ಕೇವಲ 7000 ರೂ.ಗಿಂತ ಕಡಿಮೆ ಬೆಲೆಗೆ 256GB ಸ್ಟೋರೇಜ್‌ನ Redmi Note 14 Pro ಖರೀದಿಸಿ

Redmi Note 14 Pro ಸ್ಮಾರ್ಟ್‌ಫೋನ್‌ ಖರೀದಿಯ ಮೇಲೆ ಭರ್ಜರಿ ಆಫರ್‌ ನೀಡಲಾಗಿದೆ. Redmiಯ ಈ ಮಧ್ಯಮ-ಬಜೆಟ್ ಫೋನ್ ಅನ್ನು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿರುವ ಮಾರಾಟದಲ್ಲಿ ಅತ್ಯಂತ ಕಡಿಮೆ ಬೆಲೆಗೆ ನೀವು ಖರೀದಿಸಬಹುದು.

Written by - Puttaraj K Alur | Last Updated : Jun 3, 2025, 04:20 PM IST
  • ಕೇವಲ 7000ಕ್ಕಿಂತ ಕಡಿಮೆ ಬೆಲೆಗೆ 256GB ಸ್ಟೋರೇಜ್‌ನ Redmi Note 14 Pro ಖರೀದಿಸಿ
  • ಅಮೆಜಾನ್‌ನಲ್ಲಿ ಈ ಫೋನ್ ಖರೀದಿಸಿದ್ರೆ 2,000 ರೂ.ಗಳವರೆಗೆ ಬ್ಯಾಂಕ್ ರಿಯಾಯಿತಿ ಸಿಗುತ್ತದೆ
  • ಈ ಫೋನ್ 5,500mAhನ ಶಕ್ತಿಶಾಲಿ ಬ್ಯಾಟರಿ ಹೊಂದಿದ್ದು, 45W ವೇಗದ ಚಾರ್ಜಿಂಗ್‌ ಬೆಂಬಲವಿದೆ
ಕೇವಲ 7000 ರೂ.ಗಿಂತ ಕಡಿಮೆ ಬೆಲೆಗೆ 256GB ಸ್ಟೋರೇಜ್‌ನ Redmi Note 14 Pro ಖರೀದಿಸಿ

Redmi Note 14 Pro: ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿರುವ ಸೇಲ್‌ನಲ್ಲಿ ರೆಡ್‌ಮಿ ನೋಟ್ 14 ಪ್ರೊ ಅನ್ನು ಅಗ್ಗವಾಗಿ ಖರೀದಿಸಬಹುದು. ಈ ವರ್ಷ ಬಿಡುಗಡೆಯಾದ ರೆಡ್‌ಮಿಯ ಬಜೆಟ್ ಫೋನ್‌ಗೆ ದೊಡ್ಡ ಬೆಲೆ ಕಡಿತವಾಗಿದೆ. ಫೋನ್ ಖರೀದಿಯ ಮೇಲೆ ಬ್ಯಾಂಕ್ ರಿಯಾಯಿತಿ ಮತ್ತು ವಿನಿಮಯ ಕೊಡುಗೆಯೂ ಲಭ್ಯವಿದೆ. ಇದರ 256GB ರೂಪಾಂತರದ ಬೆಲೆಯನ್ನು ಬಹಳಷ್ಟು ಕಡಿಮೆ ಮಾಡಲಾಗಿದೆ. ಈ ಫೋನ್ ಅನ್ನು ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ 25,999 ರೂ.ಗೆ ಪಟ್ಟಿ ಮಾಡಲಾಗಿದೆ.

Add Zee News as a Preferred Source

ಅಮೆಜಾನ್-ಫ್ಲಿಪ್‌ಕಾರ್ಟ್‌ನಲ್ಲಿ ಬೆಲೆ ಕುಸಿತ

ಅಮೆಜಾನ್‌ನಲ್ಲಿ ಈ ಫೋನ್ ಖರೀದಿಸಿದರೆ ನಿಮಗೆ 2,000 ರೂ.ಗಳವರೆಗೆ ಬ್ಯಾಂಕ್ ರಿಯಾಯಿತಿ ಸಿಗುತ್ತದೆ. ಇದಲ್ಲದೆ 779 ರೂ.ಗಳ ಕ್ಯಾಶ್‌ಬ್ಯಾಕ್ ಸಹ ನೀಡಲಾಗುತ್ತಿದೆ. ಈ ರೀತಿ ಬಳಕೆದಾರರು ಈ ಫೋನ್ ಅನ್ನು 22,200 ರೂ.ಗಳ ಬೆಲೆಗೆ ಪಡೆಯುತ್ತಾರೆ. ಅಲ್ಲದೆ ನೀವು ಇದನ್ನು 1,260 ರೂ.ಗಳ ಆರಂಭಿಕ EMIನಲ್ಲಿ ಮನೆಗೆ ತರಬಹುದು. 

