ಬೆಂಗಳೂರು: ಆನ್ಲೈನ್ ಪಾವತಿ ವಿಧಾನಗಳಲ್ಲಿ ಯುಪಿಐ ಎಂದರೆ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ವಿಧಾನವು ತುಂಬಾ ಸರಳ ಪಾವತಿ ವಿಧಾನವಾಗಿದೆ. ಯುಪಿಐ ಮೂಲಕ ಹಣದ ವಹಿವಾಟು ತುಂಬಾ ಸುಲಭವಾಗಿರುವುದರಿಂದ ಹೆಚ್ಚಿನ ಮಂದಿ ಇದನ್ನೇ ಬಳಸುತ್ತಾರೆ. ಆದರೆ, ತರಾತುರಿಯಲ್ಲಿ ನಾವು ಹಲವೊಮ್ಮೆ ಮಿಸ್ ಆಗಿ ಬೇರೆ ಖಾತೆಗೆ ಹಣ ಹಾಕುತ್ತೇವೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂದು ತೋಚುವುದೇ ಇಲ್ಲ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಬದಲಿಗೆ ಒಂದೊಮ್ಮೆ ನಿಮ್ಮಿಂದಲೂ ಇಂತಹ ತಪ್ಪು ಆದಾಗ ಹಣವನ್ನು ಹೇಗೆ ಮರಳಿ ಪಡೆಯಬಹುದು ಎಂದು ತಿಳಿಯಿರಿ.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಯುಪಿಐನಲ್ಲಿ ತಪ್ಪಾಗಿ ಬೇರೆ ಅಕೌಂಟ್ ಗೆ ಹಣ ಹಾಕಿದಾಗ ಈ ಬಗ್ಗೆ ಮೊದಲು ಪಾವತಿ ಸೇವಾ ಪೂರೈಕೆದಾರರಿಗೆ ವರದಿ ಮಾಡಬೇಕು. ನೀವು GPay, PhonePe, PayTM ಹೀಗೆ ಯಾವ ಯುಪಿಐ ಮೂಲಕ ನೀವು ಹಣದ ವಹಿವಾಟನ್ನು ನಡೆಸಿದ್ದೀರೋ ಆ ಸೇವಾ ಪೂರೈಕೆದಾರರ ಕೇರ್ ಸಪೋರ್ಟ್ ಗೆ ಕರೆ ಮಾಡುವ ಮೂಲಕ ವಿಷಯದ ಬಗ್ಗೆ ಮಾಹಿತಿ ನೀಡಬೇಕು. ಇದಲ್ಲದೆ ಇಲ್ಲಿ ಸಮಸ್ಯೆಯ ಬಗ್ಗೆ ತಿಳಿಸುವ ಮೂಲಕ ಮರುಪಾವತಿಗಾಗಿ ವಿನಂತಿ ಸಲ್ಲಿಸಬೇಕಾಗುತ್ತದೆ.


ಇದನ್ನೂ ಓದಿ- ChatGPT ಡೌನ್‌ಲೋಡ್ ಮಾಡುವ ಮುನ್ನ ಜಾಗರೂಕರಾಗಿರಿ!


ಒಂದೊಮ್ಮೆ ಬಳಕೆದಾದರು ಗ್ರಾಹಕ ಸೇವಾ ಪೂರೈಕೆದಾರರಿಂದ ಯಾವುದೇ ಸಹಾಯವನ್ನು ಪಡೆಯದಿದ್ದರೆ, ಈ ಕುರಿತಂತೆ ಗ್ರಾಹಕರು NPCI ಪೋರ್ಟಲ್‌ನಲ್ಲಿ ದೂರು ಸಲ್ಲಿಸಬಹುದು. ಇದಕ್ಕಾಗಿ...
* ಮೊದಲು NPCI ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
* ಬಳಿಕ ವಾಟ್ ವಿ ಡೂ ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
* ನಂತರ UPI ಮೇಲೆ ಕ್ಲಿಕ್ ಮಾಡಿ.
* ಇಲ್ಲಿ Dispute Redressal Mechanism ಎಂಬ ಆಯ್ಕೆ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
* ಇಲ್ಲಿ ವಹಿವಾಟಿನ ವಿವರಗಳನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. 
* ವಿವರಗಳನ್ನು ನಮೂದಿಸಿದ ನಂತರ, ಅಲ್ಲಿ ಕಾರಣವನ್ನು ಕೇಳಲಾಗುತ್ತದೆ, ಇನ್ನೊಂದು ಖಾತೆಗೆ ತಪ್ಪಾಗಿ ವರ್ಗಾಯಿಸಲಾಗಿದೆ ಎಂಬ ಆಯ್ಕೆಯನ್ನು ಆರಿಸಿ.
* ಇದಾದ ಬಳಿಕ ದೂರು ದಾಖಲಿಸಲಾಗುವುದು.


ಇದನ್ನೂ ಓದಿ- ಗೂಗಲ್ ನಲ್ಲಿ ಈ ವಿಷಯಗಳನ್ನು ಸರ್ಚ್ ಮಾಡಿದರೆ ಜೈಲು ಸೇರಬೇಕಾಗುತ್ತದೆ !


NPCI ಪೋರ್ಟಲ್‌ನಲ್ಲಿಯೂ ಕೂಡ ನಿಮಗೆ ಯಾವುದೇ ರೀತಿಯ ಪರಿಹಾರ ದೊರೆಯದಿದ್ದರೆ ಅಂತಹ ಸಂದರ್ಭದಲ್ಲಿ ನೀವು ಪಾವತಿ ಸೇವಾ ಪೂರೈಕೆದಾರರ ಬ್ಯಾಂಕ್ ಮತ್ತು ಹಣವನ್ನು ಕಳುಹಿಸಿರುವ ಬ್ಯಾಂಕ್‌ಗೆ ನಿಮ್ಮ ದೂರನ್ನು ಸಲ್ಲಿಸಲು ಕೂಡ ಅವಕಾಶವಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.