ಭಾರತದ ಮಾರುಕಟ್ಟೆಗೆ Boult AirBass ProBuds!ಬೆಲೆ, ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ

Boult AirBass ProBuds ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಸಂಗೀತ ಮತ್ತು ಫೋನ್ ಕರೆಗಳ ಸುಲಭ ನಿಯಂತ್ರಣಕ್ಕಾಗಿ AirBass ProBuds ಸಾಧನವು ಸ್ಪರ್ಶ ಸಂವೇದಕವನ್ನು ಹೊಂದಿದೆ.

Last Updated : Apr 24, 2022, 03:14 PM IST
  • ಭಾರತದ ಮಾರುಕಟ್ಟೆಗೆ Boult AirBass ProBuds
  • ಟ್ರೂ ವೈರ್‌ಲೆಸ್ ಇಯರ್ ಫೋನ್‌ ಇದಾಗಿದ್ದು, ಬಜೆಟ್‌ ಫ್ರೆಂಡ್ಲಿಯಾಗಿದೆ
  • ಕ್ವಾಡ್ ಮೈಕ್ರೊಫೋನ್ ಸೆಟಪ್‌ನೊಂದಿಗೆ ENC ವೈಶಿಷ್ಟ್ಯವನ್ನು ನೀಡುತ್ತದೆ
ಭಾರತದ ಮಾರುಕಟ್ಟೆಗೆ Boult AirBass ProBuds!ಬೆಲೆ, ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ  title=
ಬೋಲ್ಟ್‌

Boult ತನ್ನ ವಿನೂತನ AirBass ProBuds ಸಾಧನವನ್ನು ಬಿಡುಗಡೆ ಮಾಡಿದೆ. ನೂತನ Boult Audio AirBass ProBuds ಸಾಧನವನ್ನು Apple ಕಂಪನಿಯ AirPods Gen 2 ಗೆ ಹೋಲುವ ವಿನ್ಯಾಸದೊಂದಿಗೆ ತಯಾರಿಸಿದಂತಿದೆ. ಟ್ರೂ ವೈರ್‌ಲೆಸ್ ಇಯರ್ ಫೋನ್‌ ಇದಾಗಿದ್ದು, ಬಜೆಟ್‌ ಫ್ರೆಂಡ್ಲಿಯಾಗಿದೆ. ಗುಣಮಟ್ಟದ ಎಬಿಎಸ್ ಅನ್ನು ಹೊಂದಿದ್ದು, ನೀರು ಮತ್ತು ಬೆವರಿನಿಂದ ರಕ್ಷಿಸುವ ಶೆಲ್ ಅನ್ನು ಸಹ ಒಳಗೊಂಡಿದೆ.

ಇದನ್ನೂ ಓದಿ:ರಾಜ್ಯದಲ್ಲಿ ತರಕಾರಿ ಬೆಲೆ ಕೊಂಚ ಏರಿಳಿತ: ಇಂದಿನ ದರ ಇಂತಿದೆ

ENC ವೈಶಿಷ್ಟ್ಯ, ಟಚ್‌ ಸೆನ್ಸಾರ್, 24 ಗಂಟೆಗಳ ಪ್ಲೇಬ್ಯಾಕ್ ಸಮಯ ಮತ್ತು 10 ನಿಮಿಷಗಳ ತ್ವರಿತ ಚಾರ್ಜ್‌ನೊಂದಿಗೆ 100 ನಿಮಿಷಗಳ ಪ್ಲೇಬ್ಯಾಕ್ ಸಾಮರ್ಥ್ಯ ಹೊಂದಿದೆ. ಅಮೆಜಾನ್‌ ಆಫರ್‌ ಸೇಲ್‌ನಲ್ಲಿ ಎಲೆಕ್ಟ್ರಾನಿಕ್‌ ವಸ್ತುಗಳ ಮೇಲೆ ಶೇ.45 ರಷ್ಟು ರಿಯಾಯಿತಿ ನೀಡಲಾಗಿದ್ದು, ಸಂಗೀತ ಮತ್ತು ಫೋನ್ ಕರೆಗಳ ಸುಲಭ ನಿಯಂತ್ರಣಕ್ಕಾಗಿ AirBass ProBuds ಸಾಧನವು ಸ್ಪರ್ಶ ಸಂವೇದಕವನ್ನು ಹೊಂದಿದೆ.

