UPI offline payment : ಈಗ, UPI ಬಳಸಲು ಇಂಟರ್ನೆಟ್ ಅಗತ್ಯವಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರ ಹೊಸ ವಿಧಾನವನ್ನು ಪರಿಚಯಿಸಿದೆ. ನೀವು ಇಂಟರ್ನೆಟ್ ಮತ್ತು ಸ್ಮಾರ್ಟ್‌ಫೋನ್ ಇಲ್ಲದೆಯೂ ಹಣವನ್ನು ಕಳುಹಿಸಬಹುದು. ನಿಮ್ಮ UPI ಪಿನ್ ಅನ್ನು ಸಹ ಬದಲಾಯಿಸಬಹುದು. ಈ ಸೇವೆ ದಿನದ 24 ಗಂಟೆಗಳ ಕಾಲ ಲಭ್ಯವಿದೆ.
ಯುಪಿಐ (ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್) ಸೇವೆ ಭಾರತದಲ್ಲಿ ಉಚಿತವಾಗಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರವು 3,000 ರೂ.ಗಿಂತ ಹೆಚ್ಚಿನ ಯುಪಿಐ ವಹಿವಾಟಿಗೆ ಮರ್ಚಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಶುಲ್ಕ ವಿಧಿಸಲು ಯೋಚಿಸುತ್ತಿದೆ ಎಂದು ವರದಿಗಳಿವೆ.
Wrong UPI Transaction: ಡಿಜಿಟಲ್ ಯುಗದಲ್ಲಿ ಬಹುತೇಕ ಬ್ಯಾಂಕಿಂಗ್ ಕೆಲಸಗಳು ಬೆರಳ ತುದಿಯಲ್ಲೇ ಪೂರ್ಣಗೊಳ್ಳುತ್ತವೆ. ಇದರಿಂದ ಸಮಯ ಉಳಿತಾಯದ ಜೊತೆಗೆ ಹಣಕಾಸು ಸಂಬಂಧಿತ ವಹಿವಾಟುಗಳನ್ನು ಕೆಲವೇ ಕ್ಷಣಗಳಲ್ಲಿ ಪೂರ್ಣಗೊಳಿಸಬಹುದು. ಆದರೆ, ಕೆಲವೊಮ್ಮೆ ತಪ್ಪಾಗಿ ಬೇರೆ ಖಾತೆಗೆ ಹಣ ಹೋಗುವ ಸಂಭವವಿರುತ್ತದೆ. ಅಂತಹ ಸಂದರ್ಭದಲ್ಲಿ ಏನು ಮಾಡಬೇಕೆಂದು ತಿಳಿಯಲು ಮುಂದೆ ಓದಿ.
PF Withdraw Rules: ಆಗಾಗ್ಗೆ ತನ್ನ ಚಂದಾದಾರರ ಅನುಕೂಲಕ್ಕಾಗಿ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸುವ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಇದೀಗ ಪಿಎಫ್ ಹಿಂಪಡೆಯುವಿಕೆ ವಿಧಾನವನ್ನು ಸುಲಭಗೊಳಿಸಿದೆ.
ಏಪ್ರಿಲ್ 4, 2025 ರಿಂದ ಜಾರಿಗೆ ಬಂದಿರುವ ಈ ನಿಯಮದ ಪ್ರಕಾರ, QR ಶೇರ್ & ಪೇ ಆಧಾರಿತ ಎಲ್ಲಾ ಅಂತರಾಷ್ಟ್ರೀಯ UPI P2M ವಹಿವಾಟುಗಳನ್ನು ನಿಷೇಧಿಸಲಾಗಿದೆ. ಈ ಕ್ರಮವು ಪೇಯರ್ ಆಪ್‌ಗಳು ಈ ವಹಿವಾಟುಗಳನ್ನು ಸರಿಯಾಗಿ ಗುರುತಿಸುವುದನ್ನು ಖಾತರಿಪಡಿಸುತ್ತದೆ.
