)
Google new policy: ಆಂಡ್ರಾಯ್ಡ್ ಮೊಬೈಲ್ಗಳನ್ನು ಬಳಸುವ ಪ್ರತಿಯೊಬ್ಬರು ಈ ಪ್ರಮುಖ ವಿಷಯದ ಬಗ್ಗೆ ತಿಳಿದುಕೊಳ್ಳಲೇಬೇಕು.. ಏಕೆಂದರೆ ಇನ್ನು ಮುಂದೆ ನೀವು ಯಾವುದೋ ಅಪರಿಚಿತ ಸೈಟ್ಗಳಿಂದ ಆಪ್ಗಳನ್ನು ಡೌನ್ಲೋಡ್ ಮಾಡುವ ಹಾಗಿಲ್ಲ. ಏಕೆಂದರೆ ಇದರಿಂದ ವೈಯಕ್ತಿಕ ಅಂಶಗಳು ಸೋರಿಕೆ ಮತ್ತು ಸೈಬರ್ ಅಪರಾಧಗಳನ್ನು ತಡೆಯಲು ಗೂಗಲ್ ಹೊಸ ನಿಯಮಗಳನ್ನು ಅಳವಡಿಸಲು ಮುಂದಾಗಿದೆ. ಇಲ್ಲಿಯವರೆಗೂ ನಾವು ಪ್ಲೇ ಸ್ಟೋರ್ ಹೊರಗಿನಿಂದ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿ ಬಳಕೆ ಮಾಡುತ್ತಿದ್ದರು. ಇದನ್ನು ಸೈಡ್ಲೋಡಿಂಗ್ ಎಂದು ಕರೆಯುತ್ತಾರೆ. ಆದರೆ ಇನ್ನು ಮುಂದೆ ಗೂಗಲ್ ಇದಕ್ಕೆ ನಿಯಮಗಳನ್ನು ತರಲು ನಿರ್ಧರಿಸಿದೆ.
ಹೊಸ ನಿಯಮ ಏನು?
2026ರಿಂದ, ಆಂಡ್ರಾಯ್ಡ್ ಫೋನ್ನಲ್ಲಿ ಪರಿಶೀಲಿಸಿದ (verified) ಡೆವಲಪರ್ಗಳ ಅಪ್ಲಿಕೇಶನ್ಗಳನ್ನು ಮಾತ್ರ ಬಳಸಲು ಅವಕಾಶ ಇರುತ್ತದೆ. ಅಂದರೆ, ಇದರನುಸಾರ ಇನ್ನು ಮುಂದೆ ಮೊಬೈಲ್ನಲ್ಲಿ ಬೇಕಾಬಿಟ್ಟಿಯಾಗಿ ಅನಧೀಕೃತ ಆಪ್ ಮತ್ತು ಸೈಟ್ಗಳನ್ನು ಬಳಸಿಕೊಳ್ಳಲು ಆಗುವುದಿಲ್ಲ. ಮೊದಲು ಗೂಗಲ್ ಅದನ್ನು ಪರಿಶೀಲಿಸಬೇಕು. ಇದಕ್ಕಾಗಿ, "ಆಂಡ್ರಾಯ್ಡ್ ಡೆವಲಪರ್ ಕನ್ಸೋಲ್" ಎಂಬ ಹೊಸ ಪ್ಲಾಟ್ಫಾರ್ಮ್ ತರಲಾಗುತ್ತಿದೆ. ಗೂಗಲ್ ಪ್ರಕಾರ, ಸೈಡ್ಲೋಡ್ ಮಾಡಿದ ಆ್ಯಪ್ಗಳಿಂದ 50 ಪಟ್ಟು ಹೆಚ್ಚು ಮಾಲ್ವೇರ್ ಅಪಾಯ ಉಂಟಾಗಿದೆ. ಕೆಲ ಹ್ಯಾಕರ್ಗಳು ನಿಷೇಧವಾದರೂ ಹೊಸ ಹೆಸರಿನಲ್ಲಿ ಹಿಂದಿರುಗುತ್ತಿದ್ದಾರೆ. ಪರಿಶೀಲನಾ ನಿಯಮದಿಂದ ನಿಜವಾದ ಮತ್ತು ನಕಲಿ ಡೆವಲಪರ್ಗಳನ್ನು ಸುಲಭವಾಗಿ ಬೇರ್ಪಡಿಸಬಹುದು. 2023ರಿಂದ ಪ್ಲೇ ಸ್ಟೋರ್ನಲ್ಲಿ ಈ ನಿಯಮ ಅನ್ವಯಿಸಿದ ನಂತರ, ಮಾಲ್ವೇರ್, ವಂಚನೆ, ಡೇಟಾ ಕಳ್ಳತನ ಕಡಿಮೆಯಾಗಿದೆ ಎಂದು ಗೂಗಲ್ ಹೇಳಿದೆ. ಈ ಹೊಸ ನಿಯಮ ಅಕ್ಟೋಬರ್ 2025ರಲ್ಲಿ ಪರೀಕ್ಷಾ ಹಂತವಾಗಿ ಆರಂಭವಾಗಲಿದೆ. ಮಾರ್ಚ್ 2026ರಿಂದ ಹೊಸ ಡೆವಲಪರ್ ಕನ್ಸೋಲ್ ಲಭ್ಯವಾಗುತ್ತದೆ. ನಂತರ, ಸೆಪ್ಟೆಂಬರ್ 2026ರಲ್ಲಿ ಮೊದಲು ಬ್ರೆಜಿಲ್, ಇಂಡೋನೇಷ್ಯಾ, ಸಿಂಗಾಪುರ ಮತ್ತು ಥೈಲ್ಯಾಂಡ್ ದೇಶಗಳಲ್ಲಿ ಜಾರಿಗೆ ಬರುತ್ತದೆ. ಕೊನೆಗೆ, 2027ರಲ್ಲಿ ಇದು ಜಗತ್ತಿನಾದ್ಯಂತ ಅನ್ವಯವಾಗಲಿದೆ.
ಬಳಕೆದಾರರ ಮೇಲೆ ಪರಿಣಾಮ
ಇನ್ನು ಮುಂದೆ, ಗೂಗಲ್ ಪರಿಶೀಲಿಸಿದ ಆ್ಯಪ್ಗಳನ್ನು ಮಾತ್ರ ಫೋನ್ನಲ್ಲಿ ಇನ್ಸ್ಟಾಲ್ ಮಾಡಬಹುದು. ಪರಿಶೀಲಿಸದ ಡೆವಲಪರ್ಗಳ ಆ್ಯಪ್ಗಳು ಕೆಲಸ ಮಾಡುವುದಿಲ್ಲ. ಆದರೆ, ಗೂಗಲ್ ಸೇವೆಗಳಿಲ್ಲದ ಚೀನಾ ಮುಂತಾದ ದೇಶಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಈ ನಿಯಮದಿಂದ ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆ ದೊರೆಯುತ್ತದೆ. ಆದರೆ ಸ್ವತಂತ್ರ ಡೆವಲಪರ್ಗಳಿಗೆ ಇದು ಒಂದು ಸವಾಲಾಗಬಹುದು. ಗೂಗಲ್ ತನ್ನ ನಿಯಂತ್ರಣವನ್ನು ಬಲಪಡಿಸಿ ಅಪಾಯಕಾರಿ ಆ್ಯಪ್ಗಳನ್ನು ತಡೆಯಲು ಈ ಹೆಜ್ಜೆಯನ್ನು ಇಟ್ಟಿದೆ.