)
BSNL ತನ್ನ ಬ್ರಾಡ್ಬ್ಯಾಂಡ್ ಬಳಕೆದಾರರಿಗೆ, ಉತ್ತಮ ಕೊಡುಗೆಯನ್ನು ಪರಿಚಯಿಸಿದೆ. ಈ ಕೊಡುಗೆಯಲ್ಲಿ, ಕಂಪನಿಯು ತನ್ನ ಎರಡು ಜನಪ್ರಿಯ ಬ್ರಾಡ್ಬ್ಯಾಂಡ್ ಯೋಜನೆಗಳ ಬೆಲೆಯನ್ನು ಕಡಿಮೆ ಮಾಡಿದೆ. ಹೊಸ ಗ್ರಾಹಕರಿಗೆ ವಿಶೇಷ ಉಡುಗೊರೆಯನ್ನು ನೀಡಿದೆ. ಹೊಸ ಸಂಪರ್ಕವನ್ನು ತೆಗೆದುಕೊಳ್ಳುವವರಿಗೆ ಮೊದಲ ತಿಂಗಳ ಸೇವೆ ಸಂಪೂರ್ಣವಾಗಿ ಉಚಿತವಾಗಿ ಸಿಗುತ್ತದೆ. ಈ ಕೊಡುಗೆ ಸೆಪ್ಟೆಂಬರ್ 30, 2025 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಪ್ರಸ್ತುತ ಈ ಸ್ಕೀಮ್ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಮಾತ್ರ ಅನ್ವಯವಾಗುತ್ತದೆ.
ಯಾವ ಯೋಜನೆಗಳ ಬೆಲೆಯಲ್ಲಿ ಇಳಿಕೆಯಾಗಿವೆ :
BSNL ಫೈಬರ್ ಬೇಸಿಕ್ ನಿಯೋ 449 ರೂ. ಮತ್ತು ಫೈಬರ್ ಬೇಸಿಕ್ 499 ರೂ. ಯೋಜನೆಗಳನ್ನು ಅಗ್ಗಗೊಳಿಸಿದೆ. 449 ರೂ ಯೋಜನೆಗಳ ಮೇಲೆ 50 ರೂ. ರಿಯಾಯಿತಿ ನೀಡಿ ಬೆಲೆಯನ್ನು 399 ರೂ.ಗೆ ಇಳಿಸಿದೆ. ಇನ್ನು 499 ರೂ. ಯ ಸ್ಕೀಮ್ ಅನ್ನ 100 ರೂಪಾಯಿ ಕಡಿತ ಮಾಡಿ ಅದನ್ನು 399 ರೂಪಾಯಿಗೆ ಇಳಿಸಲಾಗಿದೆ. ಈಗ ಎರಡೂ ಯೋಜನೆಗಳ ಬೆಲೆ ಒಂದೇ ಆಗಿದ್ದು, ಬಳಕೆದಾರರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ವೇಗ ಮತ್ತು ಡೇಟಾವನ್ನು ಆಯ್ಕೆ ಮಾಡಬಹುದು.
449 ರೂಪಾಯಿಯ ಫೈಬರ್ ಬೇಸಿಕ್ ನಿಯೋ ಬೆಲೆ ಈಗ 399 ರೂ. :
ಈ ಹಿಂದೆ 449 ರೂ.ಗೆ ಲಭ್ಯವಿದ್ದ ಈ ಯೋಜನೆ ಈಗ 399 ರೂ.ಗೆ ಸಿಗಲಿದೆ. ಇದು 50 Mbps ವೇಗ ಮತ್ತು 3300GB ವರೆಗೆ ಹೈ-ಸ್ಪೀಡ್ ಡೇಟಾವನ್ನು ನೀಡುತ್ತದೆ. ಸಾಮಾಜಿಕ ಮಾಧ್ಯಮವನ್ನು ಸರ್ಫಿಂಗ್ ಮಾಡುವುದು, ವೀಡಿಯೊ ಕರೆಗಳು, ಆನ್ಲೈನ್ ತರಗತಿಗಳು ಮತ್ತು YouTube ವೀಕ್ಷಿಸುವಂತಹ ಕಾರ್ಯಗಳಿಗೆ ಈ ಯೋಜನೆ ಸೂಕ್ತವಾಗಿದೆ.
499 ರೂ. ಯ ಪ್ಲಾನ್ ಈಗ 399 ರೂ.ಗೆ :
ಈ ಹಿಂದೆ 499 ರೂ.ಗೆ ಲಭ್ಯವಿದ್ದ ಈ ಪ್ಲಾನ್ ಈಗ 399 ರೂ.ಗೆ ಸಿಗುತ್ತಿದೆ. ಇದು 60 Mbps ವೇಗ ಮತ್ತು 3300GB ವರೆಗೆ ಹೈ-ಸ್ಪೀಡ್ ಡೇಟಾವನ್ನು ನೀಡುತ್ತದೆ. 4K ವೀಡಿಯೊ ಸ್ಟ್ರೀಮಿಂಗ್, ಆನ್ಲೈನ್ ಗೇಮಿಂಗ್ ಮತ್ತು ದೊಡ್ಡ ಫೈಲ್ಗಳನ್ನು ಡೌನ್ಲೋಡ್ ಮಾಡುವುದನ್ನು ಆನಂದಿಸುವವರಿಗೆ ಈ ಯೋಜನೆ ಉತ್ತಮವಾಗಿದೆ.
ಮೊದಲ ತಿಂಗಳು ಸಂಪೂರ್ಣ ಉಚಿತ:
ಹೊಸ ಬ್ರಾಡ್ಬ್ಯಾಂಡ್ ಸಂಪರ್ಕವನ್ನು ತೆಗೆದುಕೊಳ್ಳುವವರು ಅನುಸ್ಥಾಪನಾ ತಿಂಗಳಿಗೆ ಯಾವುದೇ ಸೇವಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಅಂದರೆ, ಮೊದಲ ತಿಂಗಳ ಇಂಟರ್ನೆಟ್ ಬಳಕೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
ಈ ಕೊಡುಗೆ ಯಾರಿಗೆ ಉತ್ತಮ :
ಮನೆಯಿಂದ ಕೆಲಸ ಮಾಡುವವರಿಗೆ, ಆನ್ಲೈನ್ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ, OTT ಪ್ಲಾಟ್ಫಾರ್ಮ್ಗಳಲ್ಲಿ ಚಲನಚಿತ್ರಗಳು/ಸರಣಿಗಳನ್ನು ನೋಡುವವರಿಗೆ ಮತ್ತು ಆನ್ಲೈನ್ ಆಟಗಳನ್ನು ಆಡುವ ಬಳಕೆದಾರರಿಗೆ ಈ ಕೊಡುಗೆ ಉತ್ತಮವಾಗಿದೆ.