ಬೆಂಗಳೂರು : WhatsApp ಸಂದೇಶ ಕಳುಹಿಸುವ ಬಳಸುವ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಆಗಿದೆ. ಅದರ ವೈಶಿಷ್ಟ್ಯಗಳನ್ನು ಕೂಡಾ ಜನರು ತುಂಬಾ ಇಷ್ಟಪಡುತ್ತಾರೆ. ಆದರೆ ಈ ಅಪ್ಲಿಕೇಶನ್  ಮೂಲಕ ವಂಚನೆ ನಡೆದಿರುವ ಪ್ರಕರಣ ಕೂಡಾ ಆಗಾಗ ಕೇಳಿ ಬರುತ್ತಿದೆ. ಇದೀಗ ವಾಟ್ಸ್ ಆಪ್ ಮೂಲಕ ವಂಚನೆ ಮಾಡಿರುವ ಹೊಸ ಪ್ರಕರಣವೊಂದು ಮುನ್ನೆಲೆಗೆ ಬಂದಿದ್ದು, ಎಲ್ಲರಲ್ಲೂ  ಅಚ್ಚರಿ ಮೂಡಿಸಿದೆ. ಬ್ರಿಟನ್‌ನಲ್ಲಿ ಮಹಿಳೆಯೊಬ್ಬರಿಗೆ ವಾಟ್ಸಾಪ್‌ ಮೂಲಕ ವಂಚಿಸಿ ಸುಮಾರು  15.6 ಲಕ್ಷ ರೂಪಾಯಿ ವಂಚಿಸಲಾಗಿದೆ. ಪೌಲಾ ಬೊಟನ್ ಎಂಬ ಮಹಿಳೆಗೆ ವಂಚಿಸಲಾಗಿದೆ. ಪೌಲಾ ಬೊಟನ್  ಅವರು ಮಗಳು ಎಂದು ಹೇಳಿ ಸಂದೇಶ ಕಳುಹಿಸಿ  ವಂಚಿಸಲಾಗಿದೆ.  


COMMERCIAL BREAK
SCROLL TO CONTINUE READING

ಏನಿದು WhatsApp ಹಗರಣ : 
 ಪೌಲಾ ಬೊಟನ್ ಅವರ ಮಗಳು ಎಂದು ಹೇಳಿ ನಂಬರ್ ವೊಂದರಿಂದ ಮೆಸೇಜ್ ಬಂದಿದೆ. ಈ ಮೆಸೇ ಜ್ ನಲ್ಲಿ ತಾನು ಹೊಸ ನಂಬರ್ ಅನ್ನು ತೆಗೆದುಕೊಂಡಿದ್ದು, ಹೊಸ ನಂಬರ್ ಅನ್ನು ಸೇವ್ ಮಾಡಿಕೊಳ್ಳುವಂತೆ  ಪೌಲಾ ಬೊಟನ್ ಅವರಿಗೆ ಸೂಚಿಸಲಾಗಿದೆ.  ಅಲ್ಲದೆ,  ತನಗೆ ಹಣದ ಅವಶ್ಯಕತೆ ಇದೆ ಎಂದು ಹೇಳಿ ಪಾವತಿದಾರರ ವಿವರಗಳು ಮತ್ತು ಖಾತೆ ಸಂಖ್ಯೆಯನ್ನುಕೂಡಾ ಕಳುಹಿಸಲಾಗಿತ್ತು. ಇದು ತಮ್ಮ ಮಗಳೇ ಎಂದು ಭಾವಿಸಿದ  ಪೌಲಾ ಬೊಟನ್ ಕೇಳಿರುವ ಹಣವನ್ನು ವರ್ಗಾಯಿಸಿದ್ದಾರೆ.  ಆದರೆ ಇದು ತಮ್ಮ ಮಗಳಲ್ಲ. ಮಗಳ ಹೆಸರಿನಲ್ಲಿ ವಂಚಿಸಲಾಗಿದೆ ಎನ್ನುವ ವಿಚಾರ  ಪೌಲಾ ಬೊಟನ್ ಅವರಿಗೆ ನಂತರ ಗೊತ್ತಾಗಿದೆ.  ವಾಟ್ಸಾಪ್ ವಂಚನೆಗಳು ಎಲ್ಲೆಡೆ ಕಂಡುಬರುತ್ತಿದ್ದು, ಅಮಾಯಕ ಬಳಕೆದಾರರನ್ನು ವಂಚಿಸಲು ಹ್ಯಾಕರ್‌ಗಳು ಹೊಸ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.


