)
Smart TV Offer: 55 ಇಂಚಿನ ಸ್ಮಾರ್ಟ್ ಎಲ್ಇಡಿ ಟಿವಿಯನ್ನ ಕಡಿಮೆ ಬೆಲೆಯಲ್ಲಿ ಖರೀದಿಸಲು ಇದು ಒಂದು ಉತ್ತಮ ಅವಕಾಶ. ಶೀಘ್ರವೇ ಸ್ಮಾರ್ಟ್ ಟಿವಿಗಳು ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳ ಬೆಲೆಗಳು ಹೆಚ್ಚಾಗುವ ನಿರೀಕ್ಷೆಯಿದೆ. 55 ಇಂಚಿನ ಸ್ಮಾರ್ಟ್ ಟಿವಿಯನ್ನ ಫ್ಲಿಪ್ಕಾರ್ಟ್ನಲ್ಲಿ 32 ಇಂಚಿನ ಟಿವಿಯ ಬೆಲೆಗೆ ಖರೀದಿಸಬಹುದು. ಟಿಸಿಎಲ್, ರಿಯಲ್ಮಿ, ಸೋನಿ ಮತ್ತು ಫಾಕ್ಸ್ಸ್ಕಿಯಂತಹ ಬ್ರ್ಯಾಂಡ್ಗಳ ಸ್ಮಾರ್ಟ್ ಟಿವಿಗಳನ್ನ 74%ವರೆಗಿನ ರಿಯಾಯಿತಿಯಲ್ಲಿ ಖರೀದಿಸಬಹುದು. ನೀವು ಈ ದೊಡ್ಡ ಪರದೆಯ ಸ್ಮಾರ್ಟ್ ಟಿವಿಗಳನ್ನ ಕೇವಲ ₹25,000ಕ್ಕಿಂತಲೂ ಕಡಿಮೆ ಬೆಲೆಗೆ ಮನೆಗೆ ತರಬಹುದು.
ಸೋನಿ ಬ್ರಾವಿಯಾದ 55 ಇಂಚಿನ LED ಸ್ಮಾರ್ಟ್ ಟಿವಿಯನ್ನ 36% ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಸ್ಮಾರ್ಟ್ ಟಿವಿ ಫ್ಲಿಪ್ಕಾರ್ಟ್ನಲ್ಲಿ ₹57,990ಗೆ ಲಭ್ಯವಿದೆ, ಆದರೆ ಇದರ ಮೂಲ ಬೆಲೆ ₹91,900 ಇದೆ. ಇದರ ವೈಶಿಷ್ಟ್ಯಗಳಲ್ಲಿ 40W ಸ್ಪೀಕರ್ ಸೇರಿದೆ. ಇದು ಗೂಗಲ್ ಆಂಡ್ರಾಯ್ಡ್ ಪ್ಲಾಟ್ಫಾರ್ಮ್ನಲ್ಲಿ ಕಾರ್ಯನಿರ್ವಹಿಸುತ್ತದೆ.
TCL ನ 55-ಇಂಚಿನ LED ಸ್ಮಾರ್ಟ್ ಟಿವಿಯ ಬೆಲೆಯಲ್ಲಿ 64% ಕಡಿತವಾಗಿದೆ. ಈ ಸ್ಮಾರ್ಟ್ ಟಿವಿ ₹32,990ಗೆ ಲಭ್ಯವಿದೆ, ಆದರೆ ಇದರ ಮೂಲ ಬೆಲೆ ₹93,999 ಇದೆ. ಈ ಟಿವಿಯಲ್ಲಿ ನೀವು ₹6,500ವರೆಗೆ ಉಳಿಸಬಹುದು. ಈ ಸ್ಮಾರ್ಟ್ ಟಿವಿ 24W ಸ್ಪೀಕರ್ಗಳೊಂದಿಗೆ ಬರುತ್ತದೆ. ಕಂಪನಿಯು ಈ ಟಿವಿಗೆ ಎರಡು ವರ್ಷಗಳ ವಾರಂಟಿಯನ್ನ ನೀಡುತ್ತಿದೆ.
Realme TechLife 55-ಇಂಚಿನ QLED ಸ್ಮಾರ್ಟ್ ಟಿವಿಯನ್ನ ನೀವು ಕೇವಲ ₹27,999ಗೆ ಖರೀದಿಸಬಹುದು. ಈ ಸ್ಮಾರ್ಟ್ ಟಿವಿ 57% ರಿಯಾಯಿತಿಯಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಟಿವಿಯ ಮೂಲ ಬೆಲೆ ₹65,399 ರೂ. ಇದೆ. ಈ ಟಿವಿ ಖರೀದಿಯೊಂದಿಗೆ ₹6,500 ವಿನಿಮಯ ಕೊಡುಗೆಯೂ ಲಭ್ಯವಿದೆ.
ಫಾಕ್ಸ್ಸ್ಕಿ ಬ್ರ್ಯಾಂಡ್ನ 55-ಇಂಚಿನ QLED ಅಲ್ಟ್ರಾ HD ಸ್ಮಾರ್ಟ್ ಟಿವಿ ಕೇವಲ ₹24,999ಗೆ ಲಭ್ಯವಿದೆ. ಈ ಸ್ಮಾರ್ಟ್ ಟಿವಿಯ ಬೆಲೆಯಲ್ಲಿ 74%ವರೆಗೆ ಕಡಿಮೆ ಮಾಡಲಾಗಿದೆ. ಇದರ ಮೂಲ ಬೆಲೆ ₹98,990 ಇದೆ. ಇದು ಗೂಗಲ್ ಆಂಡ್ರಾಯ್ಡ್ ಟಿವಿ ಪ್ಲಾಟ್ಫಾರ್ಮ್ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 30W ಸ್ಪೀಕರ್ ಹೊಂದಿದೆ.