ಎಸಿ ಇರುವ ಕೋಣೆಯಲ್ಲಿ ಫ್ಯಾನ್ ಇರಬಹುದೇ? ವಿದ್ಯುತ್ ಬಿಲ್ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ? 90% ದಷ್ಟು ಜನರಿಗೆ ತಿಳಿಯದಿರುವ ಮಾಹಿತಿ !

ಹೊಸ ಎಸಿ ಖರೀದಿಸುವ ಮೊದಲು, ಅದರ ಅಳವಡಿಕೆಯ ಬಗ್ಗೆ ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ಎಸಿಯ ಕೂಲಿಂಗ್ ಮೇಲೆ ಪರಿಣಾಮ ಬೀರಬಹುದು. ವಿದ್ಯುತ್ ಬಿಲ್ ಕೂಡಾ ಹೆಚ್ಚು ಬರುತ್ತದೆ.  

Written by - Ranjitha R K | Last Updated : Apr 7, 2025, 02:45 PM IST
  • ಮುಂದಿನ ಒಂದು ಅಥವಾ ಎರಡು ತಿಂಗಳುಗಳಲ್ಲಿ, ಉಷ್ಣಾಂಶ ಹೆಚ್ಚುತ್ತಲೇ ಹೋಗುತ್ತದೆ.
  • ಫ್ಯಾನ್ ಮತ್ತು ಎಸಿ ಒಟ್ಟಿಗೆ ರನ್ ಮಾಡಬಹುದೇ?
  • AC ಅಳವಡಿಕೆ ಸಮಯದಲ್ಲಿ ಆಗುವ ತಪ್ಪುಗಳು
ಎಸಿ ಇರುವ ಕೋಣೆಯಲ್ಲಿ ಫ್ಯಾನ್ ಇರಬಹುದೇ? ವಿದ್ಯುತ್ ಬಿಲ್ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ? 90% ದಷ್ಟು ಜನರಿಗೆ ತಿಳಿಯದಿರುವ  ಮಾಹಿತಿ !

AC Tips : ಬೇಸಿಗೆ ಬಂದಾಯಿತು. ಮುಂದಿನ ಒಂದು ಅಥವಾ ಎರಡು ತಿಂಗಳುಗಳಲ್ಲಿ,  ಉಷ್ಣಾಂಶ ಹೆಚ್ಚುತ್ತಲೇ ಹೋಗುತ್ತದೆ. ಉಷ್ಣತೆಯು ಅತ್ಯಧಿಕವಾಗಿರುವಾಗ, ಶಾಖವು ಹೆಚ್ಚು ತೀವ್ರವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಜನರು ತಮ್ಮ ಮನೆ ಮತ್ತು ಕಚೇರಿಗಳಲ್ಲಿ ಹವಾನಿಯಂತ್ರಣಗಳನ್ನು (AC) ಇನ್ಸ್ಟಾಲ್ ಮಾಡುತ್ತಾರೆ. ಆದರೆ ಹೊಸ ಎಸಿ ಖರೀದಿಸುವ ಮೊದಲು, ಅದರ ಅಳವಡಿಕೆಯ ಬಗ್ಗೆ ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ಎಸಿಯ ಕೂಲಿಂಗ್ ಮೇಲೆ ಪರಿಣಾಮ ಬೀರಬಹುದು. ವಿದ್ಯುತ್ ಬಿಲ್ ಕೂಡಾ ಹೆಚ್ಚು ಬರುತ್ತದೆ. 

Add Zee News as a Preferred Source

ಫ್ಯಾನ್ ಮತ್ತು ಎಸಿ ಒಟ್ಟಿಗೆ ರನ್ ಮಾಡಬಹುದೇ? : 
ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿ ಎಸಿ ಹಾಕಿ ಸ್ಲೋ ಆಗಿ ಫ್ಯಾನ್ ಕೂಡಾ ರನ್ ಮಾಡುತ್ತಾರೆ. ಹೀಗೆ ಮಾಡುವುದರಿಂದ ವಿದ್ಯುತ್ ಬಿಲ್ ಕಡಿಮೆ ಬರುತ್ತದೆ ಎನ್ನುವುದು ನಂಬಿಕೆ. ಆದ್ರೆ ಈ ವಿಧಾನವೇ ತಪ್ಪು. ಫ್ಯಾನ್ ಆನ್ ಮಾಡಿದ ಕೂಡಲೇ ಅದು ತನ್ನ ಗಾಳಿಯನ್ನು ಹೊರಹಾಕುತ್ತದೆ , AC ಕೂಡ ತಣ್ಣನೆಯ ಗಾಳಿಯನ್ನು ಬೀಸುತ್ತದೆ. ಈ ಎರಡು ಗಾಳಿಗಳ ಡಿಕ್ಕಿಯಿಂದಾಗಿ, ಕೋಣೆಯಲ್ಲಿ ಗಾಳಿಯ ಸರಿಯಾದ ಪ್ರಸರಣ ಸಾಧ್ಯವಾಗುವುದಿಲ್ಲ. ಇದರಿಂದ ಕೋಣೆಯ ಕೆಲವು ಭಾಗಗಳು ಮಾತ್ರ ಕೂಲಿಂಗ್ ಆಗುತ್ತದೆ. 

ಇದನ್ನೂ ಓದಿ : Explainer: ನಿಮ್ಮ ಖಾಸಗಿತನಕ್ಕೆ ಖನ್ನಾ ಇಟ್ಟ Ghibli Art? ಇದನ್ನ ಬಳಸುವ ಮುನ್ನ ನೂರು ಬಾರಿ ಯೋಚಿಸಿ!