ಇದನ್ನೂ ಓದಿ : Samsung: ಬಜೆಟ್ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯ ಹೊಂದಿರುವ ಸ್ಯಾಮ್ಸಂಗ್ 5G ಸ್ಮಾರ್ಟ್‌ಫೋನ್


ಹೈಜಾಕ್  ಆಗುತ್ತಿದೆ WhatsApp :
ಇತ್ತೀಚೆಗೆ, ವಂಚಕರು ಫೋನ್ ಕರೆ ಮೂಲಕ WhatsApp ಖಾತೆಯನ್ನು ಹೈಜಾಕ್ ಮಾಡುತ್ತಿದ್ದಾರೆ. ಕ್ಲೌಡ್‌ಸೆಕ್ ಸಿಇಒ ರಾಹುಲ್ ಸಸಿ ಈ ಹಗರಣವನ್ನು ಬಯಲಿಗೆಳೆದಿದ್ದಾರೆ. ಸೈಬರ್ ತಜ್ಞರ ಪ್ರಕಾರ,  ವಂಚನೆಗೊಳಗಾದವರು ಹ್ಯಾಕರ್‌ಗಳಿಂದ ಕರೆಗಳನ್ನು ಸ್ವೀಕರಿಸುತ್ತಾರೆ. ಕರೆಯನ್ನು ಸ್ವೀಕರಿಸಿದ ಕೂಡಲೇ ಅವರಿಗೆ '67' ಅಥವಾ '405' ನಿಂದ ಪ್ರಾರಂಭವಾಗುವ ಸಂಖ್ಯೆಗಳನ್ನು ಡಯಲ್ ಮಾಡುವಂತೆ ಹೇಳಲಾಗುತ್ತದೆ. ಈ ಸೂಚನೆಗಳನ್ನು ಅನುಸರಿಸುವವರು ತಮ್ಮ ಖಾತೆಯಿಂದ ಲಾಗ್ ಔಟ್ ಆಗುತ್ತಾರೆ ಮತ್ತು ಹ್ಯಾಕರ್‌ಗಳು ಅದನ್ನು ಹೈಜಾಕ್ ಮಾಡುತ್ತಾರೆ.


WhatsApp ಹಗರಣಕ್ಕೆ ಬಲಿಯಾಗುವುದನ್ನು ತಪ್ಪಿಸುವುದು ಹೇಗೆ?
1. ಅಪರಿಚಿತ ಸಂಖ್ಯೆಗಳಿಂದ ಕರೆಗಳನ್ನು ರೀಸಿವ್ ಮಾಡಬಾರದು . 
2. ನೀವು ಅಪರಿಚಿತ ಸಂಖ್ಯೆಯಿಂದ ಕರೆಯನ್ನು ರಿಸೀವ್ ಮಾಡಿದರೆ OTP ಸ್ವೀಕರಿಸಿದ ನಂತರ, ಅದನ್ನು ಡಯಲ್ ಮಾಡಬೇಡಿ. ಯಾವುದೇ ಹಣಕಾಸಿನ ವಿವರಗಳನ್ನು ಹಂಚಿಕೊಳ್ಳಲೇ ಬಾರದು. 
3. ಸೆಟ್ಟಿಂಗ್‌ ಹೆಲ್ಪ್ ಗೆ ಹೋಗಿ Contact Usಗೆ ಕ್ಲಿಕ್ ಮಾಡುವ ಮೂಲಕ ನೇರವಾಗಿ WhatsApp ನಲ್ಲಿ ಹಗರಣವನ್ನು ವರದಿ ಮಾಡಬಹುದು.


ಇದನ್ನೂ ಓದಿ : ಏರ್‌ಟೆಲ್ ಬಳಕೆದಾರರಿಗೆ ಗುಡ್ ನ್ಯೂಸ್! ಫ್ರೀ ಆಗಿ ಸಿಗಲಿದೆ 1ಜಿಬಿ ಡೇಟಾ!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.