ಅಜಯ್ ಬಂಗಾ ಅವರು ವಿಶ್ವಬ್ಯಾಂಕ್ ಮುಖ್ಯಸ್ಥರಾಗಿರುತ್ತಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಗುರುವಾರ ಘೋಷಿಸಿದ್ದಾರೆ. ನಿರ್ದೇಶಕರ ಮಂಡಳಿಯು ಅವರ ನಾಮನಿರ್ದೇಶನವನ್ನು ಅನುಮೋದಿಸಿದರೆ, ಅವರು ಪ್ರತಿಷ್ಠಿತ ಹುದ್ದೆಯನ್ನು ವಹಿಸಿಕೊಳ್ಳುವ ಭಾರತೀಯ ಮೂಲದ ಮೊದಲ ವ್ಯಕ್ತಿಯಾಗುತ್ತಾರೆ.
NRI News: ಈ ಮೊತ್ತ ಎಷ್ಟು ಬೃಹತ್ ಮಟ್ಟದ್ದು ಎಂದು ತಿಳಿಸಲು ಇದನ್ನು ಷೇರು ಮಾರುಕಟ್ಟೆಯಲ್ಲಿ ಬರುವ ಎಫ್ಡಿಐಗೆ ಹೋಲಿಸಲಾಗಿದೆ. ದೇಶದ ಷೇರು ಮಾರುಕಟ್ಟೆಯಲ್ಲಿ ಬರುವ ಎಫ್ಡಿಐಗಿಂತ ಶೇಕಡ 25ರಷ್ಟು ಹೆಚ್ಚಿನ ಮೊತ್ತವನ್ನು ಎನ್ ಆರ್ ಐಗಳು ತನ್ನ ದೇಶಕ್ಕೆ ಕಳುಹಿಸಿರಬೇಕು. ಅಂತೆಯೇ ಈ ಬಾರಿ ಶೇಕಡಾ 12 ರಷ್ಟು ಪಟ್ಟು ಹೆಚ್ಚಾಗಿದೆ. ಇನ್ನು ರೂಪಾಯಿ ಎದುರು ಡಾಲರ್ ಮೌಲ್ಯದ ಹೆಚ್ಚಳದಿಂದಾಗಿ ಈ ವರ್ಷ ವಿದೇಶದಿಂದ ಕಳುಹಿಸುವ ಮೊತ್ತವೂ ಹೆಚ್ಚಿದೆ.
ಗುಜರಾತ್ನಲ್ಲಿ ಶಿಕ್ಷಣ ಯೋಜನೆ, ತಮಿಳುನಾಡಿನ ಸಾಮಾಜಿಕ ಸಂರಕ್ಷಣಾ ಕಾರ್ಯಕ್ರಮ ಹಾಗೂ ಕೊರೊನಾ ನಂತರ ಮೀನುಗಾರಿಕಾ ವಲಯದಲ್ಲಿ ಚೇತರಿಕೆಗೆ ಸಹಾಯ ಮಾಡುವ ಯೋಜನೆಗೆ 562 ಮಿಲಿಯನ್ ಡಾಲರ್ (ಸುಮಾರು 4,393.70 ಕೋಟಿ ರೂ.) ಮೊತ್ತದ ಸಾಲವನ್ನು ವಿಶ್ವಬ್ಯಾಂಕ್ ಗುರುವಾರದಂದು ಅನುಮೋದಿಸಿದೆ.
Extremely Poor Category: ಒಬ್ಬ ವ್ಯಕ್ತಿಯು ದಿನಕ್ಕೆ 167 ರೂಪಾಯಿಗಳಿಗಿಂತ ಕಡಿಮೆ ಆದಾಯ ಗಳಿಸುತ್ತಿದ್ದರೆ ಅವನನ್ನು ಅತ್ಯಂತ ಬಡವ ಎಂದು ಪರಿಗಣಿಸಲಾಗುತ್ತದೆ. ಇದು ವಿಶ್ವಬ್ಯಾಂಕ್ನ ಹೊಸ ಮಾನದಂಡವಾಗಿದೆ.
