ಇಮ್ರಾನ್ ಖಾನ್‌ನಿಂದ ವಾಸಿಮ್ ಅಕ್ರಮ್ ಮತ್ತು ಜಹೀರ್ ಖಾನ್‌ನಿಂದ ವಾಕರ್ ಯೂನಿಸ್‌ರವರೆಗೆ ರಿವರ್ಸ್ ಸ್ವಿಂಗ್ ಎನ್ನುವುದು ಬೌಲರ್‌ಗಳನ್ನು ದಂತಕಥೆಗಳನ್ನಾಗಿ ಪರಿವರ್ತಿಸಿದ ಒಂದು ಕಲೆ. ವಿಶ್ವ ಕ್ರಿಕೆಟ್‌ನ ಕೆಲವು ದೊಡ್ಡ ಸೀಮರ್‌ಗಳು ತಮ್ಮ ಶಸ್ತ್ರಾಗಾರದಲ್ಲಿ ರಿವರ್ಸ್ ಸ್ವಿಂಗ್ ಅನ್ನು ಬಳಸಿಕೊಂಡಿದ್ದಾರೆ, ಏಕೆಂದರೆ ಇದು ಎದುರಾಳಿ ಬ್ಯಾಟ್ಸ್ಮನ್ ನ್ನು ಸುಲಭವಾಗಿ ಕಟ್ಟಿಹಾಕಬಲ್ಲದು.
ನವದೆಹಲಿ: ಕರೋನವೈರಸ್ ಲಾಕ್‌ಡೌನ್‌ಗಳಿಂದಾಗಿ 116 ದಿನಗಳ ಸುದೀರ್ಘ ಅವಧಿಯ ನಂತರ ಕ್ರಿಕೆಟ್ ಮರಳಲು ಸಜ್ಜಾಗಿದೆ. ಸೌತಾಂಪ್ಟನ್‌ನ ರೋಸ್ ಬೌಲ್ ಕ್ರಿಕೆಟ್ ಮೈದಾನದಲ್ಲಿ ಬುಧವಾರ ಪ್ರಾರಂಭವಾಗುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಜೇಸನ್ ಹೋಲ್ಡರ್ ಅವರ ಕೆರಿಬಿಯನ್ ತಂಡದ ವಿರುದ್ಧ ಜೋ ರೂಟ್ ಅನುಪಸ್ಥಿತಿಯಲ್ಲಿ ಬೆನ್ ಸ್ಟೋಕ್ಸ್ ತವರು ತಂಡವನ್ನು ಮುನ್ನಡೆಸಲಿದ್ದಾರೆ.
ಭಾರತದ ಮಾಜಿ ಸ್ಟಾರ್ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ( Yuvraj Singh) ಅವರು ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ (Sachin Tendulkar) ಅವರೊಂದಿಗಿನ ಮೊದಲ ಭೇಟಿಯನ್ನು ನೆನಪಿಸಿಕೊಂಡರು ಮತ್ತು ಅವರು ದೇವರೊಂದಿಗೆ ಕೈಕುಲುಕಿದಂತೆ ಭಾಸವಾಗುತ್ತಿದೆ ಎಂದು ಹೇಳಿದರು.
ರಾಹುಲ್ ದ್ರಾವಿಡ್ (Rahul Dravid) ಅವರು ತಮ್ಮ ಫ್ರಂಟ್ ಪೂಟ್ ರಕ್ಷಣಾತ್ಮಕ ಹೆಸರುವಾಸಿ ಇದೇ ಕಾರಣಕ್ಕಾಗಿ ಅವರನ್ನು ವಾಲ್ ಎಂದು ಕರೆಯಲಾಗುತ್ತದೆ.ಅದರಲ್ಲೂ ಅವರು ತಮ್ಮ ಸ್ವೇರ್ ಕಟ್ ಗಳ ಮೂಲಕವೇ ಹೆಸರು ವಾಸಿಯಾಗಿದ್ದರು.
ಪಾಕಿಸ್ತಾನದ ಮಾಜಿ ನಾಯಕ ಎಡಗೈ ವೇಗಿ ವಾಸಿಮ್ ಅಕ್ರಮ್ ( Wasim Akram) ತಾವು ಬೌಲ್ ಮಾಡಿದ ಅಥವಾ ತಮ್ಮ ಜೊತೆಯಲ್ಲಿ ಆಡಿದ ಐದು ಅಗ್ರ ಬ್ಯಾಟ್ಸಮನ್ ಗಳ ಕುರಿತಾಗಿ ಟಿಪ್ಪಣಿ ನೀಡಿದ್ದಾರೆ.
