)
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL), ಟೆಲಿಕಾಂ ಕಂಪನಿಯು 25 ವರ್ಷಗಳನ್ನು ಪೂರೈಸಿದೆ. ತನ್ನ 25ನೇ ವಾರ್ಷಿಕೋತ್ಸವದ ಅಂಗವಾಗಿ ಕಂಪನಿಯು ತನ್ನ ಬಳಕೆದಾರರಿಗೆ ಹಲವಾರು ಕೊಡುಗೆಗಳು ಮತ್ತು ವಿಶೇಷ ಉಡುಗೊರೆಗಳನ್ನು ನೀಡುತ್ತಿದೆ. ಇತ್ತೀಚೆಗೆ, BSNL ತನ್ನ ವೈ-ಫೈ ಸೇವೆಯನ್ನು ಪ್ರಾರಂಭಿಸಿದೆ. ಜೊತೆಗೆ ಮತ್ತು Silver Jubilee ವಿಶೇಷ ಪ್ಲಾನ್ ಅನ್ನು ಪರಿಚಯಿಸಿದೆ. ಈ ಯೋಜನೆಯು 30 ದಿನಗಳ ಮಾನ್ಯತೆಯೊಂದಿಗೆ ದಿನಕ್ಕೆ 2.5GB ಡೇಟಾವನ್ನು ನೀಡುತ್ತದೆ.
ದೇಶದ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾದ BSNL, ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟರ್ನಲ್ಲಿ ಹೊಸ ಯೋಜನೆಯನ್ನು ಘೋಷಿಸಿತು. ಕಂಪನಿಯು ಈ ವರ್ಷ ತನ್ನ 25 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಸಿಲ್ವರ್ ಜ್ಯುಬಿಲಿ ಪ್ಲಾನ್ ಬೆಲೆ 225. ರೂ.
BSNLನ 225 ರೂ. ಅತ್ಯಾಕರ್ಷಕ ರೀಚಾರ್ಜ್ ಪ್ಲಾನ್ :
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯ 225 ರೂ. ಪ್ಲಾನ್ ಬಳಕೆದಾರರಿಗೆ ಪೂರ್ಣ 30 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಈ ಪ್ಯಾಕ್ 2.5GB ದೈನಂದಿನ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMS ಅನ್ನು ನೀಡುತ್ತದೆ. ಈ ರೀಚಾರ್ಜ್ ಯೋಜನೆಯು ಕಡಿಮೆ ಬೆಲೆಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ.
Wi-Fi ಉತ್ತಮ ಕರೆ ಗುಣಮಟ್ಟವನ್ನು ಒದಗಿಸುತ್ತದೆ :
BSNL ತನ್ನ ಬೆಳ್ಳಿ ಮಹೋತ್ಸವವನ್ನು ಆಚರಿಸುವ ಸಲುವಾಗಿ VoWi-Fi ಸೇವೆಯನ್ನು ಸಹ ಪ್ರಾರಂಭಿಸಿದೆ. ಈ ಸೇವೆಯ ಪ್ರಯೋಜನವೆಂದರೆ ಬಳಕೆದಾರರು ಮೊಬೈಲ್ ನೆಟ್ವರ್ಕ್ ಇಲ್ಲದ ಪ್ರದೇಶಗಳಲ್ಲಿಯೂ ಸಹ Wi-Fi ಬಳಸಿಕೊಂಡು ಉತ್ತಮ ಗುಣಮಟ್ಟದ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಡಿವೈಸ್ ವಾಯ್ಸ್ ಓವರ್ Wi-Fi ಅಥವಾ Wi-Fi ಕರೆ ಮಾಡುವಿಕೆಯನ್ನು ಬೆಂಬಲಿಸಿದರೆ, ನಿಮ್ಮ ಸೆಲ್ಯುಲರ್ ಸಂಪರ್ಕವು ಕಡಿಮೆಯಾಗಿದ್ದರೂ ಸಹ ಅಡೆತಡೆಯಿಲ್ಲದೆ ಕರೆ ಮುಂದುವರೆಯುತ್ತದೆ.