)
ಮಧ್ಯಮ ವರ್ಗದ ಜನರು ಹೆಚ್ಚು ದುಬಾರಿ ಕಾರುಗಳನ್ನು ಖರೀದಿಸಲು ಶಕ್ತರಲ್ಲ. ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಸುಲಭವಾಗಿ ಕೈಗೆಟುಕುವ ದರದಲ್ಲಿ ಲಭ್ಯವಾಗುವ ಕಾರಿದು. ಈ ಕಾರಿನ ಹೆಸರು ಮಾರುತಿ ಎಸ್-ಪ್ರೆಸೊ. ಇದು ಮಾರುಕಟ್ಟೆಗೆ ಬಿಡುಗಡೆಯಾದ ತಕ್ಷಣದಿಂದ ಜನರ ನೆಚ್ಚಿನ ಕಾರಾಗಿ ಮಾರ್ಪಟ್ಟಿದೆ. ಏಕೆಂದರೆ ನೋಡುವುದಕ್ಕೆ ಚಿಕ್ಕದಾದರೂ ಉತ್ತಮ ಮೈಲೇಜ್ ನೀಡುವ ಕಾರು. ಈ ಕಾರಣದಿಂದಾಗಿಯೇ ಜನರು ಈ ಕಾರನ್ನು ಖರೀದಿಸುವಲ್ಲಿ ಒಲವು ತೋರುತ್ತಿದ್ದಾರೆ.
ವಿನ್ಯಾಸ :
ಮಾರುತಿ ಎಸ್-ಪ್ರೆಸೊವನ್ನು ಸಣ್ಣ ಎಸ್ಯುವಿ ಎಂದು ಸಹ ಕರೆಯಬಹುದು. ಏಕೆಂದರೆ ಈ ಸಣ್ಣ ಕಾರಿನಲ್ಲಿ ಸಾಕಷ್ಟು ಸ್ಪೇಸ್ ಇದೆ. ಈ ಕಾರನ್ನು ಎತ್ತರದ, ಬಾಕ್ಸಿ ಮತ್ತು ಬಲವಾದ ದೇಹಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಇದು ಅದರ ನೋಟವನ್ನು ಉತ್ತಮವಾಗಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಈ ಕಾರಿಗೆ ಎಸ್ಯುವಿ ತರಹದ ಲುಕ್ ನೀಡಲು ಕಂಪನಿ ನೇರ ಕಟ್ಗಳು, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ದಪ್ಪವಾದ ವೀಲ್ ಆರ್ಕ್ ಗಳನ್ನು ನೀಡಿದೆ. ಈ ಕಾರಿನಲ್ಲಿ 'ಸುಜುಕಿ' ಎಂದು ಬರೆಯಲಾದ ಕ್ಲಾಸಿಕ್ ಗ್ರಿಲ್ ಇದೆ.
ವೈಶಿಷ್ಟ್ಯಗಳು :
ಮಾರುತಿ ಎಸ್-ಪ್ರೆಸೊದ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ ಇದು 7-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಅದನ್ನು ನಿಮ್ಮ ಫೋನ್ಗೆ ಸಂಪರ್ಕಿಸುವ ಮೂಲಕ ಫೋನ್ನ ನೋಟಿಫಿಕೆಶನ್ ಅನ್ನು ಕಾರಿನ ಡಿಸ್ಪ್ಲೇ ಮೇಲೆ ಕಾಣಿಸಿಕೊಳ್ಳುವಂತೆ ಮಾಡಬಹುದು. ಇದರೊಂದಿಗೆ, ಸುರಕ್ಷತೆಗಾಗಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಏರ್ಬ್ಯಾಗ್ಗಳು ಮತ್ತು ABS ಬ್ರೇಕ್ ಸಿಸ್ಟಮ್ ಅನ್ನು ಹೊಂದಿದೆ. ಇನ್ನು ಕಾರಿನ ಟೈರ್ಗಳ ಬಗ್ಗೆ ಹೇಳುವುದಾದರೆ, ಇದು 14-ಇಂಚಿನ ಚಕ್ರಗಳನ್ನು ಹೊಂದಿದ್ದು ಕಾರನ್ನು ಸಾಕಷ್ಟು ಎತ್ತರದಲ್ಲಿರಿಸುತ್ತದೆ.
ಎಂಜಿನ್ :
ಮಾರುತಿ ಎಸ್-ಪ್ರೆಸೊದ ಎಂಜಿನ್ ಬಗ್ಗೆ ಹೇಳುವುದಾದರೆ, ಇದು 998 ಸಿಸಿ ಎಂಜಿನ್ ಹೊಂದಿದ್ದು, ಇದರಲ್ಲಿ 1.0-ಲೀಟರ್ K10C ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಲಭ್ಯವಿದೆ. ಇದು 66PS ಪವರ್ ಮತ್ತು 89Nm ಟಾರ್ಕ್ ಅನ್ನು ಜನರೇಟ್ ಮಾಡುತ್ತದೆ. ಜೊತೆಗೆ ಇದು ಐಡಲ್ ಸ್ಟಾರ್ಟ್ ಮತ್ತು ಸ್ಟಾಪ್ ತಂತ್ರಜ್ಞಾನದೊಂದಿಗೆ ಪೆಟ್ರೋಲ್ ಎಂಜಿನ್ನೊಂದಿಗೆ ಬರುತ್ತದೆ. ಈ ಕಾರಿನ ಪೆಟ್ರೋಲ್ ಮ್ಯಾನುವಲ್ ರೂಪಾಂತರವು ಲೀಟರ್ಗೆ 24.12 ಕಿಮೀ ಮೈಲೇಜ್ ನೀಡುತ್ತದೆ.
ಬೆಲೆ :
ಮಾರುತಿ ಎಸ್-ಪ್ರೆಸೊದ ಎಕ್ಸ್-ಶೋರೂಂ ಬೆಲೆ 4.26 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದು ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಕಾರು.