WhatsApp : ನಾನಾ ಕಾರಣಗಳಿಂದಾಗಿ ಹಲವು ಬಾರಿ ಕೆಲವು ವ್ಯಕ್ತಿಗಳನ್ನು ಬ್ಲಾಕ್ ಮಾಡಬೇಕು ಎಂದೆನಿಸುವುದು ಸಹಜ. ನೀವೂ ಸಹ ವಾಟ್ಸಾಪ್‌ನಲ್ಲಿ ಯಾರನ್ನಾದರೂ ಬ್ಲಾಕ್ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ ಅದಕ್ಕೂ ಮೊದಲು ಕೆಲವು ವಿಷಯಗಳನ್ನು ತಿಳಿಯುವುದು ಬಹಳ ಮುಖ್ಯ. ಸಾಮಾನ್ಯವಾಗಿ ವಾಟ್ಸಾಪ್‌ನಲ್ಲಿ ಯಾವುದೇ ವ್ಯಕ್ತಿಯನ್ನು ಬ್ಲಾಕ್ ಮಾಡಿದ ನಂತರ ಹಲವು ಬಾರಿ ಮನಸ್ಸಿನಲ್ಲಿ ಹಲವು ರೀತಿಯ ಪ್ರಶ್ನೆಗಳು ಉದ್ಬವಿಸುತ್ತವೆ.


COMMERCIAL BREAK
SCROLL TO CONTINUE READING

* ಸಂದೇಶಗಳು, ಫೋಟೋಗಳು, ಸ್ಟೇಟಸ್, ಲಾಸ್ಟ್ ಸೀನ್: 
ಯಾವುದೇ ಸಂಪರ್ಕವನ್ನು ನಿರ್ಬಂಧಿಸಿದಾಗ, ಬಳಕೆದಾರರ ಸಂದೇಶಗಳು, ಫೋಟೋಗಳು, ಸ್ಟೇಟಸ್, ಲಾಸ್ಟ್ ಸೀನ್ ಬ್ಲಾಕರ್‌ನ ಅಪ್ಲಿಕೇಶನ್‌ನಿಂದ ಕಣ್ಮರೆಯಾಗುತ್ತವೆ. ಆದರೆ, ನೀವು ನಿಮ್ಮ ಸಂದೇಶಗಳು, ಫೋಟೋಗಳು,  ಸ್ಟೇಟಸ್ ಮತ್ತು ಲಾಸ್ಟ್ ಸೀನ್ ಇತ್ಯಾದಿಗಳನ್ನು ನಿರ್ಬಂಧಿಸದೆ ಮರೆಮಾಡಬಹುದು. ಇದಕ್ಕಾಗಿ, ನಿಮ್ಮ ವಾಟ್ಸಾಪ್ ಚಾಟ್‌ನ ಮೇಲಿನ ಬಲ ಮೂಲೆಯಲ್ಲಿ ನೀಡಲಾದ ಮೂರು ಚುಕ್ಕೆಗಳ ಮೇಲೆ ನೀವು ಕ್ಲಿಕ್ ಮಾಡಬೇಕು ಮತ್ತು ನಂತರ 'ಸೆಟ್ಟಿಂಗ್‌ಗಳು', 'ಖಾತೆ' ಮತ್ತು 'ಗೌಪ್ಯತೆ' ಗೆ ಹೋಗಿ ಸೆಟ್ಟಿಂಗ್ಸ್ ಬದಲಿಸಬಹುದು.