ಆರ್ಥಿಕ ಅಗತ್ಯಗಳ ಆಧಾರದ ಮೇಲೆ ವ್ಯಕ್ತಿಯಿಂದ ವ್ಯಾಪಾರಿಗೆ ನಡೆಯುವ ವಹಿವಾಟುಗಳಲ್ಲಿ UPI ಪಾವತಿಗಳ ವಹಿವಾಟು ಮಿತಿಯನ್ನು ಬದಲಾಯಿಸಲು RBI ಭಾರತೀಯ ರಾಷ್ಟ್ರೀಯ ಪಾವತಿ ನಿಗಮಕ್ಕೆ ಅವಕಾಶ ನೀಡಿದೆ. ಅಂದರೆ ಅಗತ್ಯಕ್ಕೆ ಅನುಗುಣವಾಗಿ ಈ ವಹಿವಾಟು ಮಿತಿಯನ್ನು ಹೆಚ್ಚಿಸಬಹುದು.
UPI New Rules: ಪ್ರತಿ ವರ್ಷ ಏಪ್ರಿಲ್ 01ರಿಂದ ಹೊಸ ಹಣಕಾಸು ವರ್ಷ ಆರಂಭವಾಗುತ್ತದೆ. ಇದರೊಂದಿಗೆ ಹಣಕಾಸು ಸಂಬಂಧಿತ ಕೆಲವು ನಿಯಮಗಳಲ್ಲಿ ಬದಲಾವಣೆಯನ್ನೂ ಸಹ ಕಾಣಬಹುದು. ಇದು ಗ್ರಾಹಕರ ಜೇಬಿನ ಮೇಲೆ ನೇರ ಪರಿಣಾಮವನ್ನು ಉಂಟು ಮಾಡುತ್ತದೆ.
EPFO: ಈ ವರ್ಷದ ಮೇ ಅಂತ್ಯ ಅಥವಾ ಜೂನ್ ವೇಳೆಗೆ ಇಪಿಎಫ್‌ಒ ಸದಸ್ಯರು ಯುಪಿಐ ಮತ್ತು ಎಟಿಎಂ ಮೂಲಕ ತಮ್ಮ ಪಿಎಫ್ ಖಾತೆಗಳಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗಲಿದೆ ಎಂದು ಸುಮಿತಾ ದಾವ್ರಾ ಹೇಳಿದ್ದಾರೆ.
National Payments Corporation of India: ಈ ಬಗ್ಗೆ ನ್ಯಾಷನಲ್ ಪೇಮೆಂಟ್ಸ್ ಕರ್ಪೋರೇಷನ್ ಆಫ್ ಇಂಡಿಯಾ (NPCI) ಬ್ಯಾಂಕುಗಳ ಮತ್ತು ಯುಪಿಐ ಅಪ್ಲಿಕೇಶನ್‌ಗಳಿಗೆ ನಿಷ್ಕ್ರಿಯ ಮೊಬೈಲ್ ಸಂಖ್ಯೆಗಳನ್ನು ತಮ್ಮ ವ್ಯವಸ್ಥೆಯಿಂದ ತೆಗೆದುಹಾಕಲು ಸೂಚನೆ ನೀಡಿವೆ.
UPI transactions: ಇತ್ತೀಚಿನ ದಿನಗಳಲ್ಲಿ ಎಲ್ಲರೂ UPI ಸೇವೆಗಳನ್ನು ಬಳಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಈ ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಲಾದ UPI ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ.