Project Reward Implementation - ಭಾರತ ಸರ್ಕಾರ (Government Of India), ಕರ್ನಾಟಕ (Government Of Karnataka) ಮತ್ತು ಒಡಿಶಾ ರಾಜ್ಯ ಸರ್ಕಾರಗಳು (Government Of Odisha ) ಹಾಗೂ ವಿಶ್ವಬ್ಯಾಂಕ್ (World Bank) ಗಳು $115 ಮಿಲಿಯನ್ ಮೊತ್ತದ ಸಾಲ ಒಪ್ಪಂದಗಳಿಗೆ ಸಹಿ ಹಾಕಿವೆ, “ನವೀನ ಅಭಿವೃದ್ಧಿ ಮೂಲಕ ಕೃಷಿ ಸ್ಥಿತಿಸ್ಥಾಪಕತ್ವಕ್ಕಾಗಿ ಜಲಾನಯನವನ್ನು ಪುನರುಜ್ಜೀವನಗೊಳಿಸುವ ಯೋಜನೆಯ (Project REWARD) ಅನುಷ್ಠಾನಕ್ಕಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಂದರೆ, ಕೃಷಿ ಅಭಿವೃದ್ಧಿ ಮತ್ತು ಜಲ ಸಂಪನ್ಮೂಲಗಳ ನಿರ್ವಹಣೆಗಾಗಿ ನಡೆಯುತ್ತಿರುವ ಪ್ರಾಜೆಕ್ಟ್ ರಿವಾರ್ಡ್ ಅಡಿಯಲ್ಲಿ ಭಾರತ ಸರ್ಕಾರ ಮತ್ತು ವಿಶ್ವಬ್ಯಾಂಕ್ ನಡುವೆ $115 ಮಿಲಿಯನ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
Indian Economy: ಇತ್ತೀಚೆಗೆ ಭಾರತೀಯ ಆರ್ಥಿಕತೆಯ ಕುರಿತು ಮಾತನಾಡಿರುವ ವಿಶ್ವಬ್ಯಾಂಕ್ ಅಧ್ಯಕ್ಷರು ಈಗ ಭಾರತದ ಆರ್ಥಿಕತೆಯು ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುವ ಸ್ಥಿತಿಯಲ್ಲಿದೆ ಮತ್ತು ವಿಶ್ವಬ್ಯಾಂಕ್ ಅದನ್ನು ಸ್ವಾಗತಿಸುತ್ತದೆ ಎಂದು ಹೇಳಿದರು.
GDP Growth Rate 2021 - 2021 ರಲ್ಲಿ ಭಾರತದ ಆರ್ಥಿಕತೆಯು (Indian Economy) ಶೇಕಡಾ 8.3 ಮತ್ತು 2022 ರಲ್ಲಿ ಶೇ.7.5 ರಷ್ಟು ಇರಲಿದೆ ಎಂದು ವಿಶ್ವಬ್ಯಾಂಕ್ (World Bank) ತನ್ನ ಅಂದಾಜು ವ್ಯಕ್ತಪಡಿಸಿದೆ.
ಈ ನಕಲಿ ಕಾರ್ಡ್ಗಳನ್ನು ನೀಡುವ ಯಾವುದೇ ವ್ಯಕ್ತಿ ಅಥವಾ ಗುಂಪಿನೊಂದಿಗೆ ವಿಶ್ವಬ್ಯಾಂಕ್ಗೆ ಯಾವುದೇ ಸಂಬಂಧ ಹೊಂದಿಲ್ಲ. ಹೀಗಾಗಿ , ಜನರು ಇಂತಹ ವಂಚನೆಯ ಬಗ್ಗೆ ಎಚ್ಚರದಿಂದಿರಬೇಕು ಎಂದು ಎಚ್ಚರಿಸಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಅನ್ಶುಲಾ ಕಾಂತ್ ಅವರನ್ನು ವಿಶ್ವ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಹಣಕಾಸು ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಶುಕ್ರವಾರ ಪ್ರಕಟಿಸಿದ್ದಾರೆ.
ಪೆಪ್ಸಿಕೋ ಕಂಪನಿಯ ಮಾಜಿ ಸಿಇಓ ಇಂದ್ರಾ ನೂಯಿ ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಪ್ರಮುಖ ಸ್ಪರ್ಧಿ ಎಂದು ತಿಳಿದುಬಂದಿದೆ.ನ್ಯೂಯಾರ್ಕ್ ಟೈಮ್ಸ್ ನ ಪ್ರಕಾರ ನೂಯಿ ಹೆಸರನ್ನು ಅಮೆರಿಕಾದ ಶ್ವೇತ ಭವನ ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆ ಪರಿಗಣಿಸುವ ಸಾಧ್ಯತೆ ಇದೆ ಎಂದು ಪತ್ರಿಕೆ ವರದಿ ಮಾಡಿದೆ.
ವಿಶ್ವಸಂಸ್ಥೆ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಮತ್ತು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಮತ್ತು ಸಲಹೆಗಾರ್ತಿ ಇವಾಂಕಾ ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಸ್ಥಾನದಲ್ಲಿ ಅಲಂಕರಿಸುವುದಕ್ಕೆ ಸ್ಪರ್ಧಿಗಳಾಗಿದ್ದಾರೆ ಎಂದು ದಿ ಫೈನಾಂಷಿಯಲ್ ಟೈಮ್ಸ್ ವರದಿ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.