ಇದನ್ನೂ ಓದಿಕನ್ಫರ್ಮ್ ರೈಲು ಟಿಕೆಟ್ ಬೇಕು ಎಂದಾದರೆ ಈ APP ಮೂಲಕ ಬುಕಿಂಗ್ ಮಾಡಿ !ಯಾವ ಸಂದರ್ಭದಲ್ಲಿ ಬುಕ್ ಮಾಡಬೇಕು ಎನ್ನುವ ಮಾಹಿತಿ ಇಲ್ಲಿ ಲಭ್ಯ

ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ಖರೀದಿಸಿದಾಗ, ನೀವು ಆಕ್ಸಿಸ್ ಬ್ಯಾಂಕ್ ಕಾರ್ಡ್‌ನಲ್ಲಿ 5%ವರೆಗೆ ಕ್ಯಾಶ್‌ಬ್ಯಾಕ್ ಪಡೆಯುತ್ತೀರಿ. ಈ ರೀತಿ ಈ ಫೋನ್ ಅನ್ನು 24,500 ರೂ.ಗೆ ಖರೀದಿಸಬಹುದು. ಆದರೆ ನೀವು ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಂಡರೆ, 7,000 ರೂ.ಗಿಂತ ಕಡಿಮೆ ಬೆಲೆಗೆ ಸಿಗುತ್ತದೆ. ಈ ಫೋನ್ ಖರೀದಿಯ ಮೇಲೆ ಉತ್ತಮ ವಿನಿಮಯ ಕೊಡುಗೆ ಲಭ್ಯವಿದೆ. ಈ ಫೋನ್ ಕಪ್ಪು, ಹಸಿರು ಮತ್ತು ಫ್ಯಾಂಟಮ್ ಪರ್ಪಲ್ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ರೆಡ್ಮಿ ನೋಟ್ 14 ಪ್ರೊ ವೈಶಿಷ್ಟ್ಯಗಳು

ಈ ರೆಡ್‌ಮಿ ಫೋನ್‌ನ ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಇದು 6.67-ಇಂಚಿನ FHD + ಬಾಗಿದ AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ರೆಡ್‌ಮಿ ಫೋನ್‌ನ ಡಿಸ್ಪ್ಲೇ 120Hz ಹೆಚ್ಚಿನ ರಿಫ್ರೆಶ್ ರೇಟ್‌ ಮತ್ತು 3000 ನಿಟ್‌ಗಳವರೆಗೆ ಗರಿಷ್ಠ ಹೊಳಪು ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. ಇದು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ಗೆ ಬೆಂಬಲವನ್ನು ಹೊಂದಿದೆ. ಅಲ್ಲದೆ ಇದು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಸಹ ಬೆಂಬಲಿಸುತ್ತದೆ.

ಇದನ್ನೂ ಓದಿ: Gruha Lakshmi Yojana: ಗೃಹಲಕ್ಷ್ಮಿ ಹಣ ಬಿಡುಗಡೆ, ಎಷ್ಟು ತಿಂಗಳ ಹಣ ಯಾವಾಗ ಖಾತೆ ಸೇರುತ್ತೆ... ಇಲ್ಲಿದೆ ಮಾಹಿತಿ

ಈ ರೆಡ್‌ಮಿ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟ್ರಾ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 8 ಜಿಬಿ RAM ಮತ್ತು 256 GBವರೆಗೆ ಆಂತರಿಕ ಸ್ಟೋರೇಜ್‌ಅನ್ನು ಬೆಂಬಲಿಸುತ್ತದೆ. ಮೈಕ್ರೊ SD ಕಾರ್ಡ್ ಮೂಲಕ ಫೋನ್‌ನ ಆಂತರಿಕ ಸ್ಟೋರೇಜ್‌ಅನ್ನು ವಿಸ್ತರಿಸಬಹುದು. ಈ ರೆಡ್‌ಮಿ ಫೋನ್ ಆಂಡ್ರಾಯ್ಡ್ 15 ಆಧಾರಿತ ಹೈಪರ್‌ OS2ನಲ್ಲಿ ಕಾರ್ಯನಿರ್ವಹಿಸುತ್ತದೆ.

ಈ ಫೋನ್ 5,500mAh ನ ಶಕ್ತಿಶಾಲಿ ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಇದು 45W ವೇಗದ ವೈರ್ಡ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. ಈ ಫೋನ್ IP69 ರೇಟಿಂಗ್ ಅನ್ನು ಬೆಂಬಲಿಸುತ್ತದೆ. ಇದರಿಂದ ಫೋನ್ ಒದ್ದೆಯಾದರೂ ಅಥವಾ ನೀರಿನಲ್ಲಿ ಮುಳುಗಿದರೂ ಹಾನಿಯಾಗುವುದಿಲ್ಲ. ಇದರ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಲಭ್ಯವಿರುತ್ತದೆ. ಫೋನ್ 50MP ಮುಖ್ಯ OIS ಕ್ಯಾಮೆರಾವನ್ನು ಹೊಂದಿದೆ. ಇದರ ಹೊರತಾಗಿ 8MP ಅಲ್ಟ್ರಾ ವೈಡ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾ ಲಭ್ಯವಿರುತ್ತದೆ. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32MP ಕ್ಯಾಮೆರಾವನ್ನು ಹೊಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News