)
VW 50 inch TV offer: VW 50-ಇಂಚಿನ ಪ್ರೊ ಸರಣಿ 4K ಅಲ್ಟ್ರಾ HD ಸ್ಮಾರ್ಟ್ QLED ಸ್ಮಾರ್ಟ್ ಟಿವಿಯ ಮೂಲ ಬೆಲೆ 54,999 ರೂ. ಇದೆ. ಆದರೆ ಅಮೆಜಾನ್ ಇದರ ಮೇಲೆ ಶೇ.58 ರಷ್ಟು ರಿಯಾಯಿತಿ ನೀಡುತ್ತಿದೆ. ಇದರೊಂದಿಗೆ ಈ ಟಿವಿಯನ್ನ ಕೇವಲ 22,999 ರೂ.ಗೆ ಪಟ್ಟಿ ಮಾಡಲಾಗಿದೆ. ಆದರೆ ನೀವು ಅದನ್ನ ಅಮೆಜಾನ್ ಪೇ ಬ್ಯಾಲೆನ್ಸ್ನೊಂದಿಗೆ ಖರೀದಿಸಿದರೆ, ನೀವು ಹೆಚ್ಚುವರಿಯಾಗಿ 689 ರೂ. ಕ್ಯಾಶ್ಬ್ಯಾಕ್ ಪಡೆಯಬಹುದು. ಅಲ್ಲದೆ ನೀವು ಕೆಲವು ಬ್ಯಾಂಕ್ಗಳ ಕ್ರೆಡಿಟ್ ಕಾರ್ಡ್ಗಳೊಂದಿಗೆ ಟಿವಿಯನ್ನ ಖರೀದಿಸಿದರೆ, 1500 ರೂ.ವರೆಗೆ ರಿಯಾಯಿತಿ ಪಡೆಯಬಹುದು. ಅಂದರೆ ಈ ಟಿವಿಯನ್ನ ಸುಮಾರು 21,500 ರೂ.ಗೆ ಖರೀದಿಸಿ ಮನೆಗೆ ತರಬಹುದು.
ಈ ಸ್ಮಾರ್ಟ್ ಟಿವಿ ವೈಶಿಷ್ಟ್ಯಗಳು ಹೇಗಿವೆ?
VW ಬ್ರ್ಯಾಂಡ್ನ ಈ 50-ಇಂಚಿನ QLED ಸ್ಮಾರ್ಟ್ ಟಿವಿ 4K ಅಲ್ಟ್ರಾ HD ರೆಸಲ್ಯೂಶನ್ನೊಂದಿಗೆ ಬರುತ್ತದೆ. ಈ ಟಿವಿ 3840x2160 ಪಿಕ್ಸೆಲ್ಗಳ ರೆಸಲ್ಯೂಶನ್ ಮತ್ತು 60Hz ರಿಫ್ರೆಶ್ ರೇಟ್ಅನ್ನ ಹೊಂದಿದೆ. ಇದು ALLM (ಆಟೋ ಲೋ ಲ್ಯಾಟೆನ್ಸಿ ಮೋಡ್), VRR (ವೇರಿಯಬಲ್ ರಿಫ್ರೆಶ್ ರೇಟ್) ಅನ್ನ ಸಹ ಬೆಂಬಲಿಸುತ್ತದೆ. ಈ ಟಿವಿ QLED ಡಿಸ್ಪ್ಲೇ, ಗೂಗಲ್ ಟಿವಿ ಇಂಟರ್ಫೇಸ್, HDR 10+, ಪ್ರೊ ಪ್ರೊಸೆಸರ್, MEMC ತಂತ್ರಜ್ಞಾನ, 2GB RAM + 16GB ROM ಮತ್ತು ಹ್ಯಾಂಡ್ಸ್-ಫ್ರೀ ಧ್ವನಿ ನಿಯಂತ್ರಣ ವೈಶಿಷ್ಟ್ಯಗಳನ್ನ ಹೊಂದಿದೆ.
