)
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ BSNL ತನ್ನ ಬಳಕೆದಾರರಿಗಾಗಿ ನಿರಂತರವಾಗಿ ಅತ್ಯುತ್ತಮ ಮತ್ತು ಬಜೆಟ್ ಸ್ನೇಹಿ ರೀಚಾರ್ಜ್ ಪ್ಲಾನ್ಗಳನ್ನು ಪರಿಚಯಿಸುತ್ತಿದೆ. ಖಾಸಗಿ ಟೆಲಿಕಾಂ ಕಂಪನಿಗಳ ಪ್ಲಾನ್ಗಳ ಏರುತ್ತಿರುವ ಬೆಲೆಗಳ ನಡುವೆ, ಈ ಪ್ಲಾನ್ಗಳು ಪ್ರಯೋಜನಕಾರಿಯಾಗಿದೆ. ಪದೇ ಪದೇ ರೀಚಾರ್ಜ್ ಮಾಡುವ ತೊಂದರೆಯನ್ನು ತಪ್ಪಿಸಬೇಕಾದರೆ BSNLನ ಕೇವಲ 347 ರೂ. ಪ್ಲಾನ್ ನಿಮಗೆ ಉತ್ತಮ ಆಯ್ಕೆಯಾಗಬಹುದು. ಕಂಪನಿಯು ತನ್ನ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ X ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಯೋಜನೆಯ ವಿವರಗಳನ್ನು ಹಂಚಿಕೊಂಡಿದೆ.
BSNL 347 ರೂ. ಪ್ಲಾನ್ ವೈಶಿಷ್ಟ್ಯವೇನು ? :
BSNL ನ 347 ರೂ. ಪ್ಲಾನ್ ದೀರ್ಘಾವಧಿಯ ವ್ಯಾಲಿಡಿಟಿ ಮತ್ತು ಹೆಚ್ಚಿನ ಡೇಟಾ ಎರಡನ್ನೂ ಬಯಸುವ ಬಳಕೆದಾರರಿಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯು ಪೂರ್ಣ 50 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಅಂದರೆ ಸರಿ ಸುಮಾರು ಒಂದೂವರೆ ತಿಂಗಳವರೆಗೆ ರೀಚಾರ್ಜ್ ಮಾಡುವ ಬಗ್ಗೆ ಚಿಂತಿಸಬೇಕಾಗಿಲ್ಲ.
ಅನಿಯಮಿತ ಧ್ವನಿ ಕರೆ :
ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ದೇಶಾದ್ಯಂತ ಯಾವುದೇ ನೆಟ್ವರ್ಕ್ಗೆ ಸುಲಭವಾಗಿ ಮಾತನಾಡಲು ಇದು ಅನುವು ಮಾಡಿಕೊಡುತ್ತದೆ. ಈ ಯೋಜನೆಯು ಪ್ರತಿದಿನ 2GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತದೆ. ಡೇಟಾ ಮಿತಿಯನ್ನು ತಲುಪಿದ ನಂತರ, ಇಂಟರ್ನೆಟ್ ವೇಗವು 80 kbpsಗೆ ಕಡಿಮೆಯಾಗುತ್ತದೆ. ಇದರಲ್ಲಿ ದಿನಕ್ಕೆ 100 SMS ಕಳುಹಿಸಲಸುವ ಅವಕಾಶವೂ ಇದೆ. ು
ಇದೊಂದು ಸಮಗ್ರ ಪ್ಲಾನ್ :
ಖಾಸಗಿ ಟೆಲಿಕಾಂ ಕಂಪನಿಗಳ ದುಬಾರಿ ಯೋಜನೆಗಳಿಗೆ ಹೋಲಿಸಿದರೆ, BSNL ನ 347 ರೂ. ರೀಚಾರ್ಜ್ ಯೋಜನೆ ಸಾಕಷ್ಟು ಕೈಗೆಟುಕುವಂಥದ್ದು. ಇದು ಹಣಕ್ಕೆ ಅತ್ಯುತ್ತಮ ಮೌಲ್ಯವನ್ನು ನೀಡುತ್ತದೆ. ಈ ರೀಚಾರ್ಜ್ ಪ್ರತಿದಿನ 2GB ವರೆಗೆ ಡೇಟಾವನ್ನು ಬಳಸುವ ಬಳಕೆದಾರರಿಗೆ ಸೂಕ್ತವಾಗಿದೆ. BSNL ಇತ್ತೀಚೆಗೆ ತನ್ನ ನೆಟ್ವರ್ಕ್ ವ್ಯಾಪ್ತಿ ಮತ್ತು ವೇಗವನ್ನು ಗಮನಾರ್ಹವಾಗಿ ಸುಧಾರಿಸಿದೆ. ಕಂಪನಿಯು ಹಲವಾರು ನಗರಗಳಲ್ಲಿ ತನ್ನ 4G ಸೇವೆಯನ್ನು ಪ್ರಾರಂಭಿಸಿದೆ.
ಬಿಎಸ್ಎನ್ಎಲ್ ನ ನೆಟ್ವರ್ಕ್ ಕವರೇಜ್ ಉತ್ತಮವಾಗಿರುವ ಪ್ರದೇಶಗಳಲ್ಲಿ, ಈ ಯೋಜನೆ ಬಳಕೆದಾರರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಈ ರೀಚಾರ್ಜ್ ಯೋಜನೆಯು ದೀರ್ಘಾವಧಿಯ ವ್ಯಾಲಿಡಿಟಿ ಮತ್ತು ಭಾರೀ ಡೇಟಾವನ್ನು ತಮ್ಮ ಬಜೆಟ್ ಒಳಗೆ ಹುಡುಕುತ್ತಿರುವ ಮತ್ತು ಖಾಸಗಿ ಕಂಪನಿಗಳು ನೀಡುವ ದುಬಾರಿ ರೀಚಾರ್ಜ್ಗಳಿಂದ ನಿರಾಶೆಗೊಂಡಿರುವ ಗ್ರಾಹಕರನ್ನು ನೇರವಾಗಿ ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿದೆ.