Share Market Update:BSE Sensex ಇಂದು 200 ಕ್ಕೂ ಹೆಚ್ಚು ಅಂಕಗಳ ಲಾಭದೊಂದಿಗೆ ತನ್ನ ದಿನದ ವಹಿವಾಟು ಆರಂಭಿಸಿದೆ. ಇದರೊಂದಿಗೆ, ಈಗ ಇದು 50,000 ರ ಐತಿಹಾಸಿಕ ಗಡಿಯಿಂದ ಸುಮಾರು 300 ಅಂಕಗಳು ಮಾತ್ರ ದೂರದಲ್ಲಿದೆ. ನಿಫ್ಟಿಯಲ್ಲಿಯೂ ಕೂಡ 50 ಅಂಕಗಳ ಉತ್ಕರ್ಷವನ್ನು ಕಾಣುತ್ತಿದೆ. ಬ್ಯಾಂಕಿಂಗ್ ಸ್ಟಾಕ್ ನಲ್ಲಿ ಭಾರಿ ಏರಿಕೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
Stock Market Update: ಪ್ರಸ್ತುತ ಷೇರು ಮಾರುಕಟ್ಟೆಯಲ್ಲಿ ಅದ್ಭುತ ಉತ್ಸಾಹ ಕಂಡುಬರುತ್ತಿದ್ದು, ಇದು ಹೂಡಿಕೆದಾರರಿಗೆ ಬಂಪರ್ ಲಾಭ ನೀಡುತ್ತಿದೆ. ಇಂದು ದಿನದ ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್ ಐತಿಹಾಸಿಕ 49,000 ಅಂಕಗಳ ಗಡಿ ದಾಟಿದ್ದು, ಇದೊಂದು ಅತ್ಯುತ್ತಮ ಬೆಳವಣಿಗೆಯಾಗಿದೆ.
ಈ ಟ್ರಯಲ್ ನಲ್ಲಿ ಮುಂದಿನ ತಿಂಗಳು ದೇಶದ 25 ಟೆಸ್ಟ್ ಲೋಕೇಶನ್ ಗಳಲ್ಲಿ ಒಟ್ಟು 26 ಸಾವಿರ ವಾಲೆಂಟಿಯರ್ಸ್ ಗಳನ್ನು ನಾಮಿನೇಟ್ ಮಾಡಲಾಗುವುದು. ಈ ವಾಲೆಂಟಿಯರ್ಸ್ ಗಳಿಗೆ 28 ದಿನಗಳಲ್ಲಿ ಒಟ್ಟು ಎರಡು ಇಂಟ್ರಾಮಸ್ಕುಲಾರ್ ಇಂಜೆಕ್ಷನ್ ನೀಡಲಾಗುವುದು.
ಖಾಸಗಿ ವಲಯದ ಬ್ಯಾಂಕಿಂಗ್ ಷೇರುಗಳಲ್ಲಿನ ತೀವ್ರ ಮಾರಾಟದ ಒತ್ತಡದ ಮಧ್ಯೆ ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ 50 ಸೂಚ್ಯಂಕಗಳು ಮಧ್ಯಾಹ್ನ ವಹಿವಾಟಿನಲ್ಲಿ ಕುಸಿದವು, ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳು ಜಾಗತಿಕ ಹೂಡಿಕೆದಾರರನ್ನು ಬೆಚ್ಚಿ ಬೀಳಿಸುತ್ತಿವೆ. ಈ ಹಿನ್ನಲೆಯಲ್ಲಿ ಸೆನ್ಸೆಕ್ಸ್ ಸೂಚ್ಯಂಕವು 1,966.04 ಪಾಯಿಂಟ್‌ಗಳಷ್ಟು ಕುಸಿದು 28,613.05 ಕ್ಕೆ ತಲುಪಿದೆ, ಮತ್ತು ವಿಶಾಲವಾದ ನಿಫ್ಟಿ ಮಾನದಂಡವು 560 ಪಾಯಿಂಟ್‌ಗಳನ್ನು ಇಳಿಸಿ ಮೂರು ವರ್ಷಗಳ ಕನಿಷ್ಠ 8,407.05 ಕ್ಕೆ ತಲುಪಿದೆ.
ಸದ್ಯ ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಕೊರೊನಾ ವೈರಸ್ ನ ಕಾರ್ಮೋಡ ಕವಿದಿದೆ. ಹೀಗಾಗಿ ಕೊರೊನಾ ವೈರಸ್ ನಿಂದ ಷೇರು ಮಾರುಕಟ್ಟೆಯನ್ನು ಕಾಪಾಡಲು ಮಾರುಕಟ್ಟೆಯನ್ನು ಬಂದ್ ಇಡುವ ಬೇಡಿಕೆ ಇದೀಗ ಕೇಳಿಬರಲಾರಂಭಿಸಿವೆ. ಆದ್ರೆ, ಸದ್ಯ ಇದು ಕೇವಲ ಸಲಹೆಯ ಹಂತದಲ್ಲಿದ್ದು, ಸ್ಟಾಕ್ ಎಕ್ಸಚೇಂಜ್ ಹಾಗೂ SEBI ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ.
