ಬಿಳಿ ಅಕ್ಕಿ ಮತ್ತು ಮೈದಾದಿಂದ ಮಾಡಿದ ಆಹಾರಗಳನ್ನು ದೂರವಿಡಬೇಕು. ಯುಗಾದಿಯಂದು ಅಕ್ಕಿಯ ಪುಲಾವ್, ಇಡ್ಲಿ ಅಥವಾ ಮೈದಾದಿಂದ ತಯಾರಿಸಿದ ಪೂರಿಗಳು ಸಾಮಾನ್ಯವಾಗಿ ಇರುತ್ತವೆ. ಆದರೆ ಇವು ಶೀಘ್ರವಾಗಿ ಜೀರ್ಣವಾಗಿ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಏರಿಸುತ್ತವೆ. ಇದರ ಬದಲಿಗೆ ರಾಗಿ, ಗೋಧಿ ಅಥವಾ ಜೋಳದಂತಹ ಆರೋಗ್ಯಕರ ಧಾನ್ಯಗಳಿಂದ ಮಾಡಿದ ಆಹಾರವನ್ನು ಸೇವಿಸಬಹುದು
Significance of Ugadi: ಧಾರ್ಮಿಕ ದೃಷ್ಟಿಯಿಂದ, ಯುಗಾದಿಯ ದಿನಕ್ಕೆ ವಿಶೇಷ ಮಹತ್ವವಿದೆ. ಪುರಾಣಗಳ ಪ್ರಕಾರ, ಈ ದಿನದಂದು ಬ್ರಹ್ಮ ದೇವರು ಸೃಷ್ಟಿಯನ್ನು ಆರಂಭಿಸಿದನು ಎಂಬ ನಂಬಿಕೆಯಿದೆ. ಆದ್ದರಿಂದ, ಈ ದಿನವನ್ನು ಸೃಷ್ಟಿಯ ಆರಂಭದ ಸಂಕೇತವಾಗಿ ಆಚರಿಸಲಾಗುತ್ತದೆ. ಜೊತೆಗೆ, ಭಗವಾನ್ ವಿಷ್ಣುವಿನ ಮತ್ಸ್ಯಾವತಾರದ ಸ್ಮರಣೆಯಾಗಿ ಈ ದಿನವನ್ನು ಕೆಲವು ಕಡೆಗಳಲ್ಲಿ ಗೌರವಿಸಲಾಗುತ್ತದೆ. ಈ ದಿನ ಶ್ರೀರಾಮನವಮಿಯಂತಹ ಇತರ ಪವಿತ್ರ ಘಟನೆಗಳಿಗೂ ಸಮೀಪವಾಗಿರುವುದರಿಂದ, ಇದು ಧಾರ್ಮಿಕ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸುತ್ತದೆ.
Ugadi 2025 lucky zodiac sign: ಗುಡಿ ಪಾಡ್ವ ಮತ್ತು ಯುಗಾದಿ... ಹಿಂದೂಗಳ ವಿಶೇಷ ಹಬ್ಬವಾಗಿರುವ ಇದು ಹೊಸ ವರ್ಷ ಎಂದೇ ಪ್ರಖ್ಯಾತಿ ಪಡೆದಿದೆ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಂದು ಗುಡಿ ಪಾಡ್ವವನ್ನು ಆಚರಿಸಲಾಗುತ್ತದೆ. ಈ ದಿನದಿಂದ ಹಿಂದೂಗಳ ಹೊಸ ವರ್ಷ ಪ್ರಾರಂಭವಾಗುತ್ತದೆ ಮತ್ತು ಚೈತ್ರ ನವರಾತ್ರಿಯೂ ಇದೇ ದಿನಾಂಕದಿಂದ ಪ್ರಾರಂಭವಾಗುತ್ತದೆ.
