)
BSNL Recharge Plan: ಭಾರತದ ಏಕೈಕ ಸರ್ಕಾರಿ ಟೆಲಿಕಾಂ ಕಂಪನಿಯಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ - ಬಿಎಸ್ಎನ್ಎಲ್ ತನ್ನ ಲಕ್ಷಾಂತರ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಕೈಗೆಟುಕುವ ಬೆಲೆಯ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ.
2024ರ ಜುಲೈ ತಿಂಗಳಿನಲ್ಲಿ ಜಿಯೋ, ಏರ್ಟೆಲ್, ವಿಐನಂತಹ ಖಾಸಗಿ ಟೆಲಿಕಾಂ ಸಂಸ್ಥೆಗಳು ರಿಚಾರ್ಜ್ ಬೆಲೆಯನ್ನು ಏರಿಸಿದ ಬೆನ್ನಲ್ಲೇ ಇತ್ತೀಚಿನ ದಿನಗಳಲ್ಲಿ, ಬಿಎಸ್ಎನ್ಎಲ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಇದೀಗ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗಾಗಿ ಮತ್ತೊಂದು ಅಗ್ಗದ ರಿಚಾರ್ಜ್ ಪ್ಲಾನ್ ಪರಿಚಯಿಸಿದೆ.
ಬಿಎಸ್ಎನ್ಎಲ್ ಅಗ್ಗದ ರೀಚಾರ್ಜ್ ಯೋಜನೆ:-
ಬಿಎಸ್ಎನ್ಎಲ್ ಹೊಸ ಕೈಗೆಟುಕುವ ಬೆಲೆಯ ರಿಚಾರ್ಜ್ ಯೋಜನೆಯು ಸುಮಾರು 1 ವರ್ಷದ ಮಾನ್ಯತೆಯೊಂದಿಗೆ ಲಭ್ಯವಾಗಲಿದ್ದು, ಒಮ್ಮೆ ರಿಚಾರ್ಜ್ ಮಾಡಿಸಿದರೆ ವರ್ಷವಿಡೀ ಪದೇ ಪದೇ ಮೊಬೈಲ್ ರಿಚಾರ್ಜ್ ಮಾಡಿಸುವ ಗೊಡವೆಯೇ ಇರುವುದಿಲ್ಲ.
ಬಿಎಸ್ಎನ್ಎಲ್ ಅಗ್ಗದ ರಿಚಾರ್ಜ್ ಬೆಲೆ:
ಬಿಎಸ್ಎನ್ಎಲ್ ನ ಈ ರಿಚಾರ್ಜ್ ಯೋಜನೆಯ ಬೆಲೆ 1499 ರೂ. ಅರ್ಥಾತ್ ಇದರ ದೈನಂದಿನ ಬೆಲೆ 5ರೂ. ಗಳಿಗಿಂತಲೂ ತುಂಬಾ ಕಡಿಮೆ..
ಬಿಎಸ್ಎನ್ಎಲ್ 1499ರೂ. ಯೋಜನೆ ಮಾನ್ಯತೆ & ಪ್ರಯೋಜನ:
ಬಿಎಸ್ಎನ್ಎಲ್ ಹೊಸದಾಗಿ ಪರಿಚಯಿಸಿರುವ 1499ರೂ. ಗಳ ಪ್ರಿಪೇಯ್ಡ್ ಯೋಜನೆಯು 336ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಬಗ್ಗೆ ಎಕ್ಸ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುವ ಮೂಲಕ ಬಿಎಸ್ಎನ್ಎಲ್ ಮಾಹಿತಿ ಹಂಚಿಕೊಂಡಿದ್ದು, ಈ ರಿಚಾರ್ಜ್ ಯೋಜನೆಯಲ್ಲಿ ಸಂಪೂರ್ಣ 336ದಿನಗಳವರೆಗೆ ಅನ್ಲಿಮಿಟೆಡ್ ಕಾಲ್, ಪ್ರತಿದಿನ 100ಉಚಿತ ಎಸ್ಎಂಎಸ್ ಪ್ರಯೋಜನವನ್ನು ನೀಡುತ್ತದೆ. ಅಷ್ಟೇ ಅಲ್ಲದೆ, ಈ ಯೋಜನೆಯಲ್ಲಿ ಒಟ್ಟು 24ಜಿಬಿ ಡೇಟಾ ಸೌಲಭ್ಯ ಲಭ್ಯವಾಗಲಿದೆ.
BSNL ₹1499 Plan - The Smart Recharge for Smart Users!
Enjoy 336 Days of Unlimited Calls, 24 GB data and 100 SMS/day .
No Monthly Hassle!
Recharge via:
BSNL Website: https://t.co/yDeFrwK5vt
&
BSNL SelfCare App: https://t.co/VhxSGSUr07#BSNL #Digitalindia #PrepaidPlan… pic.twitter.com/Mp5MZ1mkd2— BSNL India (@BSNLCorporate) August 9, 2025
ಬಿಎಸ್ಎನ್ಎಲ್ ಗ್ರಾಹಕರ ಸಂಖ್ಯೆ ದಿನೇ ದಿನೇ ಹೆಚ್ಚಾಗಲು ಮುಖ್ಯ ಕಾರಣ ಬಿಎಸ್ಎನ್ಎಲ್ ತನ್ನ 4 ಜಿ ನೆಟ್ವರ್ಕ್ ಅನ್ನು ಸಹ ಪ್ರಾರಂಭಿಸಿದೆ, ಮಾತ್ರವಲ್ಲ, 5ಜಿ ನೆಟ್ವರ್ಕ್ ಪ್ರಾರಂಭಕ್ಕೂ ಮುಂದಾಗಿದೆ. ಅಷ್ಟೇ ಅಲ್ಲದೆ, ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸುವ ಮೂಲಕ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ನೀಡುತ್ತಿದೆ.