ಟಚ್‌ ಸೆನ್ಸಾರ್‌ನಿಂದಾಗಿ ಬಳಕೆದಾರರು ಸಂಗೀತವನ್ನು ಪ್ಲೇ/ಪಾಸ್‌ ಗೊಳಿಸಬಹುದು. ಮುಂದಿನ ಅಥವಾ ಹಿಂದಿನ ಟ್ರ್ಯಾಕ್‌ಗೆ ಸ್ಕಿಪ್ ಮಾಡಬಹುದು, ಸುಲಭವಾಗಿ ಕರೆಗಳಿಗೆ ಉತ್ತರಿಸಬಹುದು. ಅಲ್ಲದೇ, Google ಅಸಿಸ್ಟೆಂಟ್ ಅನ್ನು ಸಹ ಬಳಸಬಹುದಾಗಿದೆ.

ಇದು ಕ್ವಾಡ್ ಮೈಕ್ರೊಫೋನ್ ಸೆಟಪ್‌ನೊಂದಿಗೆ ENC ವೈಶಿಷ್ಟ್ಯವನ್ನು ನೀಡುತ್ತದೆ. ಉತ್ತಮ ಆಡಿಯೋ ಅನುಭವವನ್ನು ಒದಗಿಸಲು ENC ಯಾವುದೇ ಬಾಹ್ಯ ಶಬ್ದವನ್ನು ನಿರ್ಬಂಧಿಸುತ್ತದೆ. ಬ್ಲೂಟೂತ್ 5.1 ಮತ್ತು USB ಟೈಪ್-ಸಿ ಪೋರ್ಟ್ ಮಾದರಿ ಚಾರ್ಜಿಂಗ್ ಕೇಸ್ ಅನ್ನು ಹೊಂದಿದೆ. 

ಇದನ್ನೂ ಓದಿ:ಇಂದು ವರನಟ ಡಾ.ರಾಜ್ ಕುಮಾರ್ 94 ಹುಟ್ಟುಹಬ್ಬ: ಅಭಿಮಾನಿ ಸಂಘಗಳಿಂದ ರಥೋತ್ಸವ

AirBass ProBuds ಸಾಧನವನ್ನು 10 ನಿಮಿಷಗಳ ತ್ವರಿತ ಚಾರ್ಜ್‌ನೊಂದಿಗೆ 100 ನಿಮಿಷಗಳ ಪ್ಲೇಬ್ಯಾಕ್ ಸಾಮರ್ಥ್ಯ ಹೊಂದಿದೆ. 24 ಗಂಟೆಗಳ ಪ್ಲೇಬ್ಯಾಕ್ ಸಮಯ ಹಾಗೂ ಒಂದೇ ಚಾರ್ಜ್‌ನಲ್ಲಿ ಆರು ಗಂಟೆಗಳ ಪ್ಲೇಬ್ಯಾಕ್ ಅನ್ನು ಪಡೆಯಬಹುದು.

ಭಾರತದಲ್ಲಿ ನೂತನ Boult Audio AirBass ProBuds ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ Amazon India ಮತ್ತು Boult Audio ನ ಅಧಿಕೃತ ವೆಬ್‌ಸೈಟ್‌ನಿಂದ ಇಂದಿನಿಂದಲೇ ಖರೀದಿಸಬಹುದು ಎಂದು Boult ಕಂಪೆನಿ ತಿಳಿಸಿದೆ. 1,499 ರೂ.ಗಳ ಅತ್ಯಂತ ಬಜೆಟ್ ಬೆಲೆಯಲ್ಲಿ ಬಿಡುಗಡೆಗೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News