Gajakesari Raja Yoga lucky zodiac sign: ಗುರು ಮತ್ತು ಚಂದ್ರ ಗ್ರಹವು ಯಾವುದೇ ರಾಶಿಯಲ್ಲಿ ಒಟ್ಟಿಗೆ ಬಂದಾಗ, ಅಲ್ಲಿ ಗಜಕೇಸರಿ ರಾಜಯೋಗವು ರೂಪುಗೊಳ್ಳುತ್ತದೆ. ಈ ರಾಜಯೋಗವನ್ನು ಜ್ಯೋತಿಷ್ಯದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಏಪ್ರಿಲ್ 1, 2025 ರ ಸಂಜೆ 4:29 ಕ್ಕೆ ವೃಷಭ ರಾಶಿಯನ್ನು ಚಂದ್ರನು ಪ್ರವೇಶಿಸುತ್ತಾನೆ.
Ugadi Bhavishya: ಹಿಂದೂ ಧರ್ಮದಲ್ಲಿ, ಯುಗಾದಿ ಹಬ್ಬವನ್ನು ಹೊಸ ವರ್ಷವೆಂದು ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್ 30, 2025ರ ಭಾನುವಾರ ಯುಗಾದಿ ಹಬ್ಬದ ಆಚರಣೆ ಇರಲಿದೆ. ಹಿಂದೂ ಹೊಸ ವರ್ಷವು ಯಾರ ಬಾಳಲ್ಲಿ ಸಿಹಿ ತರಲಿದೆ. ಯಾರಿಗೆ ಕಹಿ ಉಣಿಸಲಿದೆ ತಿಳಿಯಿರಿ.
Bus Fare Hike: ಈ ಸಲ ಶನಿವಾರ ಯುಗಾದಿ ಹಬ್ಬ, ಭಾನುವಾರ ಹೊಸ್ತಡ್ಕು, ಸೋಮವಾರ ರಂಜಾನ್ ಹಬ್ಬ ಇರುವುದರಿಂದ ಹಿಂದೂ ಮುಸ್ಲಿಂ ಬಾಂಧವರೆಲ್ಲರೂ ಊರಿಗೆ ಹೋಗಬೇಕಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು ಒನ್ ಟು ತ್ರಿಬಲ್ ದರ ಏರಿಕೆ ಮಾಡಿ ವಸೂಲಿ ದಂಧೆ ಶುರು ಮಾಡಿಕೊಂಡಿದ್ದಾರೆ.
ಗುಡಿ ಪಾಡ್ವ ಮತ್ತು ಯುಗಾದಿ ಎರಡನ್ನೂ ಒಂದೇ ದಿನ ಆಚರಿಸಲಾಗುತ್ತದೆ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಂದು ಗುಡಿ ಪಾಡ್ವವನ್ನು ಆಚರಿಸಲಾಗುತ್ತದೆ. ಈ ದಿನದಿಂದ ಹಿಂದೂಗಳ ಹೊಸ ವರ್ಷ ಪ್ರಾರಂಭವಾಗುತ್ತದೆ. ಚೈತ್ರ ನವರಾತ್ರಿಯೂ ಇದೇ ದಿನಾಂಕದಿಂದ ಪ್ರಾರಂಭವಾಗುತ್ತದೆ. ಗುಡಿ ಪಾಡ್ವವನ್ನು ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ವಾಸಿಸುವ ಜನರು ಈ ದಿನವನ್ನು ಯುಗಾದಿಯಾಗಿ ಆಚರಿಸುತ್ತಾರೆ. ಈ ದಿನದಂದು ದುರ್ಗಾ ದೇವಿಯನ್ನು ಪೂಜಿಸುವುದರಿಂದ ಭಕ್ತರ ಪ್ರತಿಯೊಂದು ಆಸೆಯೂ ಈಡೇರುತ್ತದೆ ಎಂಬ ನಂಬಿಕೆ ಇದೆ. ಗುಡಿ ಪಾಡ್ವ ಹಬ್ಬವು ಮಾರ್ಚ್ 30, 2025ರ ಭಾನುವಾರದಂದು ಬರುತ್ತದೆ.
