)
WhatsApp Web Users: ಇತ್ತೀಚಿನ ದಿನಗಳಲ್ಲಿ ಜನರು ವಾಟ್ಸಾಪ್ನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇದನ್ನು ಕೇವಲ ವೈಯಕ್ತಿಕ ವಿಷಯಗಳಿಗೆ ಮಾತ್ರವಲ್ಲದೇ ವ್ಯವಹಾರದ ವಿಷಯವಾಗಿ ಕೂಡ ಇದನ್ನು ಬಳಸುತ್ತಾರೆ. ಆದ ಕಾರಣಕ್ಕೆ ಈ ಆಪ್ ಬಳಕೆ ಮಾಡುವವರಿಗೆ ಕೇಂದ್ರದಿಂದ ಹೊಸ ನಿಯಮ ಅಪ್ಡೇಟ್ ಬಂದಿದೆ.
ವಾಟ್ಸಾಪ್ ಈಗ ಲಕ್ಷಾಂತರ ಜನರ ದೈನಂದಿನ ಜೀವನದ ಭಾಗವಾಗಿದೆ. ಆಪ್ತರೊಂದಿಗೆ ಕೇವಲ ಜಾಟ್ ಮಾಡಲು ಇದನ್ನು ಬಳಸುವುದಷ್ಟೇ ಅಲ್ಲ, ಅದಕ್ಕೂ ಮೀರಿ ಜನರು ಕೆಲಸದ ಸಲುವಾಗಿ ವಾಟ್ಸಾಪ್ ವೆಬ್ ಬಳಸುವುದು ಸಾಮಾನ್ಯವಾಗಿದೆ. ಆದರೆ ಇದೀಗ ಕೇಂದ್ರ ಸರ್ಕಾರದಿಂದ ಈ ಬಗ್ಗೆ ಒಂದು ಗಂಭೀರ ಎಚ್ಚರಿಕೆ ಹೊರಬಂದಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಸ್ಪಷ್ಟಪಡಿಸಿರುವಂತೆ, ವಾಟ್ಸಾಪ್ ಬಳಸುವ ಸಂದರ್ಭದಲ್ಲಿ ವೈಯಕ್ತಿಕ ಹಾಗೂ ಕಂಪನಿಯ ಪ್ರಮುಖ ಮಾಹಿತಿಗಳು ಸೋರಿಕೆಯಾಗುವ ಅಪಾಯ ಹೆಚ್ಚು. ವಿಶೇಷವಾಗಿ, ಕಚೇರಿ ವೈ-ಫೈ ಮೂಲಕ ನೀವು ವಾಟ್ಸಾಪ್ ವೆಬ್ ಬಳಸಿದರೆ, ನಿಮ್ಮ ಕಂಪನಿಯೇ ನಿಮ್ಮ ವೈಯಕ್ತಿಕ ಡೇಟಾವನ್ನು ಬಳಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ಇದಲ್ಲದೆ, WhatsApp ವೆಬ್ ಲಾಗಿನ್ ಆಗಿರುವ ಪಾಸ್ವರ್ಡ್ ಕಳೆದು ಹೋದರೆ ಅಥವಾ ಅಸುರಕ್ಷಿತವಾಗಿ ಉಳಿದರೆ, ದೊಡ್ಡ ಪ್ರಮಾಣದ ಡೇಟಾ ಸೋರಿಕೆಯ ಅಪಾಯ ಎದುರಾಗುತ್ತದೆ. ಸ್ಕ್ರೀನ್ ಮಾನಿಟರಿಂಗ್, ಮಾಲ್ವೇರ್, ಬ್ರೌಸರ್ ಹೈಜಾಕಿಂಗ್ ಮುಂತಾದ ಸೈಬರ್ ಅಪಾಯಗಳಿಗೂ ಬಳಕೆದಾರರು ಗುರಿಯಾಗಬಹುದು.
ನಿಮ್ಮ ಸುರಕ್ಷತೆಗೆ ಪಾಲಿಸಬೇಕಾದ ಮುನ್ನಚ್ಚರಿಕೆಗಳು:
ಕೆಲಸ ಮುಗಿದ ತಕ್ಷಣ WhatsApp ವೆಬ್ನಿಂದ ಲಾಗ್ ಔಟ್ ಮಾಡಿ.
ನಿಮ್ಮ ವೈಯಕ್ತಿಕ ಅಂಶಗಳಿಗೆ ಡಿಜಿಟಲ್ ಲಾಕ್ ಮಾಡಿ
ಅಸುರಕ್ಷಿತ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ.
ಕಂಪನಿಯ ಭದ್ರತಾ ನಿಯಮಗಳನ್ನು ಪಾಲಿಸಿ.
ಸಮಯಕ್ಕೆ ಸರಿಯಾಗಿ ಸೆಕ್ಯುರಿಟಿ ಅಪ್ಡೇಟ್ಗಳನ್ನು ಇನ್ಸ್ಟಾಲ್ ಮಾಡಿ.
ಕೇಂದ್ರದ ಈ ಎಚ್ಚರಿಕೆ, ಸಾಮಾನ್ಯ ಬಳಕೆದಾರರಿಗೂ ಮತ್ತು ಉದ್ಯೋಗ ಕ್ಷೇತ್ರದಲ್ಲೂ WhatsApp ವೆಬ್ ಬಳಸುವವರಿಗೆ ಜಾಗೃತಿಯ ಸೂಚನೆ.