AC ಅಳವಡಿಕೆ ಸಮಯದಲ್ಲಿ ಆಗುವ ತಪ್ಪುಗಳು : 
ಎಸಿ ಅಳವಡಿಸುವಾಗ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡಲಾಗುತ್ತದೆ. ಎಸಿ ಯುನಿಟ್ ಅನ್ನು ಸರಿಯಾದ ಎತ್ತರದಲ್ಲಿ ಅಳವಡಿಸದಿರುವುದು ಅಥವಾ ಸರಿಯಾದ ಕೋನದಲ್ಲಿ ಇಡದಿರುವುದು ಮುಖ್ಯವಾದುದು. ನೆಲದಿಂದ ಸುಮಾರು 7 ರಿಂದ 8 ಅಡಿ ಎತ್ತರದಲ್ಲಿ ಸ್ಪ್ಲಿಟ್ ಎಸಿ ಅಳವಡಿಸುವುದು ಉತ್ತಮ. ಈ ಎತ್ತರದಲ್ಲಿ, ಘಟಕದಿಂದ ಹೊರಬರುವ ತಂಪಾದ ಗಾಳಿಯು ಕೋಣೆಯಾದ್ಯಂತ ಚೆನ್ನಾಗಿ ಹರಡುತ್ತದೆ ಮತ್ತು ಕೋಣೆ ಬೇಗನೆ ತಣ್ಣಗಾಗುತ್ತದೆ. ನಿಮ್ಮ ಕೋಣೆಯ ಸೀಲಿಂಗ್ ತುಂಬಾ ಎತ್ತರದಲ್ಲಿದ್ದರೆ, ಉದಾಹರಣೆಗೆ 9 ಅಥವಾ 10 ಅಡಿ ಇದ್ದರೆ, AC ಯನ್ನು ಸ್ವಲ್ಪ ಕೆಳಗೆ ಅಳವಡಿಸುವುದು ಉತ್ತಮ.

ಅಗ್ನಿ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಿ : 
ಬೇಸಿಗೆಯಲ್ಲಿ ಎಸಿ ಬೆಂಕಿ ಅವಘಡಗಳು ಸಾಮಾನ್ಯ. ಇವುಗಳಲ್ಲಿ ಕೆಲವು ಕಳಪೆ ಗುಣಮಟ್ಟ ಅಥವಾ ದೋಷಯುಕ್ತ ಉತ್ಪನ್ನಗಳಿಂದಾಗಿವೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಬಳಕೆದಾರರ ನಿರ್ಲಕ್ಷ್ಯದ ಆಗುವುದೇ ಹೆಚ್ಚು. ತಿಂಗಳುಗಳ ನಂತರ AC ಅನ್ನು ಮರುಪ್ರಾರಂಭಿಸುತ್ತಿದ್ದರೆ, ಮೊದಲು ಅದನ್ನು ತಂತ್ರಜ್ಞರಿಂದ ಸರ್ವಿಸ್ ಮಾಡಿಸಿ. ಅನಿಲ ಸೋರಿಕೆಯನ್ನು ಪರಿಶೀಲಿಸಲು ಮರೆಯದಿರಿ. ನೀವಿರುವ ಪ್ರದೇಶದಲ್ಲಿ ವೋಲ್ಟೇಜ್ ಏರಿಳಿತವಿದ್ದರೆ, ಉತ್ತಮ ಸ್ಟೆಬಿಲೈಜರ್ ಅನ್ನು ಸಹ ಹಾಕಿಸಿಕೊಳ್ಳಿ. 

ಇದನ್ನೂ ಓದಿ : ಕೇವಲ 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಐಫೋನ್ 15 ಖರೀದಿಸಿ!!

ಎಸಿ ಅಳವಡಿಕೆಯ ಸಮಯದಲ್ಲಿ ಅಗತ್ಯ ಮುನ್ನೆಚ್ಚರಿಕೆಗಳು :
ಎಸಿ ಅಳವಡಿಸುವಾಗ, ನೀರು ಸರಿಯಾಗಿ ಹೊರಹೋಗುವಂತೆ ಅದನ್ನು ಸ್ವಲ್ಪ ಓರೆಯಾಗಿ ಇಡುವುದು ಮುಖ್ಯ. ಇಲ್ಲವಾದರೆ ಯುನಿಟ್ ಒಳಗೆ ನೀರು ಸಂಗ್ರಹವಾಗಬಹುದು ಮತ್ತು ತರುವಾಯ ಸೋರಿಕೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಅನುಭವಿ ತಂತ್ರಜ್ಞರಿಂದ ಮಾತ್ರ  ರೀ ಇನ್ಸ್ಟಾಲ್ ಮಾಡಿಸಿ ಮತ್ತು ಎಲ್ಲಾ ಸುರಕ್ಷತಾ ಅಂಶಗಳನ್ನು ನೋಡಿಕೊಳ್ಳಿ.

ಶಾಖದಿಂದ ಮುಕ್ತಿ ಪಡೆಯಲು ಎಸಿ ಅತ್ಯಗತ್ಯ, ಆದರೆ ಅದನ್ನು ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಎತ್ತರದಲ್ಲಿ ಅಳವಡಿಸದಿದ್ದರೆ, ಅದರ ಪೂರ್ಣ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಸರಿಯಾದ ಮಾಹಿತಿಯೊಂದಿಗೆ AC ಅಳವಡಿಸಿಕೊಳ್ಳಿ ಮತ್ತು ಬೇಸಿಗೆಯಲ್ಲಿ ಆರಾಮವಾಗಿರಿ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News