ಬಿ‌ಎಸ್‌ಎನ್‌ಎಲ್ ಕೈಗೆಟುಕುವ ದರದ ರಿಚಾರ್ಜ್ ಪ್ಲಾನ್: 425 ದಿನಗಳವರೆಗೆ ಸಿಗುತ್ತೆ ಫ್ರೀ ಕಾಲಿಂಗ್, ಡೇಟಾ ಸೌಲಭ್ಯ...

Cheapest Recharge Plan: ಬಿ‌ಎಸ್‌ಎನ್‌ಎಲ್ ಇದೀಗ ತನ್ನ ಕೋಟ್ಯಾಂತರ ಗ್ರಾಹಕರಿಗಾಗಿ ಸೂಪರ್-ಡೂಪರ್ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದ್ದು, ದೀರ್ಘಾವಧಿ ಮಾನ್ಯತೆಯೊಂದಿಗೆ ಲಭ್ಯವಿರುವ ಈ ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರು ಅನ್ಲಿಮಿಟೆಡ್ ಕಾಲ್, ಎಸ್ಎಂಎಸ್, ಡೇಟಾ ಸೌಲಭ್ಯಗಳನ್ನು ಪಡೆಯುತ್ತಾರೆ. 

Written by - Yashaswini V | Last Updated : Apr 8, 2025, 06:53 PM IST
  • ಬಿ‌ಎಸ್‌ಎನ್‌ಎಲ್ ಇದೀಗ ತನ್ನ ಕೋಟ್ಯಾಂತರ ಗ್ರಾಹಕರಿಗಾಗಿ ಸೂಪರ್-ಡೂಪರ್ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದೆ
  • ಈ ಪ್ರಿಪೇಯ್ಡ್ ಪ್ಲಾನ್ ದೀರ್ಘಾವಧಿ ಮಾನ್ಯತೆಯೊಂದಿಗೆ ಲಭ್ಯವಿದೆ
  • ಈ ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರು ಅನ್ಲಿಮಿಟೆಡ್ ಕಾಲ್, ಎಸ್ಎಂಎಸ್, ಡೇಟಾ ಸೌಲಭ್ಯಗಳನ್ನು ಪಡೆಯುತ್ತಾರೆ.
ಬಿ‌ಎಸ್‌ಎನ್‌ಎಲ್ ಕೈಗೆಟುಕುವ ದರದ ರಿಚಾರ್ಜ್ ಪ್ಲಾನ್: 425 ದಿನಗಳವರೆಗೆ ಸಿಗುತ್ತೆ ಫ್ರೀ ಕಾಲಿಂಗ್, ಡೇಟಾ ಸೌಲಭ್ಯ...

Cheapest Recharge Plan: ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್‌ಟೆಲ್, ವೋಡಾಫೋನ್ ಐಡಿಯಾ, ಬಿ‌ಎಸ್‌ಎನ್‌ಎಲ್  ತಮ್ಮ ಕೋಟ್ಯಾಂತರ ಬಳಕೆದಾರರಿಗಾಗಿ ಹಲವು ರೀತಿಯ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸುತ್ತಲೇ ಇರುತ್ತವೆ. ಇದರೊಂದಿಗೆ ಕೆಲವು ಆಕರ್ಷಕ ಕೊಡುಗೆಗಳನ್ನು ಕೂಡ ನೀಡುತ್ತವೆ. ಇದೀಗ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿ‌ಎಸ್‌ಎನ್‌ಎಲ್ ಒಂದು ಅತ್ಯಾಕರ್ಷಕ ಯೋಜನೆಯನ್ನು ಪರಿಚಯಿಸಿದೆ. 

Add Zee News as a Preferred Source

ಬಿ‌ಎಸ್‌ಎನ್‌ಎಲ್ ಸೂಪರ್-ಡೂಪರ್ ರಿಚಾರ್ಜ್ ಪ್ಲಾನ್: 
ಹೌದು, ಬಿ‌ಎಸ್‌ಎನ್‌ಎಲ್ ಇದೀಗ ತನ್ನ ಕೋಟ್ಯಾಂತರ ಗ್ರಾಹಕರಿಗಾಗಿ ಸೂಪರ್-ಡೂಪರ್ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದ್ದು, ದೀರ್ಘಾವಧಿ ಮಾನ್ಯತೆಯೊಂದಿಗೆ ಲಭ್ಯವಿರುವ ಈ ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರು ಅನ್ಲಿಮಿಟೆಡ್ ಕಾಲ್, ಎಸ್ಎಂಎಸ್, ಡೇಟಾ ಸೌಲಭ್ಯಗಳನ್ನು ಪಡೆಯುತ್ತಾರೆ. 

