BSNL ಹೋಳಿ ಧಮಾಕಾ ಆಫರ್: ಅತಿ ಕಡಿಮೆ ಬೆಲೆಯಲ್ಲಿ ಸಿಗುತ್ತೆ 14 ತಿಂಗಳ ವ್ಯಾಲಿಡಿಟಿ

BSNL Recharge Offer: ಸರ್ಕಾರಿ ಟೆಲಿಕಾಂ ಸಂಸ್ಥೆ ಬಿ‌ಎಸ್‌ಎನ್‌ಎಲ್ ಹೋಳಿ ಹಬ್ಬದ ಪ್ರಯುಕ್ತ ತನ್ನ ಕೋಟ್ಯಾಂತರ ಗ್ರಾಹಕರಿಗೆ ಬಂಪರ್ ಕೊಡುಗೆಯನ್ನು ಬಿಡುಗಡೆ ಮಾಡಿದೆ. 

Written by - Yashaswini V | Last Updated : Mar 4, 2025, 10:35 AM IST
  • ಇತ್ತೀಚಿನ ದಿನಗಳಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳಿಗೆ ನಡುಕ ಹುಟ್ಟಿಸಿರುವ ಬಿ‌ಎಸ್‌ಎನ್‌ಎಲ್
  • ಇದೀಗ ಮತ್ತೊಮ್ಮೆ ಏರ್ಟೆಲ್, ಜಿಯೋ, ವಿಐ ಕಂಪನಿಗಳಿಗೆ ಕಠಿಣ ಸ್ಪರ್ಧೆ ಒಡ್ಡಿದೆ.
  • ಬಿ‌ಎಸ್‌ಎನ್‌ಎಲ್ ಅಗ್ಗದ ಬೆಲೆಯಲ್ಲಿ ದೀರ್ಘಾವಧಿ ಮಾನ್ಯತೆಯ ರಿಚಾರ್ಜ್ ಯೋಜನೆ ಪರಿಚಯಿಸುವ ಮೂಲಕ ಮತ್ತೊಮ್ಮೆ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ.
BSNL ಹೋಳಿ ಧಮಾಕಾ ಆಫರ್: ಅತಿ ಕಡಿಮೆ ಬೆಲೆಯಲ್ಲಿ ಸಿಗುತ್ತೆ 14 ತಿಂಗಳ ವ್ಯಾಲಿಡಿಟಿ

BSNL Dhamaka Offer: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್-ಬಿ‌ಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ ಹೋಳಿ ಧಮಾಕ ಆಫರ್ ಘೋಷಿಸಿದ್ದು ಮೊದಲಿಗಿಂತ ಹೆಚ್ಚಿನ ಮಾನ್ಯತೆಯೊಂದಿಗೆ ಅಗ್ಗದ ಬೆಲೆಯ ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. 

Add Zee News as a Preferred Source

ಹೌದು, ಇತ್ತೀಚಿನ ದಿನಗಳಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳಿಗೆ ನಡುಕ ಹುಟ್ಟಿಸಿರುವ ಬಿ‌ಎಸ್‌ಎನ್‌ಎಲ್, ಇದೀಗ ಮತ್ತೊಮ್ಮೆ ಏರ್ಟೆಲ್, ಜಿಯೋ, ವಿಐ ಕಂಪನಿಗಳಿಗೆ ಕಠಿಣ ಸ್ಪರ್ಧೆ ಒಡ್ಡಿದೆ. ಬಿ‌ಎಸ್‌ಎನ್‌ಎಲ್ ಅಗ್ಗದ ಬೆಲೆಯಲ್ಲಿ ದೀರ್ಘಾವಧಿ ಮಾನ್ಯತೆಯ ರಿಚಾರ್ಜ್ ಯೋಜನೆ ಪರಿಚಯಿಸುವ ಮೂಲಕ ಮತ್ತೊಮ್ಮೆ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ. 

