ಭಾರತದಲ್ಲಿ ಯಾವ ಕಂಪನಿಯ ಸ್ಮಾರ್ಟ್‌ಫೋನ್ ಹೆಚ್ಚಾಗಿ ಮಾರಾಟವಾಗುತ್ತೆ ಗೊತ್ತಾ?
Smartphones: ಇದು ಸ್ಮಾರ್ಟ್‌ಫೋನ್ ಯುಗ. ಈಗಂತೂ ಯಾರ ಕೈಯಲ್ಲಿ ನೋಡಿದರೂ ಬರೀ ಸ್ಮಾರ್ಟ್‌ಫೋನ್‌ಗಳದ್ದೇ ಹವಾ! ಈ ಸ್ಮಾರ್ಟ್ಫೋನ್ಗಳು ಕೆಲವು ವಿಷಯಗಳಲ್ಲಿ ಜೀವನವನ್ನು ಎಷ್ಟು ಸುಗಮಗೊಳಿಸಿವೆಯೋ, ಸ್ನೇಹ-ಸಂಬಂಧಗಳ ವಿಷಯಕ್ಕೆ ಬಂದರೆ ಅಷ್ಟೇ ನಕಾರಾತ್ಮಕ ಪರಿಣಾಮ ಬೀರಿರುವುದಂತೂ ಸುಳ್ಳಲ್ಲ. ಅದೇನೇ ಇರಲಿ ಭಾರತದಲ್ಲಿ ಯಾವ ಕಂಪನಿಯ ಸ್ಮಾರ್ಟ್‌ಫೋನ್ ಹೆಚ್ಚಾಗಿ ಮಾರಾಟವಾಗುತ್ತೆ ಗೊತ್ತಾ?
Most Buying Smartphones In India: ತಂತ್ರಜ್ಞಾನ ಮುಂದುವರೆದಂತೆ ಜನರೂ ಅಪ್ಡೇಟ್ ಆಗುತ್ತಿದ್ದಾರೆ. ಮೊದಲೆಲ್ಲಾ ಸಾಮಾನ್ಯ ಕೀಪ್ಯಾಡ್ ಫೋನ್ ಕೊಳ್ಳುವುದೇ ಕಷ್ಟವಾಗಿತ್ತು. ಆದರೆ, ಈಗಂತೂ ಯಾರ ಕೈಯಲ್ಲಿ ನೋಡಿದರೂ ಬರೀ ಸ್ಮಾರ್ಟ್‌ಫೋನ್‌ಗಳದ್ದೇ ಹಾವಳಿ. ಕೆಲವರಿಗಂತೂ ಐಫೋನ್ ಕ್ರೇಜ್. ಹಾಗಾಗಿಯೇ, ಜಾಗತಿಕ ಐಫೋನ್ ಬಳಕೆದಾರರಲ್ಲಿ ಭಾರತವೂ ಕೂಡ ಅಗ್ರ 5 ಮಾರುಕಟ್ಟೆಗಳಲ್ಲಿ ಒಂದಾಗಿದೆ.
2023ರ Q2ರಲ್ಲಿ 59% ಪಾಲನ್ನು ಹೊಂದಿರುವ ಅಲ್ಟ್ರಾ-ಪ್ರೀಮಿಯಂ ವಿಭಾಗದಲ್ಲಿ (ರೂ. 45,000 ಮತ್ತು ಹೆಚ್ಚಿನದು) ಐಫೋನ್ ತಯಾರಕ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿದೆ. ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ, ಭಾರತದ ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಏಪ್ರಿಲ್-ಜೂನ್ ಅವಧಿಯಲ್ಲಿ 112% (ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ) ಬೆಳೆದಿದೆ. ಅದರ ಒಟ್ಟು ಸಾಗಣೆಗೆ (Shipping) ದಾಖಲೆಯ 17 ಪ್ರತಿಶತದಷ್ಟು ಕೊಡುಗೆ ನೀಡಿದೆಯಂತೆ. ಅಷ್ಟಕ್ಕೂ ಭಾರತದಲ್ಲಿ ಅತಿ ಹೆಚ್ಚು ಮಾರಟವಾಗುತ್ತಿರುವ ಸ್ಮಾರ್ಟ್‌ಫೋನ್ ಯಾವುದು ಗೊತ್ತಾ?
ಭಾರತೀಯರು ಹೆಚ್ಚಾಗಿ ಖರೀದಿಸುವ ಸ್ಮಾರ್ಟ್‌ಫೋನ್ ಯಾವುದು ಗೊತ್ತಾ?
