ಲಾಂಚ್ ಆಯಿತು BSNL 5G ಸೇವೆ !ಇನ್ನು ಸಿಗುವುದು ಸೂಪರ್ ಸ್ಪೀಡ್ ನೆಟ್ವರ್ಕ್

BSNL ತನ್ನ ಕ್ವಾಂಟಮ್ 5G ಸೇವೆಯನ್ನು ಆಗಿ ಪ್ರಾರಂಭಿಸಿದ್ದು, ಇದಕ್ಕೆ  Q-5G ಎಂದು ಹೆಸರಿಸಲಾಗಿದೆ. ಇದೀಗ ಈ ಸೇವೆಯು ಸಾಫ್ಟ್ ಲಾಂಚ್ ಹಂತದಲ್ಲಿದೆ.  

Written by - Ranjitha R K | Last Updated : Jun 19, 2025, 05:05 PM IST
  • ಬಿಎಸ್‌ಎನ್‌ಎಲ್ ಕ್ವಾಂಟಮ್ 5G ಸೇವೆ ಆರಂಭ
  • ಈ ಸೇವೆಗೆ ಅಧಿಕೃತವಾಗಿ ಕ್ಯೂ-5ಜಿ ಎಂದು ಹೆಸರು
  • ಕಮರ್ಷಿಯಲ್ ಲಾಂಚಿಂಗ್ ಇನ್ನಷ್ಟೇ ಆಗಬೇಕಿದೆ.
ಲಾಂಚ್ ಆಯಿತು BSNL 5G ಸೇವೆ !ಇನ್ನು ಸಿಗುವುದು ಸೂಪರ್ ಸ್ಪೀಡ್  ನೆಟ್ವರ್ಕ್

ಭಾರತ ಸರ್ಕಾರದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ತನ್ನ ಕ್ವಾಂಟಮ್ 5G ಸೇವೆಯನ್ನು ಪ್ರಾರಂಭಿಸಿದೆ. ಬಳಕೆದಾರರ ಸಲಹೆಗಳ ನಂತರ, ಈ ಸೇವೆಗೆ ಅಧಿಕೃತವಾಗಿ ಕ್ಯೂ-5ಜಿ ಎಂದು ಹೆಸರಿಸಲಾಗಿದೆ. ಇದೀಗ ಈ ಸೇವೆಯು ಸಾಫ್ಟ್ ಲಾಂಚ್ ಹಂತದಲ್ಲಿದೆ ಮತ್ತು ಅದರ  ಕಮರ್ಷಿಯಲ್ ಲಾಂಚಿಂಗ್  ಇನ್ನಷ್ಟೇ ಆಗಬೇಕಿದೆ. 

Add Zee News as a Preferred Source

ಬಿಎಸ್‌ಎನ್‌ಎಲ್ ಇತ್ತೀಚೆಗೆ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಕಂಪನಿಯ ಸಿಎಂಡಿ ಎ. ರಾಬರ್ಟ್ ಜೆ. ರವಿ ಈ ಹೊಸ ಕ್ವಾಂಟಮ್ 5G FWA ಸೇವೆಯನ್ನು ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಪ್ರಾರಂಭಿಸಿದ್ದಾರೆ ಎಂದು ತಿಳಿಸಿದೆ. ಪ್ರಸ್ತುತ, ಈ ಸೇವೆ ಕೆಲವು ಆಯ್ದ ನಗರಗಳಲ್ಲಿ ಮಾತ್ರ ಲಭ್ಯವಿದೆ. ಆದರೆ ಕಂಪನಿಯು ಶೀಘ್ರದಲ್ಲೇ ಇದನ್ನು ದೇಶದ ಇತರ ನಗರಗಳಿಗೂ ವಿಸ್ತರಿಸಲು ಯೋಜಿಸುತ್ತಿದೆ.

ಇದನ್ನೂ ಓದಿ : ಸ್ಮಾರ್ಟ್‌ಫೋನ್‌ಗಳ ಬಗ್ಗೆ ಬಾಬಾ ವೆಂಗಾ ಆಘಾತಕಾರಿ ಭವಿಷ್ಯವಾಣಿ!ಒಂದು ವೇಳೆ ಇದು ನಿಜವಾದರೆ.. ?

ಹೈದರಾಬಾದ್‌ನಲ್ಲಿ ಕ್ರಾಂತಿಕಾರಿ ಬಿಎಸ್‌ಎನ್‌ಎಲ್ ಕ್ವಾಂಟಮ್ 5G ಎಫ್‌ಡಬ್ಲ್ಯೂಎ ಸೇವೆಯನ್ನು ಪ್ರಾರಂಭಿಸಲಾಗಿದೆ. ಇದು ಈಗ ಆಯ್ದ ನಗರಗಳಲ್ಲಿ ಲಭ್ಯವಿದೆ. ಬಿಎಸ್‌ಎನ್‌ಎಲ್ ಕ್ಯೂ-5G ಎಫ್‌ಡಬ್ಲ್ಯೂಎಯೊಂದಿಗೆ ಅತ್ಯಾಕರ್ಷಕ ವೇಗದ ಇಂಟರ್ನೆಟ್ ಅನ್ನು ಆನಂದಿಸಿ ಎಂದು ಬಿಎಸ್‌ಎನ್‌ಎಲ್ ಪೋಸ್ಟ್‌ನಲ್ಲಿ ಬರೆದಿದೆ. 