ಭಾರತವು ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಮತ್ತು ವಿರಾಟ್ ಕೊಹ್ಲಿಯಂತಹ ಅಸಾಮಾನ್ಯ ಬ್ಯಾಟ್ಸ್‌ಮನ್‌ಗಳನ್ನು ಉತ್ಪಾದಿಸಿದೆ. ಈ ಮೂವರು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ಕ್ರಿಕೆಟ್ ಜಗತ್ತನ್ನು ಆಳಿದ್ದಾರೆ. ಈ ಮೇಲೆ ಪ್ರಸ್ತಾಪಿಸಿದ ಮೂವರಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ರನ್ನು ಆಯ್ಕೆ ಮಾಡಲು ಕೇಳಿದಾಗ, ಭಾರತದ ಮಾಜಿ ಆಟಗಾರ ಚೇತನ್ ಶರ್ಮಾ ಇತರ ಇಬ್ಬರು ಶ್ರೇಷ್ಠ ಆಟಗಾರರ ನಡುವೆ ಸುನಿಲ್ ಗವಾಸ್ಕರ್ ಅವರನ್ನು ಆಯ್ಕೆ ಮಾಡಿದರು.
ಇಂದು ವಿರಾಟ್ ಕೊಹ್ಲಿಯನ್ನು ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ, ಆದರೆ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್‌ನಲ್ಲಿ ಸಮಸ್ಯೆಗಳಿದ್ದ ಸಮಯವೂ ಇತ್ತು ಎಂದು ನಿಮಗೆ ತಿಳಿದಿದೆಯೇ.
2010 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ತೆಂಡೂಲ್ಕರ್ ತಮ್ಮ ಚೊಚ್ಚಲ ಏಕದಿನ ದ್ವಿಶತಕ ಬಾರಿಸಿದರು ಆದರೆ ವೇಗದ ಬೌಲರ್ ಡೇಲ್ ಸ್ಟೇನ್ ಅವರು ಸಚಿನ್ 190 ರನ್ ಗಳಿಸಿದ ಸಂದರ್ಭದಲ್ಲಿ ಅಂಪೈರ್ ಔಟ್ ಕೊಡಲಿಲ್ಲ ಎಂದು ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ನಡುವೆ ಹೋಲಿಕೆ ಮಾಡಲು ಪ್ರಯತ್ನಿಸಿರುವ ಪಾಕಿಸ್ತಾನದ ವಾಸಿಮ್ ಅಕ್ರಂ ಈ ಇಬ್ಬರೂ ಆಟಗಾರು ಭಿನ್ನ ಆಟದ ನಡೆಯನ್ನು ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಮತ್ತು ಪಾಕಿಸ್ತಾನವು ಹಲವು ವರ್ಷಗಳಲ್ಲಿ ತೀವ್ರ ಕ್ರಿಕೆಟಿಂಗ್ ಪೈಪೋಟಿಗೆ ಸಾಕ್ಷಿಯಾಗಿದೆ. ಇಂತಹ ಸಂದರ್ಭದಲ್ಲಿ ಭಾರತದ ಸಚಿನ್ ತೆಂಡೂಲ್ಕರ್ ಪಾಕಿಸ್ತಾನದ ವಿರುದ್ಧ ಅತ್ಯದ್ಬುತ ಪ್ರದರ್ಶನವನ್ನು ನೀಡಿದ್ದಾರೆ.
ಭಾರತದ ಬ್ಯಾಟಿಂಗ್ ತಂಡವ ಆಟದ ಎರಡೂ ಸ್ವರೂಪಗಳಲ್ಲಿ ವಿಶ್ವದ ಪ್ರಬಲ ಆಟಗಾರರನ್ನು ಹೊಂದಿತ್ತು,ಈ ಯುಗದಲ್ಲಿ ಸೆಹ್ವಾಗ್ ಕೂಡ ಭಾರತ ತಂಡದ ಭಾಗವಾಗಿದ್ದರು. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ವಿ.ವಿ.ಎಸ್. ಲಕ್ಷ್ಮಣ್ ಅವರಂತೆಯೇ ತಮ್ಮದೇ ಆದ ರೀತಿಯಲ್ಲಿ ಭಿನ್ನ ಆಟಗಾರರಾಗಿದ್ದರು.
2011 ರ ವಿಶ್ವಕಪ್ ಗೆಲುವಿನ ಕುರಿತಾಗಿ ಹಲವಾರು ವಿಶ್ಲೇಷಣೆಗಳು ಬಂದಿವೆ. ಹಲವರು ಈ ವಿಶ್ವಕಪ್ ಗೆಲುವಿಗೆ ಧೋನಿ ನಾಯಕತ್ವ ಎಂದು ಹೇಳಿದರೆ ಕೆಲವರು ಇದಕ್ಕೆ ಯುವರಾಜ್ ಸಿಂಗ್ ಅವರು ಸರಣಿಯುದ್ಧಕ್ಕೂ ತೋರಿದ ಆಲ್ ರೌಂಡ್ ಪ್ರದರ್ಶನವೇ ಕಾರಣವೆಂದು ಹೇಳುತ್ತಾರೆ.