)
ಬಹುತೇಕ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ಪ್ಲಾನ್ ಗಳ ದರವನ್ನು ಹೆಚ್ಚಿಸಿವೆ. ಇದರ ಮಧ್ಯೆ ಜಿಯೋ ಅಗ್ಗದ ಬೆಲೆಯ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಇದರಲ್ಲಿ ಪ್ರತಿಯೊಂದು ಪ್ಲಾನ್ ದೈನಂದಿನ ಡೇಟಾ, ಅನಿಯಮಿತ ಕರೆ ಮತ್ತು ಜಿಯೋ ಟಿವಿಗೆ ಉಚಿತ ಅಕ್ಸೆಸ್ ನೀಡುತ್ತದೆ.
ಜಿಯೋದ 75 ರೂ. ಯೋಜನೆ :
ಜಿಯೋದ 75 ರೂ. ಯೋಜನೆಯು 23 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಬಳಕೆದಾರರು ಪ್ರತಿದಿನ 0.1GB ಡೇಟಾ, 200MB ಹೆಚ್ಚುವರಿ ಡೇಟಾ, ಅನಿಯಮಿತ ಕರೆಗಳು, 50 SMS ಲಾಭ ಪಡೆಯಬಹುದು. ಜೊತೆಗೆ ಜಿಯೋ ಟಿವಿಗೆ ಅಕ್ಸೆಸ್ ಸಿಗುತ್ತದೆ.
91 ರೂಪಾಯಿ ರೀಚಾರ್ಜ್ ಯೋಜನೆ :
ಈ ರೀಚಾರ್ಜ್ ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದು ಪ್ರತಿದಿನ 0.1GB ಡೇಟಾ ಜೊತೆಗೆ 200MB ಹೆಚ್ಚುವರಿ ಡೇಟಾವನ್ನು ನೀಡುತ್ತದೆ ಮತ್ತು ಜಿಯೋ ಟಿವಿ ಪ್ರಯೋಜನಗಳನ್ನು ಸಹ ಒಳಗೊಂಡಿದೆ.
ಜಿಯೋದ 125 ರೂ. ಯೋಜನೆ :
125 ರೂ. ಯ ಈ ಪ್ಲಾನ್ 23 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದು ದಿನಕ್ಕೆ 0.5GB ಡೇಟಾವನ್ನು ನೀಡುತ್ತದೆ. ಈ ರೀಚಾರ್ಜ್ ಯೋಜನೆಯು ಅನಿಯಮಿತ ಕರೆ ಮತ್ತು ಜಿಯೋ ಟಿವಿಗೆ ಅಕ್ಸೆಸ್ ನೀಡುತ್ತದೆ.
152 ರೂಪಾಯಿ ಯೋಜನೆ :
ಜಿಯೋದ 152 ರೂ. ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದು 0.5GB ದೈನಂದಿನ ಡೇಟಾವನ್ನು, ಅನಿಯಮಿತ ಕರೆ ಮತ್ತು ಉಚಿತ SMS ಅನ್ನು ನೀಡುತ್ತದೆ. ಈ ರೀಚಾರ್ಜ್ ಯೋಜನೆಯಲ್ಲಿ ಜಿಯೋ ಟಿವಿ ಕೂಡ ಸೇರಿದೆ.
ಜಿಯೋ 186 ರೂಗಳ ರೀಚಾರ್ಜ್ ಯೋಜನೆ :
186 ರೂ. ಯ ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದು ದಿನಕ್ಕೆ 1GB ಡೇಟಾವನ್ನು ನೀಡುತ್ತದೆ. ಬಳಕೆದಾರರು ಜಿಯೋ ಟಿವಿ ಮತ್ತು ಅನಿಯಮಿತ ಕರೆಗಳ ಲಾಭವನ್ನು ಕೂಡಾ ಆನಂದಿಸಬಹುದು.
223 ರೂ. ಯ ರೀಚಾರ್ಜ್ ಯೋಜನೆ :
ಜಿಯೋದ 223 ರೂ. ಯೋಜನೆಯು 28 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಇದು ಅನಿಯಮಿತ ಕರೆ ಜೊತೆಗೆ 2GB ಡೇಟಾವನ್ನು ನೀಡುತ್ತದೆ. ಈ ಯೋಜನೆಯು ಜಿಯೋ ಟಿವಿ ಪ್ರಯೋಜನಗಳನ್ನು ಸಹ ಒಳಗೊಂಡಿದೆ.