Covid-19: ದೆಹಲಿಯಲ್ಲಿ ಕೊರೊನಾ ಪ್ರಕರಣಗಳು ಮತ್ತೊಮ್ಮೆ ವೇಗವಾಗಿ ಹೆಚ್ಚಾಗಲಾರಂಭಿಸಿವೆ. ಏತನ್ಮಧ್ಯೆ, ಕೊರೊನಾ ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದ ನಂತರ ರೋಗಲಕ್ಷಣಗಳು ಬರದಿದ್ದರೆ, ಪರೀಕ್ಷೆಯನ್ನು ಮಾಡುವ ಅಗತ್ಯವಿಲ್ಲ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.
ದೆಹಲಿಯಲ್ಲಿನ ಕರೋನವೈರಸ್ COVID-19 ಪರಿಸ್ಥಿತಿಯನ್ನು ನಿಭಾಯಿಸಲು ಉತ್ತಮ ಯೋಜನೆಯನ್ನು ರೂಪಿಸುವುದು ಅಗತ್ಯವಾಗಿದೆ, ಈ ಹಿನ್ನಲೆಯಲ್ಲಿ ಇನ್ನು ಮುಂದೆ ಪ್ರತಿ ತಿಂಗಳು ಸಿರೋ ಸಮೀಕ್ಷೆಯನ್ನು ನಡೆಸುವುದಾಗಿ ದೆಹಲಿ ಸರ್ಕಾರ ಘೋಷಿಸಿದೆ.
DDMA ಸಭೆಯ ಬಳಿಕ ಮಾತನಾಡಿರುವ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕು ಪಸರಿಸುತ್ತಿರುವುದನ್ನು ಗಮನಿಸಿದರೆ, ಜೂನ್ 15ರವರೆಗೆ ದೆಹಲಿಯ ಆಸ್ಪತ್ರೆಗಳಲ್ಲಿ ಸುಮಾರು 15 ಸಾವಿರ ಹಾಸಿಗೆಗಳ ಅವಶ್ಯಕತೆ ಇರಲಿದ್ದು, ಜುಲೈ 31 ರವರೆಗೆ 80 ಸಾವಿರ ಬೆಡ್ ಗಳ ಅವಶ್ಯಕತೆ ಬೀಳಲಿದೆ, ಅಷ್ಟೇ ಅಲ್ಲ ಸೋಂಕು ಪಸರಿಸುತ್ತಿರುವ ಸದ್ಯದ ವೇಗವನ್ನು ಗಮನಿಸಿದರೆ ಜುಲೈವರೆಗೆ ದೆಹಲಿಯಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 5 ಲಕ್ಷಕ್ಕೆ ಏರಿಕೆಯಾಗಿಅಲಿದೆ ಎಂದು ಹೇಳಿದ್ದಾರೆ.