ಕ್ವಾಂಟಮ್ 5G ಸೇವೆಯ ಮೂಲಕ, BSNL ಬಳಕೆದಾರರು ಹೈ-ಸ್ಪೀಡ್ ಇಂಟರ್ನೆಟ್ ಅನ್ನು ಆನಂದಿಸಲಿದ್ದಾರೆ, ಇದು ಸ್ಟ್ರೀಮಿಂಗ್, ಗೇಮಿಂಗ್, ವೀಡಿಯೊ ಕರೆಗಳು ಮತ್ತು  ವರ್ಕ್ ಫ್ರಮ್ ಹೋಂನಂಥಹ ಕಾರ್ಯಗಳಿಗೆ ಪ್ರಯೋಜನಕಾರಿಯಾಗಿದೆ.

1 ಲಕ್ಷ ಹೊಸ ಮೊಬೈಲ್ ಟವರ್‌ಗಳಿಗೆ ಸಿದ್ಧತೆ : 
ತನ್ನ ನೆಟ್‌ವರ್ಕ್ ವ್ಯಾಪ್ತಿಯನ್ನು ಸುಧಾರಿಸಲು, ಬಿಎಸ್‌ಎನ್‌ಎಲ್ ಮುಂಬರುವ ದಿನಗಳಲ್ಲಿ 1 ಲಕ್ಷ ಹೊಸ 4G ಮತ್ತು 5G ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕಾಗಿ ಕೇಂದ್ರ ಸಚಿವ ಸಂಪುಟದ ಅನುಮೋದನೆಗಾಗಿ ಕಾಯುತ್ತಿದೆ. 

ಕಳೆದ ವರ್ಷವೂ ಬಿಎಸ್ಎನ್ಎಲ್ ಇಷ್ಟೇ ಸಂಖ್ಯೆಯ ಟವರ್‌ಗಳನ್ನು ಸ್ಥಾಪಿಸುವುದಾಗಿ ಭರವಸೆ ನೀಡಿತ್ತು. ಇಲ್ಲಿಯವರೆಗೆ 70,000ಕ್ಕೂ ಹೆಚ್ಚು ಟವರ್‌ಗಳನ್ನು ಸಕ್ರಿಯಗೊಳಿಸಲಾಗಿದೆ. ಈ ಟವರ್‌ಗಳು ಸಂಪೂರ್ಣವಾಗಿ ಸಕ್ರಿಯಗೊಂಡ ನಂತರ, ದೇಶಾದ್ಯಂತ ಬಿಎಸ್ಎನ್ಎಲ್‌ನ ಸಂಪರ್ಕವು ಮಹತ್ತರವಾಗಿ ಸುಧಾರಿಸುತ್ತದೆ.

ಇದನ್ನೂ ಓದಿ : ಈ Games ಡೌನ್ ಲೋಡ್ ಆಗುತ್ತಲೇ ಹ್ಯಾಕ್ ಆಗುವುದು ಸ್ಮಾರ್ಟ್ ಫೋನ್ ! ನಿಮ್ಮ ಫೋನ್ ನಲ್ಲಿರುವ ಗೇಮ್ ಗಳನ್ನು ಚೆಕ್ ಮಾಡಿಕೊಳ್ಳಿ !

ಈ ದೊಡ್ಡ ಯೋಜನೆಯನ್ನು ಬೆಂಬಲಿಸಲು, ಕಂಪನಿಯು 13,000 ಕೋಟಿ ಹೂಡಿಕೆ ಮಾಡಿದೆ. ಇದನ್ನು ಮುಂದಿನ 10 ವರ್ಷಗಳ ಕಾಲ ಈ ಟವರ್‌ಗಳ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಖರ್ಚು ಮಾಡಲಾಗುವುದು. ಮೇ 2023 ರಲ್ಲಿ, ಬಿಎಸ್‌ಎನ್‌ಎಲ್ ಎರಿಕ್ಸನ್‌ಗೆ ಟೆಲಿಕಾಂ ಉಪಕರಣಗಳನ್ನು ಸ್ಥಾಪಿಸುವ ಒಪ್ಪಂದವನ್ನು ನೀಡಿತು. ಆದರೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ತೇಜಸ್ ನೆಟ್‌ವರ್ಕ್‌ಗೆ ಟವರ್ ಸ್ಥಾಪನೆಯ ಜವಾಬ್ದಾರಿಯನ್ನು ವಹಿಸಲಾಯಿತು.

ಈ ಸಂಪೂರ್ಣ ಪ್ರಕ್ರಿಯೆಯಡಿಯಲ್ಲಿ, ಇಲ್ಲಿಯವರೆಗೆ ಒಟ್ಟು 1 ಲಕ್ಷ 4G/5G ಟವರ್‌ಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ 70,000 ಕ್ಕೂ ಹೆಚ್ಚು ಟವರ್‌ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು ಸೇವೆಯನ್ನು ಒದಗಿಸುತ್ತಿವೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News