)
ಫ್ಲಿಪ್ಕಾರ್ಟ್ ಮತ್ತೊಮ್ಮೆಇಂಡಿಪೆಂಡೆನ್ಸ್ ಡೇ ಸೇಲ್ ಅನ್ನು ಘೋಷಿಸಿದೆ. ಇದರಲ್ಲಿ ವಿಭಿನ್ನ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗಿದೆ. ಈ ಸೇಲ್ ನಲ್ಲಿ ಸ್ಮಾರ್ಟ್ಫೋನ್ಗಳು ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದೆ. ಇಲ್ಲಿ 5 ಟಾಪ್ ಬ್ರಾಂಡೆಡ್ ಫೋನ್ಗಳ ಪಟ್ಟಿಯನ್ನು ನೀಡಲಾಗಿದೆ.
ಕಡಿಮೆ ಬೆಲೆಗೆ ಸಿಗುತ್ತಿರುವ ಫೋನ್ ಗಳು :
ಐಫೋನ್ 16 :
ಆಪಲ್ನ ಇತ್ತೀಚಿನ ಐಫೋನ್ 16 ಪ್ರಸ್ತುತ ಫ್ಲಿಪ್ಕಾರ್ಟ್ನಲ್ಲಿ 69,999 ಗೆ ಲಭ್ಯವಿದೆ. ಆದರೆ ಬ್ಯಾಂಕ್ ಕೊಡುಗೆಗಳೊಂದಿಗೆ, ಅದನ್ನು 66,499 ರೂ.ಗೆ ಪಡೆಯಬಹುದು. ಇದರ ಹೊರತಾಗಿ, ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹೆಚ್ಚಿನ ರಿಯಾಯಿತಿ ಪಡೆಯಬಹುದು. ವಿನಿಮಯ ಕೊಡುಗೆಯು ನಿಮ್ಮ ಫೋನ್ನ ಮಾದರಿ ಮತ್ತು ಸ್ಥಿತಿಯನ್ನು ಅವಲಂಬಿಸಿರುತ್ತದೆ.
Samsung Galaxy S24 FE ಮಾದರಿಯು ಫ್ಲಿಪ್ಕಾರ್ಟ್ನಲ್ಲಿ 35,999 ರೂ. ಗೆ ಲಭ್ಯವಿದೆ. ಆದರೆ ನೀವು ಅದನ್ನು ಬ್ಯಾಂಕ್ ರಿಯಾಯಿತಿಯೊಂದಿಗೆ ರೂ 33,249 ರೂ. ಗೆ ಖರೀದಿಸಬಹುದು. ಅಲ್ಲದೆ, ಫೋನ್ ವಿನಿಮಯ ಮೌಲ್ಯದೊಂದಿಗೆ ಇದರ ಬೆಲೆ ಇನ್ನಷ್ಟು ಕಡಿಮೆಯಾಗಲಿದೆ. ಇದರಲ್ಲಿ ನೀವು 4500mAh ಬ್ಯಾಟರಿ, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು Exynos 2400 ಪ್ರೊಸೆಸರ್ ಸಿಗುತ್ತದೆ.
Poco F7 5G :
ಈ ಫೋನ್ ಪ್ರಸ್ತುತ 31,999 ರೂ.ಗೆ ಲಭ್ಯವಿದೆ. ಬ್ಯಾಂಕ್ ಕೊಡುಗೆಗಳ ರಿಯಾಯಿತಿಯ ನಂತರ, ಅದನ್ನು 30,399 ರೂ.ಗೆ ಖರೀದಿಸಬಹುದು. ಇದರ ಹೊರತಾಗಿ, ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು.
Samsung Galaxy S24 :
ಈ Samsung ಫೋನ್ ಅನ್ನು 46,499 ರೂ.ಗೆ ಖರೀದಿಸಬಹುದು. ಅಲ್ಲದೆ, ಹೆಚ್ಚುವರಿ ಬ್ಯಾಂಕ್ ರಿಯಾಯಿತಿಯ ಲಾಭವನ್ನು ಪಡೆಯುವ ಮೂಲಕ, ಅದನ್ನು 44,649 ರೂ.ಗೆ ಸುಲಭವಾಗಿ ಪಡೆಯಬಹುದು. ಇದರ ಮೇಲೆ ವಿನಿಮಯ ಮೌಲ್ಯವೂ ಲಭ್ಯವಿದೆ. ಈ ಫೋನ್ನಲ್ಲಿ, ನಿಮಗೆ 50MP ಪ್ರಾಥಮಿಕ ಕ್ಯಾಮೆರಾ, 4000mAh ಬ್ಯಾಟರಿ ಮತ್ತು Exynos 2400 ಪ್ರೊಸೆಸರ್ ನೀಡಲಾಗಿದೆ.
Realme GT 6 :
Realme ಕಂಪನಿಯ ಈ ಫೋನ್ ಪ್ರಸ್ತುತ 27,999 ರೂ.ಗೆ ಲಭ್ಯವಿದೆ. ಇದರ ಹೊರತಾಗಿ, ಹೆಚ್ಚುವರಿ ಬ್ಯಾಂಕ್ ರಿಯಾಯಿತಿಯನ್ನು ಬಳಸುವ ಮೂಲಕ, ಈ ಸ್ಮಾರ್ಟ್ಫೋನ್ ಅನ್ನು 26,599 ರೂ.ಗೆ ಖರೀದಿಸಬಹುದು. ಹಳೆಯ ಫೋನ್ ಮೇಲೆ ವಿನಿಮಯ ಮೌಲ್ಯದ ಲಾಭವನ್ನು ಕೂಡಾ ಸಿಗುತ್ತದೆ.