Gajakesari Yoga with Ugadi: ಮಾರ್ಚ್ 24 ರಂದು, ಚಂದ್ರ ಮತ್ತು ಗುರುವಿನ ಸಂಯೋಗದಿಂದಾಗಿ, ಅತ್ಯಂತ ಶುಭವೆಂದು ಪರಿಗಣಿಸಲಾದ ಗಜಕೇಸರಿ ಯೋಗವು ರೂಪುಗೊಳ್ಳುತ್ತದೆ. ಈ ಸಂಯೋಜನೆಯಿಂದಾಗಿ, ಕೆಲವು ರಾಶಿಗಳು ತಮ್ಮ ಅದೃಷ್ಟದಲ್ಲಿ ದೊಡ್ಡ ಬದಲಾವಣೆಯನ್ನು ಕಾಣುತ್ತವೆ.
ugadi lucky zodiac sign 2025: ಯುಗಾದಿ ಹಬ್ಬಕ್ಕೆ ವಿಶೇಷವಾದ ಮಹತ್ವವಿದೆ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಿಂದ ಹಿಂದೂಗಳ ಹೊಸ ವರ್ಷ ಪ್ರಾರಂಭವಾಗುತ್ತದೆ ಮತ್ತು ಚೈತ್ರ ನವರಾತ್ರಿಯೂ ಇದೇ ದಿನಾಂಕದಿಂದ ಪ್ರಾರಂಭವಾಗುತ್ತದೆ.
Karnataka News Updates: ಎಂತಹದೇ ಕಷ್ಟಕರ ಪರಿಸ್ಥಿತಿ ಬಂದರೂ ರೈತಬಾಂಧವರು ತಮ್ಮ ಗೋವುಗಳನ್ನು ಕಟುಕರಿಗೆ ಮಾರ ಬೇಡಿ. ಅಂಥ ಬೇಡವಾದ ಗೋವುಗಳಿಗೆ ಆಶ್ರಯ ನೀಡಲು ಅನೇಕ ಗೋಶಾಲೆಗಳು ನಮ್ಮಲ್ಲಿದೆ. ರೈತ ತನಗೆ ಭಗವಂತ ನೀಡಿದ ಅಸಾಧಾರಣ ಬುದ್ದಿಶಕ್ತಿ ಮತ್ತು ಯುಕ್ತಿಯಿಂದ ಯಾವ ತಂತ್ರಜ್ಞಾನದಿಂದಲೂ ಉತ್ಪತ್ತಿಸಲಾಗದ ಚಿನ್ನಕ್ಕಿಂತಲೂ ಮಿಗಿಲಾದ ಅನ್ನವನ್ನು ಜಗತ್ತಿಗೆ ನೀಡುತ್ತಿದ್ದಾನೆ.
Ugadi Festival Special: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹರುಷವ ಹೊಸತು ಹೊಸತು ತರುತಿದೆ. ಶ್ರೀ ದ. ರಾ. ಬೇಂದ್ರೆಯವರ ಈ ಜನಪ್ರಿಯ ಭಾವಗೀತೆ ಸವಿ ಕ್ಷಣಕ್ಕೆ ಸಾಕ್ಷಿಯಾಗಿದೆ.
Honneru In Ugadi: ಯುಗಾದಿ ಆರಂಭವಾಗುತ್ತಿದ್ದಂತೆ ಮಳೆ ಬರಲಿದ್ದು ಕೃಷಿ ಚಟುವಟಿಕೆಗಳು ಆರಂಭವಾಗುತ್ತದೆ. ಎತ್ತುಗಳು ಮತ್ತು ಗಾಡಿಗೆ ಹೊಂಬಾಳೆ ಕಟ್ಟಿ ಪೂಜೆ ಸಲ್ಲಿಸಿ ಗೊಬ್ಬರವನ್ನು ಜಮೀನುಗಳಿಗೆ ಸಿಂಪಡಿಸುವ ಸಂಪ್ರದಾಯಕ್ಕೆ ಹೊನ್ನೇರು ಎಂದು ಕರೆಯುತ್ತಾರೆ. ಚಾಮರಾಜನಗರ ಜಿಲ್ಲೆಯ ಬಹುತೇಕ ಗ್ರಾಮದಲ್ಲಿ ಈ ಸಂಪ್ರದಾಯವನ್ನು ಇಂದಿಗೂ ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.