Citroen eC3: ಭಾರತೀಯ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಇತ್ತೀಚೆಗಷ್ಟೇ ತನ್ನ ಕೈಗೆಟುಕುವ ದರದಲ್ಲಿ ಲಭ್ಯವಾಗುವ ಟಾಟಾ ಟಿಯಾಗೊ ಇವಿಯನ್ನು ಬಿಡುಗಡೆ ಮಾಡಿತ್ತು. ಫುಲ್ ಚಾರ್ಜ್‌ನಲ್ಲಿ 315 ಕಿಲೋಮೀಟರ್ ವ್ಯಾಪ್ತಿಯನ್ನು ನೀಡಬಲ್ಲ ಈ ಕಾರಿನ ಬೆಲೆ 8.49 ಲಕ್ಷದಿಂದ 11.49 ಲಕ್ಷ (ಎಕ್ಸ್ ಶೋ ರೂಂ) ಆಗಿದೆ. ಆದರೆ ಇದೀಗ ಟಾಟಾದ ಅಗ್ಗದ ಇವಿ ಟಾಟಾ ಟಿಯಾಗೊಗೆ ಟಕ್ಕರ್ ನೀಡಲು ಫ್ರೆಂಚ್ ಕಂಪನಿಯೊಂದು ತಯಾರಾಗಿದೆ. ಇದರ ವಿಶೇಷತೆ ಎಂದರೆ ಈ ಎಲೆಕ್ಟ್ರಿಕ್ ಕಾರ್ ಒಮ್ಮೆ ಫುಲ್ ಚಾರ್ಜ್ ಆದ ಬಳಿಕ ಸುಮಾರು 320 ಕಿಲೋಮೀಟರ್ ಕ್ರಮಿಸಬಲ್ಲದು ಎಂದು ಹೇಳಲಾಗುತ್ತಿದೆ. ಯಾವುದೀ ಕಾರು? ಏನಿದರ ವಿಶೇಷ ಎಂಬಿತ್ಯಾದಿ ಮಾಹಿತಿಗಳನ್ನು ತಿಳಿಯಲು ಮುಂದೆ ಓದಿ...


COMMERCIAL BREAK
SCROLL TO CONTINUE READING

ಫ್ರೆಂಚ್ ಕಾರು ತಯಾರಕ ಕಂಪನಿಯು ಟಾಟಾ ಟಿಯಾಗೊ ಇವಿ ಜೊತೆಗೆ ಸ್ಪರ್ಧಿಸಲು ಸಿಟ್ರೊಯೆನ್ ಇಸಿ 3 ( Citroen eC3) ಎಂಬ ಕಾರನ್ನು ಬಿಡುಗಡೆ ಮಾಡಿದೆ. ಇದರ ವಿಶೇಷವೆಂದರೆ ಅದರ ಮೈಲೇಜ್. Citroen eC3 ಫುಲ್ ಚಾರ್ಜ್‌ನಲ್ಲಿ 320KM ಕ್ರಮಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಕಾರ್ ಅನ್ನು ಗ್ರಾಹಕರು ಕಂಪನಿಯ ಡೀಲರ್‌ಶಿಪ್ ಅಥವಾ ವೆಬ್‌ಸೈಟ್ ಮೂಲಕ ಕೇವಲ ₹ 25000 ಗಳಿಗೆ ಪ್ರೀ ಬುಕ್ಕಿಂಗ್ ಮಾಡಬಹುದಾಗಿದೆ.


ಸಿಟ್ರೊಯೆನ್ ಇಸಿ 3 ( Citroen eC3) ಇವಿಯನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಹೊಸ ಸಿಟ್ರೊಯೆನ್ eC3 ನ ಉನ್ನತ ರೂಪಾಂತರವು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಂಪರ್ಕದೊಂದಿಗೆ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎತ್ತರ ಹೊಂದಾಣಿಕೆಯ ಡ್ರೈವರ್ ಸೀಟ್, ನಾಲ್ಕು-ಸ್ಪೀಕರ್ ಆಡಿಯೊ ಸಿಸ್ಟಮ್, ಸಂಪರ್ಕಿತ ಕಾರ್ ಟೆಕ್ ಅನ್ನು ಒಳಗೊಂಡಿದೆ. ಇದಲ್ಲದೆ, ಸುರಕ್ಷತೆಗಾಗಿ ಇದರಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಜೊತೆಗೆ ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಲಭ್ಯವಾಗಲಿದೆ ಎಂದು ಕಂಪನಿ ಮಾಹಿತಿ ನೀಡಿದೆ.


