ಸ್ನಾನ ಮಾಡಿಸುವುದಕ್ಕೂ ಬಂದಿದೆ AI ಚಾಲಿತ ಮೆಷಿನ್ !ಇದರೊಳಗೆ ಕೂರುವುದಷ್ಟೇ ನಿಮ್ಮ ಕೆಲಸ !
ಮನೆಯ ಎಲ್ಲಾ ಕೆಲಸಗಳಿಗೆ ಮೆಷಿನ್ ಇರುವಂತೆಯೇ ಇದೀಗ ಸ್ನಾನ ಮಾಡಿಸುವುದಕ್ಕೂ ಮೆಷಿನ್ ಬಂದಿದೆ. ಇದು ಸಾಮಾನ್ಯ ಮೆಷಿನ್ ಅಲ್ಲ, ಬದಲಿಗೆ AIಚಾಲಿತ ಯಂತ್ರ.
ತಂತ್ರಜ್ಙಾನದ ವಿಚಾರದಲ್ಲಿ ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಮನುಷ್ಯನ ಬ್ಯುಸಿ ಶೆಡ್ಯೂಲ್ ನಲ್ಲಿ ಪ್ರತಿಯೊಂದು ಕೆಲಸಕ್ಕೂ ಯಂತ್ರಗಳನ್ನೇ ಅವಲಂಬಿಸುತ್ತಿದ್ದಾನೆ. ಅಡುಗೆ ಮನೆಯಲ್ಲಿ ಬಹುತೇಕ ಕೆಲಸ ಮೆಷಿನ್ ಸಹಾಯದಿಂದಲೇ ನಡೆದು ಹೋಗುತ್ತದೆ. ಇದರ ಜೊತೆಗೆ ಬಟ್ಟೆ ಒಗೆಯುವುದು, ನೆಲ ಒರೆಸುವುದು, ಪಾತ್ರೆ ತೊಳೆಯುವುದು ಹೀಗೆ ಪ್ರತಿಯೊಂದು ಕೆಲಸಕ್ಕೂ ನಾವುಗಳು ಮೆಷಿನ್ ಅನ್ನೇ ಸಂಪೂರ್ಣವಾಗಿ ಅವಲಂಬಿಸಿರುವುದು.
ಇನ್ನು ಇಂದಿನ ಯುಗದಲ್ಲಿ ಸಮಯ ಎಂದರೆ ದುಡ್ಡು, ದುಡ್ಡು ಎಂದರೆ ಸಮಯ ಎನ್ನುವಂತಾಗಿದೆ. ಹಾಗಾಗಿ ಒಂದೊಂದು ನಿಮಿಷವೇ ಅತ್ಯಮೂಲ್ಯವೇ. ಹೀಗಿದ್ದಾಗ ಮೆಷಿನ್ ಮೊರೆ ಹೋಗದೆ ಇನ್ನೇನು ಮಾಡಲು ಸಾಧ್ಯ? .
ಇದನ್ನೂ ಓದಿ : Google Top Trending Search: 2024ರಲ್ಲಿ ಜನ ಗೂಗಲ್‌ನಲ್ಲಿ ಹೆಚ್ಚಾಗಿ ಸರ್ಚ್ ಮಾಡಿದ್ದು ಏನನ್ನ ಗೊತ್ತಾ?
ಮನೆಯ ಎಲ್ಲಾ ಕೆಲಸಗಳಿಗೆ ಮೆಷಿನ್ ಇರುವಂತೆಯೇ ಇದೀಗ ಸ್ನಾನ ಮಾಡಿಸುವುದಕ್ಕೂ ಮೆಷಿನ್ ಬಂದಿದೆ. ಇದು ಸಾಮಾನ್ಯ ಮೆಷಿನ್ ಅಲ್ಲ, ಬದಲಿಗೆ AIಚಾಲಿತ ಯಂತ್ರ. ತಂತ್ರಜ್ಞಾನದ ವಿಷಯದಲ್ಲಿ ವಿಶ್ವದಲ್ಲಿಯೇ ಅಗ್ರ ಸ್ಥಾನದಲ್ಲಿರುವ ಜಪಾನ್ ಈ ತಂತ್ರಜ್ಙಾನವನ್ನು ಅಭಿವೃದ್ದಿ ಪಡಿಸಿದೆ. ಈ ಮೆಷಿನ್ ಸ್ನಾನ ಮುಗಿಸಿ ದೇಹವನ್ನು ಸ್ವಚ್ಚ ಮಾಡಿಸಲು ಸಹಾಯ ಮಾಡುತ್ತದೆ.