ಇದನ್ನೂ ಓದಿ- ಜಿಯೋ ಗ್ರಾಹಕರಿಗೆ ಮುಖೇಶ್ ಅಂಬಾನಿಯಿಂದ ಬಂಪರ್ ಗಿಫ್ಟ್! ಏರ್‌ಟೆಲ್‌ಗಿಂತಲೂ 50ರೂ. ಕಡಿಮೆ ಬೆಲೆಯ ಪ್ರಿಪೇಯ್ಡ್ ಪ್ಲಾನ್ ರಿಲೀಸ್

ಬಿ‌ಎಸ್‌ಎನ್‌ಎಲ್ ಹೋಳಿ ಧಮಾಕ ಆಫರ್: 
ವಾಸ್ತವವಾಗಿ, ಬಿ‌ಎಸ್‌ಎನ್‌ಎಲ್ ಹೊಸ ಯೋಜನೆಯನ್ನು ಪರಿಚಯಿಸಿಲ್ಲ. ಬದಲಿಗೆ ಈ ಹಿಂದೆ ಪರಿಚಯಿಸಿದ್ದ ವ್ಯಾಲಿಡಿಟಿ ಪ್ಯಾಕ್ ನಲ್ಲೇ ಹೆಚ್ಚುವರಿ ಮಾನ್ಯತೆ ನೀಡುವುದಾಗಿ ಘೋಷಿಸಿದೆ. ದಿನಕ್ಕೆ 6ರೂ.ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ಪ್ರಿಪೇಯ್ಡ್ ಪ್ಲಾನ್ ನಲ್ಲಿ 30ದಿನಗಳ ಹೆಚ್ಚುವರಿ ವ್ಯಾಲಿಡಿಟಿ ನೀಡುವುದಾಗಿ ಬಿ‌ಎಸ್‌ಎನ್‌ಎಲ್ ತಿಳಿಸಿದೆ. 

ಬಿ‌ಎಸ್‌ಎನ್‌ಎಲ್ 2,399ರೂ. ಯೋಜನೆಯಲ್ಲಿ (ದಿನಕ್ಕೆ 6ರೂ.ಗಿಂತಲೂ ಕಡಿಮೆ) ಈ ಮೊದಲು 395ದಿನಗಳ ಮಾನ್ಯತೆ ನೀಡಲಾಗಿತ್ತು. ಇದೀಗ, ಬಿ‌ಎಸ್‌ಎನ್‌ಎಲ್ ನ ಈ ಪ್ಲಾನ್  425ದಿನಗಳ ಮಾನ್ಯತೆಯೊಂದಿಗೆ ಸಿಗಲಿದೆ. 

ಇದನ್ನೂ ಓದಿ- Jio ಧಮಾಕಾ ಆಫರ್: ಈ ರಿಚಾರ್ಜ್ ಯೋಜನೆಗಳಲ್ಲಿ ನಿತ್ಯ 3GB ಡೇಟಾ, ಫ್ರೀ ನೆಟ್‌ಫ್ಲಿಕ್ಸ್ ಎಲ್ಲವೂ ಲಭ್ಯ

ಬಿ‌ಎಸ್‌ಎನ್‌ಎಲ್ 2,399ರೂ.  ಪ್ರಿಪೇಯ್ಡ್ ಪ್ಲಾನ್ ಪ್ರಯೋಜನ: 
ಬಿ‌ಎಸ್‌ಎನ್‌ಎಲ್ 2,399ರೂ. ಪ್ರಿಪೇಯ್ಡ್ ಪ್ಲಾನ್ ನ ಪ್ರಯೋಜನಗಳೆಂದರೆ, ಇದರಲ್ಲಿ ಸಂಪೂರ್ಣ 425ದಿನಗಳವರೆಗೆ ಅನಿಯಮಿತ ಕರೆ, ನಿತ್ಯ 100 ಉಚಿತ ಎಸ್ಎಂಎಸ್ಅಲ್ಲದೆ ನಿತ್ಯ 2ಜಿ‌ಬಿ ಹೈಸ್ಪೀಡ್ ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದಲ್ಲದೆ, ಮೊಬೈಲ್ ಬಳಕೆದಾರರಿಗೆ BiTVಗೆ ಉಚಿತ ಚಂದಾದಾರಿಕೆ ಜೊತೆಗೆ ಹಲವು ಓ‌ಟಿ‌ಟಿ ಅಪ್ಲಿಕೇಶನ್‌ಗಳಿಗೂ ಉಚಿತ ಪ್ರವೇಶ ಕೂಡ ಸಿಗಲಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News