ಇದನ್ನೂ ಓದಿ- Tata Tiago EV: ಬಿಡುಗಡೆಯಾಗುತ್ತಲೇ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದೆ ಈ ಇಲೆಕ್ಟ್ರಿಕ್ ಕಾರ್


ಸಿಟ್ರೊಯೆನ್ eC3 ಕಾರಿನ ಬ್ಯಾಟರಿ ಮತ್ತು ಶ್ರೇಣಿ:
* ಸಿಟ್ರೊಯೆನ್ eC3 ಎಲೆಕ್ಟ್ರಿಕ್ ಕಾರು  EV 29.2kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ, ಇದು ಮುಂಭಾಗದ ಆಕ್ಸಲ್‌ನಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಮೋಟರ್‌ಗೆ ಶಕ್ತಿಯನ್ನು ನೀಡುತ್ತದೆ. 
* ಇದರ ಮೋಟಾರ್ 57bhp ಪವರ್ ಮತ್ತು 143Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 
* ಇದು 6.8 ಸೆಕೆಂಡುಗಳಲ್ಲಿ 0 ರಿಂದ 60 kmph ವೇಗವನ್ನು ಹೊಂದುತ್ತದೆ ಮತ್ತು 107kmph ವೇಗವನ್ನು ಹೊಂದಿದೆ ಎಂಬ ಅಂಶದಿಂದ ನೀವು ಅದರ ಶಕ್ತಿಯನ್ನು ಅಳೆಯಬಹುದು. 
* Citroen eC3 ಒಂದೇ ಚಾರ್ಜ್‌ನಲ್ಲಿ 320 ಕಿಮೀ (ARAI-ಪ್ರಮಾಣೀಕೃತ) ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.


ಇದನ್ನೂ ಓದಿ- ಈ ಬ್ಯಾಟರಿ ಇದ್ದರೆ ಅಗ್ಗದ ಎಲೆಕ್ಟ್ರಿಕ್ ಕಾರು ಸಿಂಗಲ್ ಚಾರ್ಜ್ ನಲ್ಲಿ ಕ್ರಮಿಸುತ್ತದೆ 1260KM ದೂರ, ಬೆಲೆ ಕೂಡಾ ಕಡಿಮೆ


ಸಿಟ್ರೊಯೆನ್ eC3 ಕಾರಿನ ಚಾರ್ಜಿಂಗ್ ವೈಶಿಷ್ಟ್ಯಗಳು:
>> ಹೊಸ ಸಿಟ್ರೊಯೆನ್ ಎಲೆಕ್ಟ್ರಿಕ್ ಕಾರು ಎರಡು ಚಾರ್ಜಿಂಗ್ ಆಯ್ಕೆಗಳನ್ನು ಹೊಂದಿದೆ
 - DC ಫಾಸ್ಟ್ ಚಾರ್ಜರ್- ವೇಗದ ಚಾರ್ಜರ್‌ನೊಂದಿಗೆ, ಇದನ್ನು 57 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು.
 - 3.3kW ಆನ್‌ಬೋರ್ಡ್ AC ಚಾರ್ಜರ್- ಎಸಿ ಚಾರ್ಜರ್‌ನೊಂದಿಗೆ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 10.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. 


ಬ್ಯಾಟರಿ ಪ್ಯಾಕ್‌ನ ವಾರಂಟಿ:
ಕಂಪನಿಯು ಬ್ಯಾಟರಿ ಪ್ಯಾಕ್‌ನಲ್ಲಿ 7 ವರ್ಷ/1,40,000 ಕಿಮೀ ವಾರಂಟಿ, ಎಲೆಕ್ಟ್ರಿಕ್ ಮೋಟರ್‌ನಲ್ಲಿ 5 ವರ್ಷ/1,00,000 ಕಿಮೀ ವಾರಂಟಿ ಮತ್ತು ವಾಹನದ ಮೇಲೆ 3 ವರ್ಷ/1,25,000 ಕಿಮೀ ವಾರಂಟಿ ನೀಡುತ್ತಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.