RSS On United India - ಪುಸ್ತಕ ಬಿಡುಗಡೆಯ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (RSS Chief Mohan Bhagwat), ಭಾರತದಿಂದ ಬೇರ್ಪಟ್ಟ ಪಾಕಿಸ್ತಾನದಂತಹ ದೇಶಗಳು ಇಂದು ಬಿಕ್ಕತ್ತಿನಲ್ಲಿವೆ. ಇನ್ನು ಮುಂದೆ ತಮ್ಮನ್ನು ತಮ್ಮನ್ನು ಭಾರತದ ಭಾಗವೆಂದು ಕರೆದುಕೊಳ್ಳದವರು, ಭಾರತದಿಂದ ಬೇರ್ಪಟ್ಟ ಪ್ರದೇಶಗಳಿಗೆ ಹೋದವರು ಭಾರತದೊಂದಿಗೆ ಮರು ಸಂಪರ್ಕ ಸಾಧಿಸುವುದು ಬಹಳ ಮುಖ್ಯವಾಗಿದೆ ಎಂದು ಮೋಹನಜೀ ಭಾಗವತ್ ಹೇಳಿದ್ದಾರೆ.
ಯಡಿಯೂರಪ್ಪ ಅವರೇ ಸಿ.ಎಂ ಆಗಿ ಮುಂದುವರೆಯುತ್ತಾರೆ ಎಂದು ಅಮಿತ್ ಶಾ ಹೇಳಿರುವುದು ಬರೀ ಬಾಯಿಮಾತು. ಆರ್.ಎಸ್.ಎಸ್ ನಾಯಕರು ಹೇಳುವ ಪ್ರಕಾರ ಏಪ್ರಿಲ್ ನಂತರ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸ್ತಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.
ನಾನು ಸಗಣಿ ಎತ್ತಿದ್ದೇನೆ, ಗಂಜಲ ಬಾಚಿದ್ದೇನೆ. ಇವರು ಯಾವತ್ತಾದ್ರೂ ಸಗಣಿ ಎತ್ತಿದ್ದಾರಾ? ಗೋವನ್ನು ಪೂಜೆ ಮಾಡುತ್ತೇವೆ ಎನ್ನುತ್ತಾರೆ. ಆದರೆ ಇವರು ಹಸುಗಳಿಗೆ ಹುಲ್ಲು ಹಾಕಿದ್ದಾರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
AIMIM ಮುಖ್ಯಸ್ಥ ಅಸದುದ್ದೀನ್ ಒವೈಸಿ ಹಿಂದುತ್ವವನ್ನು ಗುರಿಯಾಗಿಸಿ ವಿವಾದಾತ್ಮಕ ಟಿಪ್ಪಣಿಯೊಂದನ್ನು ಮಾಡಿದ್ದಾರೆ. ಕೇವಲ ಒಂದೇ ಸಮುದಾಯದ ಬಳಿ ರಾಜಕೀಯ ಶಕ್ತಿ ಇರಬೇಕು ಎಂಬ ಸುಳ್ಳಿನ ಆಧಾರದ ಮೇಲೆ ಹಿಂದುತ್ವ ನಿರ್ಮಾಣಗೊಂಡಿದೆ. ಅಷ್ಟೇ ಅಲ್ಲ ತಮ್ಮ ವಿವಾದಾತ್ಮಕ ಟ್ವೀಟ್ ನಲ್ಲಿ RSS ಮೇಲೂ ಕೂಡ ಟಿಪ್ಪಣಿ ಮಾಡಿದ್ದಾರೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾರತೀಯ ಜನತಾ ಪಕ್ಷ (BJP) ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ಗಳನ್ನು ಮತ್ತೊಮ್ಮೆ ಗುರಿಯಾಗಿಸಿದ್ದಾರೆ. ಭಾರತದಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಗಳು ಫೇಸ್‌ಬುಕ್ ಮತ್ತು ವಾಟ್ಸಾಪ್ ಅನ್ನು ನಿಯಂತ್ರಿಸುತ್ತಿವೆ ಎಂದು ರಾಹುಲ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಅವುಗಳ ಮೂಲಕ ಫೇಕ್ ನ್ಯೂಸ್ ಹಾಗೂ ದ್ವೇಷಗಳನ್ನು ಹಬ್ಬಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ RSS ಪ್ರಮುಖ ಮೋಹನ್ ಭಾಗವತ್, "ನಾವು ಇಂದಿನಿಂದ ಗಾಂಧೀಜಿಯವರ ಪ್ರಾಮಾಣಿಕತೆಯ ಪಾಠವನ್ನು ಪ್ರಾರಂಭಿಸಬೇಕು. ಪ್ರಾಮಾಣಿಕತೆ ಅತ್ಯುತ್ತಮ ನೀತಿಯಾಗಿದೆ." ಎಂದಿದ್ದಾರೆ.
ರಾಜಕೀಯ ಹೋರಾಟಗಳು ನಡೆಯುತ್ತಲೇ ಇರಲಿವೆ ಆದರೆ, ಈ ಹೋರಾಟಗಳನ್ನು ನಾವು ಹಿಂದೂಗಳ ಜೊತೆ ಜೋಡಿಸಬಾರದು. ಸಾಕಷ್ಟು ಹಿಂದೂ ಜನರು ದೇವಸ್ಥಾನಕ್ಕೆ ಹೋಗುವುದಿಲ್ಲ. ಆದರೂ ಸಹಿತ ಅವರು ಹಿಂದುಗಳೇ ಆಗಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ದೇಶದ ಬೆಳೆಯುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವ ಕಾನೂನುಗಾಗಿ ಒತ್ತಾಯಿಸಿದ್ದಾರೆ, ಈ ನಿಟ್ಟಿನಲ್ಲಿ ಸಂಸತ್ತಿನಲ್ಲಿ ಶಾಸನವನ್ನು ತರಬೇಕು ಎಂಬ ಚರ್ಚೆಯನ್ನು ಪುನರುಚ್ಚರಿಸಿದ್ದಾರೆ.