IND vs AUS test series 2023: ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದರೆ, ಅವರು ಸರಣಿಯ ಫಲಿತಾಂಶವನ್ನು ನಿರ್ಧರಿಸಬಹುದು ಎಂದು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ನಂಬಿದ್ದಾರೆ. ಅಲ್ಲದೆ, ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್ ಮಾಡುವಾಗ ಅಶ್ವಿನ್ ಅವರ ಯೋಜನೆಗಳನ್ನು ತಿರುಗಿಸದಂತೆ ಶಾಸ್ತ್ರಿ ಎಚ್ಚರಿಸಿದ್ದಾರೆ
ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ದೊಡ್ಡ ಹೇಳಿಕೆಯ ಮೂಲಕ ಇದ್ದಕ್ಕಿದ್ದಂತೆ ಸಂಚಲನ ಮೂಡಿಸಿದ್ದಾರೆ. ರವಿಶಾಸ್ತ್ರಿ ಪ್ರಕಾರ, ಪ್ರಸ್ತುತ ಹಾರ್ದಿಕ್ ಪಾಂಡ್ಯ ನಾಯಕತ್ವದ ಟಿ-20 ತಂಡವು ರೋಹಿತ್ ಶರ್ಮಾ ನಾಯಕತ್ವದ ಹಿರಿಯ ಟೀಂ ಇಂಡಿಯಾಕ್ಕಿಂತ ಉತ್ತಮವಾಗಿದೆಯಂತೆ.
ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಮ್ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ಈಗ ತಂಡಕ್ಕೆ ಹೊಸ ನಾಯಕನ ಅಗತ್ಯವಿದೆ ಈ ಸಂದರ್ಭದಲ್ಲಿ ನೂತನ ನಾಯಕನ ಹೆಸರು ಹಾರ್ದಿಕ್ ಪಾಂಡ್ಯ ಆಗಿದ್ದಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಟಿ20 ವಿಶ್ವಕಪ್ ಸೆಮಿಫೈನಲ್‌ವರೆಗೆ ಸೂರ್ಯಕುಮಾರ್ ಯಾದವ್ ಏಕೈಕ ಸ್ಟಾರ್ ಆಟಗಾರನಾಗಿದ್ದರು. ಸೂರ್ಯಕುಮಾರ್ ಯಾದವ್ 6 ಇನ್ನಿಂಗ್ಸ್‌ಗಳಲ್ಲಿ 239 ರನ್ ಗಳಿಸಿ, ತಮ್ಮ 360 ಡಿಗ್ರಿ ಆಟದಿಂದ ಎಲ್ಲರನ್ನೂ ಆಕರ್ಷಿಸಿದರು.
2007 ರಲ್ಲಿ ಭಾರತವು ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು, ಆದರೆ ಅಂದಿನಿಂದ ಟೀಂ ಇಂಡಿಯಾ ಈ ಪಂದ್ಯಾವಳಿಯಲ್ಲಿ ಅಂತ ಹೇಳಿಕೊಳ್ಳುವಂತಹ ಪ್ರದರ್ಶನವೇನು ನೀಡಿಲ್ಲ.
ಇದೇ ವೇಳೆ ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ನಾಯಕ ರೋಹಿತ್ ಶರ್ಮಾ ಅವರಿಗೆ ಸಲಹೆಯೊಂದನ್ನು ನೀಡಿದ್ದಾರೆ. 15 ವರ್ಷಗಳ ನಂತರ ಟೀಂ ಇಂಡಿಯಾಗೆ ವಿಶ್ವಕಪ್ ಗೆಲ್ಲುವ ಉತ್ತಮ ಅವಕಾಶವಿದೆ ಎಂದೂ ಅವರು ಹೇಳಿದ್ದಾರೆ.
ಶುಭ್‌ಮನ್ ಗಿಲ್ ಪಂದ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರವಿಶಾಸ್ತ್ರಿ ಪೆವಿಲಿಯನ್‌ಗೆ ಬರುತ್ತಿದ್ದಂತೆ ಕ್ಲಾಸ್ ತೆಗೆದುಕೊಂಡಿದ್ದಾರೆ. "ಆಫ್ ಸೈಡ್ ಹೊರಗೆ ಹೋಗುತ್ತಿದ್ದ ಚೆಂಡನ್ನು ಕಟ್ ಮಾಡುವ ಧಾವಂತದಲ್ಲಿ ಗಿಲ್ ಔಟಾಗಿದ್ದಾರೆ" ಎಂದು ಹೇಳಿದರು.
ಭಾರತ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಳ್ಳಲು ಮಾಜಿ ಕೋಚ್ ರವಿಶಾಸ್ತ್ರಿ ಕಾರಣ ಎಂದು ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಮತ್ತು ಬ್ಯಾಟರ್ ರಶೀದ್ ಲತಿದ್ ಅಭಿಪ್ರಾಯಪಟ್ಟಿದ್ದಾರೆ.