* ಗ್ರೂಪ್ ಮೆಸೇಜ್: 
ನೀವು ಬ್ಲಾಕ್ ಮಾಡಲಾದ ವ್ಯಕ್ತಿ ಯಾವುದೇ ಗೂಪ್ ನಲ್ಲಿದ್ದರೆ  ಅವರು ನಿಮಗೆ ಸಂದೇಶವನ್ನು ಕಳುಹಿಸಬಹುದು. ಟ್ಯಾಗ್ ಕೂಡ ಮಾಡಬಹುದು. ಗುಂಪಿಗೆ ಕಳುಹಿಸಲಾದ ಫೋಟೋಗಳು, ವೀಡಿಯೊಗಳು ಮತ್ತು ಆಡಿಯೊಗಳನ್ನು ವೀಕ್ಷಿಸಬಹುದಾಗಿದೆ. ಇದನ್ನು ತಪ್ಪಿಸಲು, ನೀವು ಆ ಗ್ರೂಪ್ ನಿಂದ ಎಕ್ಸಿಟ್ ಆಗಬೇಕು, ಇಲ್ಲವೇ ನೀವು ಬ್ಲಾಕ್ ಮಾಡಲು ಬಯಸುವ ವ್ಯಕ್ತಿಯನ್ನು ಅದರಿಂದ ತೆಗೆಯುವಂದೆ ಅಡ್ಮಿನ್ ಗೆ ಹೇಳಬಹುದು.


ಇದನ್ನೂ ಓದಿ- WhatsApp ಹೊರ ತಂದಿದೆ ಹೊಸ ವೈಶಿಷ್ಟ್ಯ ..! ರಿಯಾಕ್ಷನ್ ಇಮೋಜಿ ಸಂಖ್ಯೆಗಳಲ್ಲಿ ಹೆಚ್ಚಳ


* ಬ್ಲಾಕ್ ಮಾಡಿದ ನಂತರವೂ ಕಾಂಟಾಕ್ಟ್ ಲಿಸ್ಟ್ ನಲ್ಲಿ ಹೆಸರಿರುತ್ತೆ:
ನೀವು ವಾಟ್ಸಾಪ್‌ನಲ್ಲಿ ಯಾರನ್ನೇ ಬ್ಲಾಕ್ ಮಾಡಿದ್ದರೂ ಸಹ ನಿಮ್ಮ ಸಂಪರ್ಕದಲ್ಲಿ ಆ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದರೆ ನಿಮ್ಮ ಕಾಂಟಾಕ್ಟ್ ಲಿಸ್ಟ್ ನಲ್ಲಿ ಅವರ ಹೆಸರು ಇರಲಿದೆ.


* ಯಾರನ್ನಾದರೂ ನಿರ್ಬಂಧಿಸಿದ ನಂತರ ಅವರು ಕಾಲ್, ಮೆಸೇಜ್ ಮಾಡಲು ಸಾಧ್ಯವಾಗುವುದಿಲ್ಲ:
ವಾಟ್ಸಾಪ್‌ನಲ್ಲಿ  ಯಾರನ್ನಾದರೂ ನಿರ್ಬಂಧಿಸಿದ ನಂತರ, ಅವರು ನಿಮಗೆ ಸಂದೇಶಗಳನ್ನು ಕಳುಹಿಸಲು ಅಥವಾ ಅಪ್ಲಿಕೇಶನ್ ಮೂಲಕ ಕರೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಮತ್ತೊಂದೆಡೆ, ನಿಮ್ಮ ಫೋನ್‌ನಿಂದ ನೀವು ಯಾರೊಬ್ಬರ ಸಂಖ್ಯೆಯನ್ನು ತೆಗೆದುಹಾಕಿದರೂ, ಅವರು ನಿಮಗೆ ಕರೆ ಮಾಡಬಹುದು.


ಇದನ್ನೂ ಓದಿ- ಸ್ಟೇಟಸ್ ಅಪ್ಡೇಟ್ ಕುರಿತಾದ ಹೊಸ ವೈಶಿಷ್ಟ್ಯ ಪರಿಚಯಿಸುತ್ತಿರುವ WhatsApp


* ಬ್ಲಾಕ್ ಮಾಡಿದ ಸಂಖ್ಯೆಯಿಂದ ಕರೆ ಬರಬಹುದೇ?
ನೀವು ವಾಟ್ಸಾಪ್‌ನಲ್ಲಿ  ಯಾರನ್ನಾದರೂ ಬ್ಲಾಕ್ ಮಾಡಿದರೆ ನಿಮಗೆ ಆ ಸಂಖ್ಯೆಯಿಂದ ವಾಟ್ಸಾಪ್ ಕರೆ ಅಷ್ಟೇ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಅವರು ಸಾಮಾನ್ಯ ಕರೆ ಮಾಡಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.