ದೇಶೀಯ ಷೇರು ಮಾರುಕಟ್ಟೆಗಳು ಗುರುವಾರ ತೀವ್ರ ನಷ್ಟವನ್ನು ಅನುಭವಿಸಿದ್ದು, ನಿಫ್ಟಿ 50 ಬೆಂಚ್‌ಮಾರ್ಕ್ ಸೂಚ್ಯಂಕವು ಎರಡು ವರ್ಷಗಳಲ್ಲಿ ಮೊದಲ ಬಾರಿಗೆ 10,000 ಕ್ಕಿಂತಲೂ ಕಡಿಮೆಯಾಗಿದೆ. ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ 1,929.87 ಪಾಯಿಂಟ್ಗಳಷ್ಟು ಕುಸಿದು ಬೆಳಿಗ್ಗೆ ವ್ಯವಹಾರಗಳಲ್ಲಿ 33,767.53 ಕ್ಕೆ ತಲುಪಿದೆ. ಆ ಮೂಲಕ ಅಕ್ಟೋಬರ್ 6, 2017 ರಿಂದ ಮೊದಲ ಬಾರಿಗೆ ಕನಿಷ್ಠ ಮಟ್ಟಕ್ಕೆ ದಾಖಲಾಗಿದೆ.
ಚೀನಾದಲ್ಲಿ ಜಾರಿಯಲ್ಲಿರುವ ಕೊರೊನಾ ವೈರಸ್ ಹಾವಳಿ ಹಾಗೂ ವಿಭಿನ್ನ ಏಜೆನ್ಸಿಗಳಿಂದ ಬರುತ್ತಿರುವ ಆರ್ಥಿಕ ಹಿಂಜರಿತ ಸುದ್ದಿಗಳು ಇದೀಗ ಭಾರತೀಯ ಷೇರು ಮಾರುಕಟ್ಟೆಯ ಮೇಲೆ ತನ್ನ ಪ್ರಭಾವ ತೋರಿಸಲು ಆರಂಭಿಸಿವೆ.
ಯುಎಸ್-ಇರಾನ್ ಮಧ್ಯೆ ಏರ್ಪಟ್ಟ ಉದ್ವಿಗ್ನತೆಯ ಹಿನ್ನೆಲೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಮಧ್ಯಾಹ್ನ 2.20ಕ್ಕೆ, ಸೆನ್ಸೆಕ್ಸ್ ಸೂಚ್ಯಂಕ 812 ಪಾಯಿಂಟ್‌ಗಳ ಕುಸಿತ ಕಂಡು 40,652 ಮಟ್ಟವನ್ನು ತಲುಪಿದೆ. ಇದೇ ವೇಳೆ ನಿಫ್ಟಿ ಸೂಚ್ಯಂಕ ಕೂಡ 12,000 ಕ್ಕಿಂತಲೂ ಕೆಳಗೆ ಕುಸಿದಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಮಂದಗತಿ ಆರಂಭಿಕ ವಹಿವಾಟಿನಿಂದಾಗಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ 300 ಸೂಚ್ಯಂಕ ಕುಸಿತವಾಗಿದೆ.ನಿಫ್ಟಿ ದಿನದ ಕನಿಷ್ಠ ಮಟ್ಟದಲ್ಲಿ 11,257 ಕ್ಕೆ ಇಳಿದಿದೆ.
ದೇಶೀಯ ಷೇರು ಮಾರುಕಟ್ಟೆಗಳು ಮಂಗಳವಾರ ತೀವ್ರ ನಷ್ಟ ಅನುಭವಿಸಿದ್ದು, ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ ಅಸ್ಥಿರ ವ್ಯಾಪಾರದ ಮಧ್ಯೆ 700ಕ್ಕೂ ಅಧಿಕ ಸೂಚ್ಯಂಕ ನಷ್ಟ ಕಂಡಿದೆ. ಎನ್‌ಎಸ್‌ಇ ನಿಫ್ಟಿ ಮಾನದಂಡವು 213.2 ಪಾಯಿಂಟ್‌ಗಳಷ್ಟು ಕುಸಿದು 11,261.25 ಕ್ಕೆ ತಲುಪಿದೆ.
ದೇಶೀಯ ಕಂಪನಿಗಳು ಮತ್ತು ಹೊಸ ಉತ್ಪಾದನಾ ಸಂಸ್ಥೆಗಳ ಮೇಲಿನ ಕಾರ್ಪೊರೇಟ್ ತೆರಿಗೆ ದರವನ್ನು ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ. ಈ ನಿರ್ಧಾರದಿಂದಾಗಿ ನಿಧಾನಗತಿಯ ಆರ್ಥಿಕತೆ ಪುನಚ್ಚೇತನಗೊಳ್ಳಲಿದೆ ಎನ್ನಲಾಗುತ್ತಿದೆ.