ಹುಲಿ ಮೀಸಲು ಅರಣ್ಯದಲ್ಲಿ ಎರಡು ಹುಲಿಗಳ ನಡುವೆ ಭೀಕರ ಕಾದಾಟ ನಡೆದಿದೆ. ಅವುಗಳ ಘರ್ಜನೆಗೆ ಇಡೀ ಅರಣ್ಯ ಪ್ರದೇಶವೇ ನಡುಗಿತು. ಇದನ್ನ ನೋಡಿದ ಸಫಾರಿ ಪ್ರವಾಸಿಗರು ಸ್ವಲ್ಪ ಭಯಭೀತರಾದರು. ಆದರೆ ಅವರು ಈ ಅಪರೂಪದ ದೃಶ್ಯವನ್ನ ಆಸಕ್ತಿಯಿಂದ ವೀಕ್ಷಿಸಿದರು. ಈ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ರಣಥಂಬೋರ್‌ನ ಹುಲಿ ಮೀಸಲು ಅರಣ್ಯದಲ್ಲಿ ನಡೆದಿದೆ. ರಿದ್ಧಿ ಮತ್ತು ಮೀರಾ ಹುಲಿಗಳ ನಡುವೆ ಭೀಕರ ಕಾದಾಟ ನಡೆದಿದೆ. ಹುಲಿಗಳು ಆವಾಸಸ್ಥಾನದ ಮೇಲೆ ಪ್ರಾಬಲ್ಯಕ್ಕಾಗಿ ಈ ಹೋರಾಟ ನಡೆದಿದೆ ಎಂದು ತಿಳಿದುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.