ಇದನ್ನೂ ಓದಿ- ಜಿಯೋದಿಂದ ಅಗ್ಗದ ಬೆಲೆಯ ದೀರ್ಘಾವಧಿ ಪ್ಲಾನ್ ರಿಲೀಸ್: ಕರೆ, SMS, ಡೇಟಾ ಎಲ್ಲವೂ ಲಭ್ಯ

ಖಾಸಗಿ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್‌ಟೆಲ್, ವಿಐಯ ವಾರ್ಷಿಕ ಯೋಜನೆ ಅಥವಾ 365ದಿನಗಳ ಪ್ಲಾನ್ ಗೆ ಟಕ್ಕರ್ ನೀಡಿ ಬಿ‌ಎಸ್‌ಎನ್‌ಎಲ್ ಈ ರಿಚಾರ್ಜ್ ಪ್ಲಾನ್ ಪರಿಚಯಿಸಿದೆ. ಇದರ ಮಾನ್ಯತೆ ಒಟ್ಟು 425ದಿನಗಳು. ಪದೇ ಪದೇ ರೀಚಾರ್ಜ್ ಮಾಡುವ ಗೊಡವೆಯಿಂದ ಮುಕ್ತಿ ಪಡೆಯಲು ಬಯಸುವ ಗ್ರಾಹಕರಿಗೆ ಇದು ಅತ್ಯುತ್ತಮ ಯೋಜನೆಯಾಗಿದೆ. 

ಇದನ್ನೂ ಓದಿ- ಏರ್‌ಟೆಲ್ ಗ್ರಾಹಕರಿಗೆ ಜಾಕ್ ಪಾಟ್! ಅಗ್ಗದ ಬೆಲೆಯಲ್ಲಿ 84ದಿನಗಳ ರಿಚಾರ್ಜ್ ಪ್ಲಾನ್ ಬಿಡುಗಡೆ..!

ಬಿ‌ಎಸ್‌ಎನ್‌ಎಲ್ 425 ದಿನಗಳ ರಿಚಾರ್ಜ್ ಪ್ಲಾನ್ ಬೆಲೆ: 
425ದಿನಗಳ ಮಾನ್ಯತೆಯೊಂದಿಗೆ ಬರುವ ಈ ಪ್ರಿಪೇಯ್ಡ್ ಪ್ಲಾನ್ ಬೆಲೆ 2,399 ರೂ.ಗಳು. 6ರೂ. ಗಿಂತಲೂ ಕಡಿಮೆ ದರದಲ್ಲಿ ಲಭ್ಯವಿದೆ. ಈ ಅದ್ಭುತ ರಿಚಾರ್ಜ್ ಯೋಜನೆಯಲ್ಲಿ ಬಿ‌ಎಸ್‌ಎನ್‌ಎಲ್ ಗ್ರಾಹಕರು ಸಂಪೂರ್ಣ 425ದಿನಗಳವರೆಗೆ ದೇಶಾದ್ಯಂತ ಎಲ್ಲಾ ನೆಟ್‌ವರ್ಕ್‌ಗಳಿಗೆ   ಅನ್ಲಿಮಿಟೆಡ್ ಕರೆ, ನಿತ್ಯ 100 ಫ್ರೀ ಎಸ್ಎಂಎಸ್ ಮತ್ತು ಪ್ರತಿದಿನ 2ಜಿ‌ಬಿ  ಹೈ ಸ್ಪೀಡ್ ಡೇಟಾವನ್ನು ಪಡೆಯಬಹುದು. ದೈನಂದಿನ ಡೇಟಾ ಮಿತಿ ಮುಗಿದ ಬಳಿಕ ಇದರ ವೇಗ 40Kbpsಗೆ ಇಳಿಕೆಯಾಗುತ್ತದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News