ಬಹಳ ದಿನಗಳಿಂದ ಟೀಂ ಇಂಡಿಯಾ ಈ ರೀತಿಯ ಆಟಗಾರನಿಗಾಗಿ ಎದುರು ನೋಡುತ್ತಿತ್ತು. ಸದ್ಯ, ಟೀಂ ಇಂಡಿಯಾಗೆ ಹೊಸ ಮ್ಯಾಚ್ ವಿನ್ನರ್ ಸಿಕ್ಕಿದ್ದು ಆಟಗಾರರಲ್ಲಿ ಹೊಸ ಹುರುಪು ತಂದಿದೆ. ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳುವ ಮೊದಲು, ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿ ಭಾರತೀಯ ಕ್ರಿಕೆಟ್ ಆಡಳಿತ ಅವರ ಕೈಯಲ್ಲಿತ್ತು. ಹೀಗಾಗಿ, ಈ ಆಟಗಾರನ ವೃತ್ತಿಜೀವನವು ಬಹುತೇಕ ಅಂತ್ಯದಲ್ಲಿತ್ತು.
ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ರಣಜಿ ಟ್ರೋಫಿಯನ್ನು ಮೊದಲೇ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳದ ಬಿಸಿಸಿಐ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಭಾರತ ತಂಡದ ಪ್ರದರ್ಶನ ಇದ್ದಕ್ಕಿದ್ದಂತೆ ಹೇಗೆ ಕುಸಿಯುತ್ತದೆ? 5 ವರ್ಷಗಳಿಂದ ಟೀಂ ಇಂಡಿಯಾ ವಿಶ್ವದ ನಂ.1 ತಂಡವಾಗಿತ್ತು. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಮತ್ತು ಈ ವೈಫಲ್ಯವು ತಾತ್ಕಾಲಿಕ ಅಂತಾ ಶಾಸ್ತ್ರಿ ಹೇಳಿದ್ದಾರೆ.
ಮಾಧ್ಯಮವೊಂದರಲ್ಲಿ ಮಾತನಾಡಿದ ರವಿ ಶಾಸ್ತ್ರಿ , ಟೆಸ್ಟ್ ಮತ್ತು ODI-T20 ಕ್ರಿಕೆಟ್ ಗೆ ಪ್ರತ್ಯೇಕ ನಾಯಕನನ್ನು ಹೊಂದುವುದು ವಿರಾಟ್ ಮತ್ತು ರೋಹಿತ್ ಇಬ್ಬರ ದೃಷ್ಟಿಯಿಂದಲೂ ಒಳ್ಳೆಯದು ಎಂದು ಹೇಳಿದ್ದಾರೆ.
ಶಾಸ್ತ್ರಿ ಅವರು ತಮ್ಮ ಸ್ಥಾನವನ್ನು ತೊರೆದ ದಿನದಿಂದಲೂ ಅವರು ಆಯ್ಕೆಗಾರರು, ತಂಡದ ಡ್ರೆಸ್ಸಿಂಗ್ ರೂಮ್ ಮತ್ತು ಬೋರ್ಡ್ ಬಗ್ಗೆ ದೊಡ್ಡ, ದೊಡ್ಡ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ಶಾಸ್ತ್ರಿ ಕೂಡ 2019ರ ವಿಶ್ವಕಪ್(2019 World Cup)ನಲ್ಲಿ ಭಾರತದ ಸೋಲಿನ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ.
ನಿರ್ದಿಷ್ಟ ಜನರು ನನಗೆ ಕೆಲಸ ಸಿಗಬಾರದೆಂದು ಪ್ರಯತ್ನ ಪಟ್ಟಿದ್ದರು ಎಂಬುದನ್ನು ನಾನು ಹೇಳಲೇಬೇಕು ಎಂದು ರವಿಶಾಸ್ತ್ರಿ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಭಾರತ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದ ರವಿಶಾಸ್ತ್ರಿ, ಪ್ರಸ್ತುತ ಭಾರತದ ಏಕದಿನ ಮತ್ತು ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಸೀಮಿತ ಓವರ್‌ಗಳ ನಾಯಕತ್ವವನ್ನು ಶಾಶ್ವತವಾಗಿ ತ್ಯಜಿಸಬಹುದು ಮತ್ತು ತಮ್ಮ ಬ್ಯಾಟಿಂಗ್ ಮೇಲೆ ಸಂಪೂರ್ಣವಾಗಿ ಗಮನಹರಿಸಬಹುದು ಎಂದು ಬಹಿರಂಗಪಡಿಸಿದ್ದಾರೆ.