ಸಂಪರ್ಕ ಆಯ್ಕೆಗಳು
ಈ ಟಿವಿ ಒಟ್ಟು 3 HDMI ಪೋರ್ಟ್ಗಳನ್ನ ಹೊಂದಿದೆ (eARC ಬೆಂಬಲದೊಂದಿಗೆ). ಇವುಗಳೊಂದಿಗೆ ನೀವು ಸೆಟ್-ಟಾಪ್ ಬಾಕ್ಸ್, ಗೇಮಿಂಗ್ ಕನ್ಸೋಲ್ ಮತ್ತು ಬ್ಲೂ-ರೇ ಪ್ಲೇಯರ್ ಅನ್ನ ಸುಲಭವಾಗಿ ಸಂಪರ್ಕಿಸಬಹುದು. ಇದರ ಜೊತೆಗೆ ನೀವು ಹಾರ್ಡ್ ಡ್ರೈವ್ಗಳು ಅಥವಾ ಪೆನ್ ಡ್ರೈವ್ಗಳನ್ನ ಸಂಪರ್ಕಿಸಬಹುದಾದ 2 USB ಪೋರ್ಟ್ಗಳಿವೆ. ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್ 5.1 ಮತ್ತು ಈಥರ್ನೆಟ್ ಪೋರ್ಟ್ ಸಹ ಇದೆ.
ಧ್ವನಿ ಗುಣಮಟ್ಟ ಹೇಗಿದೆ?
ಈ ಟಿವಿ 48 ವ್ಯಾಟ್ಗಳ ಧ್ವನಿ ಔಟ್ಪುಟ್ನೊಂದಿಗೆ 2.1 ಚಾನೆಲ್ ವ್ಯವಸ್ಥೆಯನ್ನ ಮತ್ತು ಅಂತರ್ನಿರ್ಮಿತ ಸಬ್ ವೂಫರ್ ಹೊಂದಿದೆ. ಡಾಲ್ಬಿ ಆಡಿಯೋ ಬೆಂಬಲವು ಚಲನಚಿತ್ರಗಳು, ಸಂಗೀತ ಅಥವಾ ಗೇಮಿಂಗ್ ವೀಕ್ಷಿಸುವಾಗ ಸ್ಪಷ್ಟ ಧ್ವನಿ ಅನುಭವವನ್ನ ಒದಗಿಸುತ್ತದೆ.
ಡಿಸ್ಪ್ಲೇ & ವಿನ್ಯಾಸ
ಈ ಟಿವಿ ಫುಲ್ ಅರೇ ಲೋಕಲ್ ಡಿಮ್ಮಿಂಗ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಇದು ಪ್ರತಿಯೊಂದು ದೃಶ್ಯದಲ್ಲೂ ಗಾಢ ಮತ್ತು ಪ್ರಕಾಶಮಾನವಾದ ಬಣ್ಣಗಳನ್ನ ಸ್ಪಷ್ಟವಾಗಿ ಗೋಚರಿಸುವಂತೆ ಮಾಡುತ್ತದೆ. 10-ಬಿಟ್ QLED ಪ್ಯಾನೆಲ್, HDR10+, HLG ಬೆಂಬಲ, 1 ಬಿಲಿಯನ್ ಬಣ್ಣಗಳು ಮತ್ತು ಬೆಜೆಲ್-ಲೆಸ್ ವಿನ್ಯಾಸದಂತಹ ವೈಶಿಷ್ಟ್ಯಗಳು ದೃಶ್ಯ ಅನುಭವವನ್ನ ಇನ್ನಷ್ಟು ಉತ್ತಮಗೊಳಿಸುತ್ತವೆ.
ಬಾಕ್ಸ್ನಲ್ಲಿ ಏನೇನು ಸಿಗುತ್ತದೆ..?
ಈ ಸ್ಮಾರ್ಟ್ ಟಿವಿಯನ್ನ ಬುಕ್ ಮಾಡುವವರಿಗೆ 1 LED ಟಿವಿ, 2 ಟೇಬಲ್ ಸ್ಟ್ಯಾಂಡ್ಗಳು, 1 ವಾಲ್ ಮೌಂಟ್ ಸೆಟ್, 1 ವಾರಂಟಿ ಕಾರ್ಡ್, 1 ರಿಮೋಟ್ ಕಂಟ್ರೋಲ್ ಸಿಗುತ್ತದೆ ಮತ್ತು ವಾರಂಟಿ ಸೇವೆಗಳನ್ನ ಬಿಲ್ (ಇನ್ವಾಯ್ಸ್) ಮೂಲಕ ಪಡೆಯಬಹುದು. ಈ ಟಿವಿಯ ಕುರಿತು ಅಮೆಜಾನ್ನಲ್ಲಿಯೂ ಉತ್ತಮ ವಿಮರ್ಶೆಗಳಿವೆ. ನೀವು ಟಿವಿ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಖರೀದಿಸುವ ಮೊದಲು ಆ ವಿಮರ್ಶೆಗಳನ್ನ ಎಚ್ಚರಿಕೆಯಿಂದ ಪರಿಶೀಲಿಸಬೇಕು.