ಅಗ್ರಸ್ಥಾನದಲ್ಲಿದೆ ಈ ಫೋನ್ ಕಂಪನಿ:
ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ, ಪ್ರಸಿದ್ಧ ಫೋನ್ ತಯಾರಾಕ ಕಂಪನಿಯಾದ ಸ್ಯಾಮ್‌ಸಂಗ್ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸತತ ಮೂರನೇ ತ್ರೈಮಾಸಿಕದಲ್ಲಿಯೂ 18% ಪಾಲನ್ನು ಹೊಂದಿದ್ದು ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ. ಗಮನಾರ್ಹವಾಗಿ, ದಕ್ಷಿಣ ಕೊರಿಯಾದ ಬ್ರ್ಯಾಂಡ್ ಒಂದು ವರ್ಷದ ನಂತರ ಆಪಲ್ ಅನ್ನು ಹಿಂದಿಕ್ಕಿ ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ (ರೂ. 30,000 ಮತ್ತು ಅದಕ್ಕಿಂತ ಹೆಚ್ಚಿನ) 34% ಪಾಲನ್ನು ಹೊಂದಿರುವ ತನ್ನ ಅಗ್ರಸ್ಥಾನವನ್ನು ಮರಳಿ ಪಡೆಯಿತು.
ಇದನ್ನೂ ಓದಿ- ಬ್ಲೂಟೂತ್ ಕಾಲಿಂಗ್ ಸಪೋರ್ಟ್ ಜೊತೆಗೆ ಕೈಗೆಟುಕುವ ಬೆಲೆಯ ನಾಯ್ಸ್ ಸ್ಮಾರ್ಟ್‌ವಾಚ್
ಸಂಶೋಧನಾ ವಿಶ್ಲೇಷಕ ಶುಭಂ ಸಿಂಗ್, "ಆಪಲ್ ಅಲ್ಟ್ರಾ ಪ್ರೀಮಿಯಂ ವಿಭಾಗದಲ್ಲಿ ತನ್ನ ನಾಯಕತ್ವವನ್ನು ಶೇಕಡಾ 59 ರಷ್ಟು ಪಾಲನ್ನು ಮುಂದುವರಿಸಿದೆ. ಭಾರತವು ಈಗ ಆಪಲ್‌ನ ಅಗ್ರ ಐದು ಮಾರುಕಟ್ಟೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.
ಎರಡನೇ ಸ್ಥಾನ ಕಾಯ್ದುಕೊಂಡ ವಿವೋ:
ಇನ್ನು ಭಾರತೀಯರು ಹೆಚ್ಚು ಖರೀದಿಸುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ವಿವೋ ಕಂಪನಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಅಷ್ಟೇ ಅಲ್ಲದೆ, ವಾರ್ಷಿಕ ಬೆಳವಣಿಗೆಯಲ್ಲಿ ಟಾಪ್ 5 ಸ್ಥಾನದಲ್ಲಿ ಸ್ಥಾನ ಪಡೆದಿರುವ ಏಕೈಕ ಬ್ರ್ಯಾಂಡ್ ಇದಾಗಿದೆ.
ಸ್ಯಾಮ್‌ಸಂಗ್, ವಿವೋ ಹೊರತುಪಡಿಸಿ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್ ಎಂದರೆ OnePlus. ಇದು ಎರಡನೇ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ 68 ಶೇಕಡಾ ಬೆಳವಣಿಗೆಯನ್ನು ಹೊಂದಿದೆ. ಇವುಗಳಲ್ಲದೆ, ಶೇಕಡಾ 21ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಮಧ್ಯಮ ಶ್ರೇಣಿಯ (ರೂ. 20,000 ರಿಂದ ರೂ. 30,000) ವಿಭಾಗದಲ್ಲಿ Oppo ಅಗ್ರ ಬ್ರಾಂಡ್ ಆಗಿ ಹೊರಹೊಮ್ಮಿದೆ.
ಇದನ್ನೂ ಓದಿ- ಇಲ್ಲಿಯವರೆಗಿನ ಅಗ್ಗದ ಲ್ಯಾಪ್ಟಾಪ್ ಇದು ! ಉತ್ತಮ ವೈಶಿಷ್ಟ್ಯ ಹೊಂದಿರುವ ಲ್ಯಾಪ್ ಟಾಪ್ ಬಿಡುಗಡೆ ಮಾಡಿದ Jio!
ತಂತ್ರಜ್ಞಾನ ಕ್ಷೇತ್ರದ ಎಕ್ಸ್ಪೆರ್ಟ್ಸ್ ಪ್ರಕಾರ, ಮುಂದಿನ ದಿನಗಳಲ್ಲಿ ಭಾರತದಲ್ಲಿ 5G ಸ್ಮಾರ್ಟ್‌ಫೋನ್‌ಗಳ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದ್ದು, 5ಜಿ ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳು ಈ ಕಂಪನಿಗಳಿಗೆ ಪ್ರಬಲ ಸ್ಪರ್ಧೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.