ಮುಂದಿನ ವಾರದಲ್ಲಿ ವ್ಯಾಪಕವಾದ ಲಸಿಕೆಗಳನ್ನು ಪ್ರಾರಂಭಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದ್ದು, ದೇಶವು ತನ್ನ ಸ್ಪುಟ್ನಿಕ್ ವಿ ಲಸಿಕೆಯ ಸುಮಾರು 2 ಮಿಲಿಯನ್ ಪ್ರಮಾಣವನ್ನು ಉತ್ಪಾದಿಸಿದೆ ಎಂದು ಹೇಳಿದರು.
ಬ್ರಿಕ್ಸ್ ಗ್ರೂಪ್ ನ ಭಾಗವಾಗಿರುವ ಚೀನಾ ಮತ್ತು ಭಾರತದಲ್ಲಿ COVID-19 ವಿರುದ್ಧ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಉತ್ಪಾದಿಸಬಹುದೆಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಆ ಮೂಲಕ ಕರೋನವೈರಸ್ ಲಸಿಕೆಗಳ ಅಭಿವೃದ್ಧಿಗೆ ಬ್ರಿಕ್ಸ್ ದೇಶಗಳ ಜಂಟಿ ಪ್ರಯತ್ನಕ್ಕೆ ಕರೆ ನೀಡಿದರು.
ಬ್ರಿಕ್ಸ್ ಸದಸ್ಯ ರಾಷ್ಟ್ರಗಳಲ್ಲಿ ಒಂದಾದ ರಷ್ಯಾ 12ನೇ ಬ್ರಿಕ್ಸ್ ಸಮಿತ್ ಅನ್ನು ಆಯೋಜಿಸುತ್ತಿದೆ. ಇದು ನರೇಂದ್ರ ಮೋದಿ ಮತ್ತು ಕ್ಸಿ ಜಿನ್ ಪಿಂಗ್ ಒಂದೇ ವೇದಿಕೆಗೆ ಬರಲು ಅವಕಾಶ ಮಾಡಿಕೊಟ್ಟಿದೆ.
ಸಾರ್ವಜನಿಕ ಆರೋಗ್ಯ ಪರಿಸ್ಥಿತಿ ಸಾಮಾನ್ಯವಾದ ಕೂಡಲೇ ಭಾರತಕ್ಕೆ ರಷ್ಯಾದ ಅಧ್ಯಕ್ಷ ಪುಟಿನ್ ರನ್ನು ಸ್ವಾಗತಿಸಲು ಎದುರು ನೋಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ತಿಳಿಸಿದರು.
ಕರೋನಾದ ಲಸಿಕೆ ಸ್ಪುಟ್ನಿಕ್ ವಿ (Sputnik V) ತಯಾರಿಸಲಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ ಪ್ರಕಟಿಸಿದರು. ದೇಶದಲ್ಲಿ ಲಸಿಕೆ ವ್ಯಾಪಕ ಬಳಕೆಗಾಗಿ ನಿಯಂತ್ರಕ ಅನುಮೋದನೆಯನ್ನು ಪಡೆದಿದೆ ಮತ್ತು ಇದು ಜಗತ್ತಿಗೆ ಬಹಳ ಮುಖ್ಯವಾದ ಹೆಜ್ಜೆಯಾಗಿದೆ ಎಂದು ರಷ್ಯಾ ಹೇಳಿಕೊಂಡಿದೆ.
ರಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ಸಂಘರ್ಷ ಹೆಚ್ಚಾಗಬಹುದು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆದೇಶದ ಮೇರೆಗೆ ದೇಶದ ನೈಋತ್ಯ ಗಡಿಯಲ್ಲಿ ದೊಡ್ಡ ಮಿಲಿಟರಿ ವ್ಯಾಯಾಮಗಳನ್ನು ನಡೆಸಲಾಯಿತು.
ಚೀನಾದಿಂದ ಭಾರತಕ್ಕೆ, ಅಮೆರಿಕದಿಂದ ರಷ್ಯಾ ಎಲ್ಲರೂ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದ್ದಾರೆ. ಪ್ರಪಂಚದಾದ್ಯಂತ 27 ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಆದಾಗ್ಯೂ, ಚೀನಾ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳಲ್ಲಿ ಈ ವೈರಸ್ ಹರಡುವಿಕೆಯ ಪರಿಣಾಮ ಕಡಿಮೆಯಾಗಿದೆ.