AI ಚಾಲಿತ ಮಿಷನ್ ನಲ್ಲಿ ಮೊದಲು ವ್ಯಕ್ತಿ ಕುಳಿತಾಗ ಬಿಸಿನೀರು ವ್ಯಕ್ತಿಯ ಮೇಲೆ ಹನಿಗಳಂತೆ ಬೀಳುತ್ತದೆ. ಆ ನೀರು ವ್ಯಕ್ತಿಯ ಮೇಲೆ ಮೈಕ್ರೋಮೀಟರ್ ಗಾತ್ರದ ಗುಳ್ಳೆಗಳಾಗಿ ಒಡೆದು , ದೇಹವನ್ನು ಸಂಪೂರ್ಣವಾಗಿ ಕ್ಲೀನ್ ಆಗುತ್ತದೆ. ದೇಹವನ್ನು ಒಣಗಿಸುತ್ತದೆ. ಮತ್ತೊಂದು ವಿಶೇಷವೆಂದರೆ ಮನರಂಜನೆಗಾಗಿ ಈ ಮೆಷಿನ್ ನಲ್ಲಿ ಸಂಗೀತವನ್ನು ಕೂಡಾ ಅಳವಡಿಸಲಾಗಿದೆ ಎಂದು ಕಂಪನಿ ಹೇಳಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಸ್ನಾನ ಮಾಡಿಸುವ ಈ ಮೆಷಿನ್ ಅನ್ನು 1970 ರಲ್ಲಿಯೇ ಜಪಾನ್ ನ ಪ್ಯಾನಾಸೋನಿಕ್ ಕಂಪನಿ ತಯಾರಿಸಿತ್ತು. ಈಗ ಅದೇ ವಿನ್ಯಾಸದಲ್ಲಿ ಹೊಸ ಯಂತ್ರವನ್ನು ಅಭಿವೃದ್ದಿ ಪಡಿಸಲಾಗಿದೆ. ಈಗಾಗಲೇ ಅಡ್ವಾನ್ಸ್ ಬುಕಿಂಗ್ ಸಹ ಆರಂಭವಾಗಿದೆ . ಈ AIಚಾಲಿತ ಸ್ನಾನದ ಮಿಷನ್ ಕೇವಲ ಮನುಷ್ಯನ ದೇಹ ಮಾತ್ರವಲ್ಲದೆ, ಮನಸ್ಸನ್ನು ಸಹ ಶಾಂತಗೊಳಿಸುತ್ತದೆ ಎನ್ನಲಾಗಿದೆ.
ಪ್ರತಿ ಯೊಂದು ಕೆಲಸಕ್ಕೂ ಯಂತ್ರಗಳ ಮೊರೆ ಹೋಗುತ್ತಿರುವ ಮನುಷ್ಯನಿಗೆ ತನ್ನೆಲ್ಲಾ ಕೆಲಸ ಬೇಗನೆ, ಯಾವ ಕಿರಿ ಕಿರಿಯೂ ಇಲ್ಲದೆ ಮುಗಿದು ಹೋಗುತ್ತಿದೆ ಎನ್ನುವ ಖುಷಿ ಇದೆ. ಆದರೆ ಇದು ಆರೋಗ್ಯ ಸಮಸ್ಯೆಗಳನ್ನು ತಂದೊಡ್ದುವುದು ಕೂಡಾ ಸುಳ್ಳಲ್ಲ. ಯಂತ್ರಗಳ ಮೇಲಿನ ಅವಲಂಬನೆಯಿಂದಾಗಿ ಸಣ್ಣ ಕೆಲಸ ಮಾಡುವುದಕ್ಕೂ ಸೋಂಬೇರಿತನ ಕಾಡುತ್ತದೆ. ಕೈ ಕಾಲು ಸರಿಯಾಗಿ ಅಲುಗಾಡದೆ, ದೇಹಕ್ಕೆ ವ್ಯಾಯಾಮವೇ ಸಿಗದೇ ನಾನಾ ರೋಗಗಳು ಆವರಿಸಿಕೊಳ್ಳುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.