷಣಾ ಸಚಿವ ರಾಜನಾಥ್ ಸಿಂಗ್, IMF ಪಾಕಿಸ್ತಾನಕ್ಕೆ ನೀಡಿರುವ 1 ಬಿಲಿಯನ್ ಡಾಲರ್ ಸಾಲವನ್ನು ಮರುಪರಿಶೀಲಿಸಬೇಕೆಂದು ಒತ್ತಾಯಿಸಿದರು. "ಪಾಕಿಸ್ತಾನ ಈ ಹಣವನ್ನು ಭಯೋತ್ಪಾದನೆಗೆ ಬಳಸಬಹುದು" ಎಂದು ಅವರು ಎಚ್ಚರಿಸಿದರು.
ಪಹಲಗಾಮ್ ದಾಳಿಯನ್ನು ಕೇವಲ ಭಯೋತ್ಪಾದಕ ಕೃತ್ಯವಾಗಿ ಅಲ್ಲ, ಭಾರತದ ಆತ್ಮದ ಮೇಲಿನ ದಾಳಿಯಾಗಿ, ನಾಗರಿಕರನ್ನು ಅವರ ಧರ್ಮದ ಆಧಾರದ ಮೇಲೆ ಗುರಿಯಾಗಿಸಿ ದೇಶದ ಏಕತೆಯನ್ನು ಒಡೆಯುವ ಪ್ರಯತ್ನವಾಗಿ ಚಿತ್ರಿಸಿದರು.
ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆ ನೀತಿಯನ್ನು ಪುನರುಚ್ಚರಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉರಿ, ಪುಲ್ವಾಮಾ ಮತ್ತು ಪಹಲ್ಗಾಮ್ ದಾಳಿಗಳನ್ನು ಭಾರತದ ನಿರ್ಣಾಯಕ ಕ್ರಮದ ಪುರಾವೆಯಾಗಿ ಉಲ್ಲೇಖಿಸಿದ್ದಾರೆ.
"ಆಪರೇಷನ್ ಸಿಂದೂರ್ ಭಾರತದ ರಾಜಕೀಯ, ಸಾಮಾಜಿಕ, ಕಾರ್ಯತಂತ್ರದ ದೃಢತೆಯ ಸಂಕೇತ. ಭಯೋತ್ಪಾದನೆ ವಿರುದ್ಧ ಭಾರತದ ಅಚಲ ನಿರ್ಧಾರ, ಸೇನಾ ಸಾಮರ್ಥ್ಯವನ್ನು ತೋರಿಸಿದ ಈ ಕಾರ್ಯಾಚರಣೆ, ಗಡಿಯಾಚೆಗಿನ ಭೂಮಿಯೂ ಭಯೋತ್ಪಾದಕರಿಗೆ ಸುರಕ್ಷಿತವಲ್ಲ ಎಂಬ ಸಂದೇಶ ನೀಡಿದೆ," ಎಂದು ಅವರು ಎಕ್ಸ್‌ನಲ್ಲಿ ಹೇಳಿದ್ದಾರೆ.
Operation Sindoor: ಭಾರತ ಸೇನೆ, ಪಾಕಿಸ್ತಾನ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿ, ಉಗ್ರರನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದೆ. ಇದೀಗ ಇದರ ಬೆನ್ನಲ್ಲೆ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ.
ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಗುಂಡು ಹಾರಿಸಿ 28 ಜನ ಅಮಾಯಕ ಪ್ರವಾಸಿಗರ ಹತ್ಯೆ ಮಾಡಿದ್ದಾರೆ. ಲಷ್ಕರ್-ಎ-ತೊಯ್ಬಾ ಜೊತೆ ಸಂಯೋಜಿತವಾಗಿರುವ ಟಿಆರ್‌ಎಫ್ ಈ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಶೀಘ್ರದಲ್ಲೇ ಅವರಿಗೆ ಸೂಕ್ತ ಉತ್ತರ ನೀಡಲಾಗುವುದು ಎಂದು ದೇಶಕ್ಕೆ ಭರವಸೆ ನೀಡಲು ಬಯಸುತ್ತೇನೆ. ನಾವು ಯಾರನ್ನೂ ಬಿಡುವುದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಮೊನ್ನೆ ಮೊನ್ನೆಯಷ್ಟೇ, ಬುಧವಾರ (ಜುಲೈ 10) ತಮ್ಮ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ರಾಜನಾಥ್ ಸಿಂಗ್ (Rajnath Singh), ಮೋದಿ ಕ್ಯಾಬಿನೆಟ್ ನಲ್ಲಿ 2014ರಿಂದಲೂ ಕೇಂದ್ರ ಸಚಿವರಾಗಿದ್ದಾರೆ.
ನೀಟ್ ಅಕ್ರಮದ ಬಗ್ಗೆ 1ದಿನ ಪ್ರತ್ಯೇಕ ಚರ್ಚೆಗೆ ನಾವು ಅವಕಾಶ ಕೇಳುತ್ತಿದ್ದೇವೆ. ಇದು ಅತ್ಯಂತ ಪ್ರಮುಖ ವಿಷಯ. 2 ಕೋಟಿಗೂ ಅಧಿಕ ವಿದ್ಯಾರ್ಥಿಗಳಿಗೆ ಇದರಿಂದ ಅನಾನುಕೂಲವಾಗಿದೆ. 70 ಕಡೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಈ ಬಗ್ಗೆ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡಿದರೆ ನಮಗೆ ಸಂತಸವಾಗುತ್ತದೆ' ಎಂದು ರಾಹುಲ್ ಮನವಿ ಮಾಡಿಕೊಂಡಿದ್ದಾರೆ.
Modi Cabinet: ಸತತ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಪ್ರಧಾನಿ ಮೋದಿ ಇಂದು ಎನ್ ಡಿ ಎ ಮೈತ್ರಿಕೂಟ ಸದಸ್ಯರ ಸಭೆಯನ್ನು ನಡೆಸಿ 71 ಸಚಿವರ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.