UPI Transactions: ಕಳೆದ ಹಲವು ವರ್ಷಗಳಿಂದ ಅದರಲ್ಲೂ ಕರೋನಾವೈರಸ್ ಮಹಾಮಾರಿ ಆರಂಭವಾದಾಗಿನಿಂದ ಭಾರತದಲ್ಲಿ ಆನ್ಲೈನ್ ಪಾವತಿಗಳ ಮೂಲಕ ಹಣಕಾಸು ವ್ಯವಹಾರ ಹೆಚ್ಚಾಗಿದ್ದು ಇಲ್ಲಿಯವರೆಗೂ ಎಲ್ಲ ಯುಪಿಐ ಪಾವತಿಗಳು ಮತ್ತು ಹಣದ ಟ್ರಾನ್ಸಾಕ್ಷನ್ ಶುಲ್ಕರಹಿತವಾಗಿದ್ದವು. ಆದರೆ...
UPI New Rule: ಭಾರತದಿಂದ ವಿದೇಶಗಳಿಗೆ ಡಿಜಿಟಲ್ ಪಾವತಿಯ ಪ್ರಮುಖ ಸಾಧನವಾಗಿ ಯುಪಿಐ ಈಗ ಮಾರ್ಪಟ್ಟಿದೆ. ಇದನ್ನು ಇ-ರಿಕ್ಷಾಗಳು, ದಿನಸಿ ಅಂಗಡಿಗಳು, ಮೆಟ್ರೋ ನಿಲ್ದಾಣಗಳು ಮತ್ತು ಶ್ರೀಲಂಕಾ, ಭೂತಾನ್, ಯುಎಇ, ಮಾರಿಷಸ್ ಮತ್ತು ಫ್ರಾನ್ಸ್‌ನಂತಹ ದೇಶಗಳಲ್ಲಿಯೂ ಬಳಸಲಾಗುತ್ತಿದೆ.
RBI New Rules: ಯಾವುದೇ ಶುಲ್ಕವಿಲ್ಲದೆ ಗ್ರಾಹಕರಿಗೆ ಈ ಹೊಸ ಸೇವೆಯನ್ನು ಒದಗಿಸಲಾಗುವುದು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಇದಲ್ಲದೇ ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಶಾಖೆಗಳ ಮೂಲಕವೂ ಈ ಸೌಲಭ್ಯ ಲಭ್ಯವಿದೆ.
UPI Payment: ಕಳೆದ ಐದು ವರ್ಷದಲ್ಲಿ ಡಿಜಿಟಲ್ ವ್ಯವಹಾರ, ಮೊಬೈಲ್ ಬ್ಯಾಂಕಿಂಗ್ ಪ್ರಮಾಣ ಹೆಚ್ಚಾಗುತ್ತಿದೆ. ಇದೇ ವೇಳೆ ಸಣ್ಣಪುಟ್ಟ ತಪ್ಪುಗಳ ಕಾರಣಕ್ಕೆ ಜನ ಹಣ ಕಳೆದುಕೊಳ್ಳುವುದೂ ಹೆಚ್ಚಾಗಿದೆ.
UPI without internet : ಭಾರತದಲ್ಲಿ ತಂತ್ರಜ್ಞಾನದ ಅನುಕೂಲವು ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಈ ಪೈಕಿ ಯುಪಿಐ ಸೌಲಭ್ಯ ಇಂದಿನ ದಿನಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದೆ. ಮೊಬೈಲ್ ಅಪ್ಲಿಕೇಶನ್ ಮೂಲಕ ಬಹು ಬ್ಯಾಂಕ್ ಖಾತೆಗಳನ್ನು ಸುಲಭವಾಗಿ ನಿರ್ವಹಿಸಬಹುದು. ಆರಂಭದಲ್ಲಿ ಹೆಚ್ಚಿನ ಬೆಳವಣಿಗೆ ಇಲ್ಲದಿದ್ದರೂ, ಸ್ಮಾರ್ಟ್ ಫೋನ್ ಬಂದ ನಂತರ ಇದು ಹೆಚ್ಚಾಗಿ ಬೆಳೆದಿದೆ. ಅದಕ್ಕೆ ತಕ್ಕಂತೆ ವಿವಿಧ ಆ್ಯಪ್‌ಗಳು ಸಹ ಲಭ್ಯವಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.