ನವದೆಹಲಿ: ಬ್ರಹ್ಮಾಂಡದಲ್ಲಿ ನಿತ್ಯ ವಿಭಿನ್ನ ರೀತಿಯ ಘಟನೆಗಳು ನಡೆಯುತ್ತವೆ. ಇದೇ ವೇಳೆ, ಸಂಶೋಧಕರು ಬ್ರಹ್ಮಾಂಡದ ಬಗ್ಗೆ ಸಂಶೋಧನೆ ಮತ್ತು ಹೊಸ ಮಾಹಿತಿಯನ್ನು ಜಗತ್ತಿಗೆ ನೀಡುತ್ತಿರುತ್ತಾರೆ. ನಮ್ಮ ಸೌರಮಂಡಲವು ನಮ್ಮ ನಕ್ಷತ್ರಪುಂಜದ ಮಧ್ಯಭಾಗದಲ್ಲಿರುವ ಬ್ಲ್ಯಾಕ್ಹೋಲ್ಗೆ ಈ ಹಿಂದೆಗಿಂತ ಹೆಚ್ಚು ಹತ್ತಿರದಲ್ಲಿದೆ ಎಂದು ಇತ್ತೀಚಿನ ಸಂಶೋಧನೆಯೊಂದು ತೋರಿಸಿದೆ. Sagittarius A* ಹೆಸರಿನ ಈ ಬ್ಲ್ಯಾಕ್ಹೋಲ್ನ ಸುತ್ತಲೂ ನಮ್ಮ ಸೌರವ್ಯೂಹವು ವೇಗವಾಗಿ ಚಲಿಸುತ್ತಿದೆ ಎಂದು ಸಂಶೋಧಕರು ನಮ್ಮ ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ.
ಇದನ್ನು ಓದಿ- ಕಪ್ಪುರಂದ್ರದ ಮೊದಲ ಫೋಟೋ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಖಗೋಳಶಾಸ್ತ್ರಜ್ಞರು...!
ನಮ್ಮ ಸೌರವ್ಯೂಹವು ಪ್ರಸ್ತುತ ಉತ್ತಮ ಸ್ಥಿತಿಯಲ್ಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಆದರೂ, ಈ ಮೊದಲು ನಮ್ಮ ಸೌರಮಂಡಲ ಬ್ಲ್ಯಾಕ್ಹೋಲ್ನಿಂದ (Blackhole) ಸ್ವಲ್ಪ ದೂರದಲ್ಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದರಿಂದ ನಮ್ಮ ಸೌರವ್ಯೂಹಕ್ಕೆ ಯಾವುದೇ ಬೆದರಿಕೆ ಇಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಭವಿಷ್ಯದಲ್ಲಿ ಈ ಪರಿಸ್ಥಿತಿಯ ಪರಿಶೀಲನೆ ನಡೆಸುವುದು ಆವಶ್ಯಕವಾಗಲಿದೆ.
ಮಿಲ್ಕಿ ವೆ ಗ್ಯಾಲಕ್ಸಿಯ ಸ್ಪಷ್ಟ ನಕ್ಷೆ ತಯಾರಿಸುವುದು ಸುಲಭದ ಮಾತಲ್ಲ
ಮಿಲ್ಕಿ ವೆ ಗ್ಯಾಲಕ್ಸಿಯ ನಿಖರವಾದ ನಕ್ಷೆಯನ್ನು ರಚಿಸುವುದು ಸುಲಭವಲ್ಲ. ಇದರ ವ್ಯಾಪ್ತಿ ತುಂಬಾ ದೊಡ್ಡದಾಗಿದೆ ಮತ್ತು ಸಂಶೋಧಕರು ಇನ್ನೂ ಅದರ ಬಗ್ಗೆ ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿದ್ದಾರೆ. ಗ್ಯಾಳಕ್ಸಿಯ ನಿಖರವಾದ ನಕ್ಷೆಯನ್ನು ತಯಾರಿಸಲು ಸಮಯ ತೆಗೆದುಕೊಳ್ಳಬಹುದು ಎಂದು ಸಂಶೋಧಕರು ಹೇಳುತ್ತಾರೆ. ಬಾಹ್ಯಾಕಾಶದಲ್ಲಿ ನಕ್ಷತ್ರಗಳು ಮತ್ತು ವಸ್ತುಗಳನ್ನು ನಕ್ಷೆ ಮಾಡುವುದು ಸುಲಭ ಎಂದು ಅವರು ನಂಬುತ್ತಾರೆ, ಆದರೆ ಅವುಗಳ ನಡುವೆ ಎಷ್ಟು ಅಂತರವಿದೆ ಎಂಬುದನ್ನು ಕಂಡುಹಿಡಿಯಲು ಇನ್ನೂ ಹೆಚ್ಚಿನ ಅಧ್ಯಯನ ಮಾಡಲಾಗುತ್ತಿದೆ. ಬಾಹ್ಯಾಕಾಶಕ್ಕೆ ಸಂಬಂಧಿಸಿದ ಅನೇಕ ಮಾಹಿತಿಗಳು ನಮ್ಮೊಂದಿಗೆ ಲಭ್ಯವಿಲ್ಲದಿರುವುದ ಇದಕ್ಕೆ ಮುಖ್ಯ ಕಾರಣ ಎಂದು ಶಾಸ್ತ್ರಜ್ಞರು ಹೇಳುತ್ತಾರೆ.
ಇದನ್ನು ಓದಿ- ಮೂವರಿಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ 2020 ಘೋಷಣೆ
ಮಿಲ್ಕಿ ವೆ ಗ್ಯಾಲಕ್ಸಿ ಏನು?
ಮಿಲ್ಕಿ ವೆ ಗ್ಯಾಲಕ್ಸಿ ಒಂದು ರೀತಿಯ ಸುರುಳಿಯಾಕಾರದ ನಕ್ಷತ್ರಪುಂಜವಾಗಿದೆ. ಇದರೊಳಗೆ ನಮ್ಮ ಸೌರವ್ಯೂಹವಿದೆ. ರಾತ್ರಿಯಲ್ಲಿ ನಾವು ಆಕಾಶವನ್ನು ನೋಡುತ್ತಿರುವಾಗ ನಾವು ಪ್ರಕಾಶಮಾನವಾದ ಬಿಳಿ ಬೆಳಕನ್ನು ನೋಡುತ್ತೇವೆ. ಗ್ಯಾಲಕ್ಸಿಯಲ್ಲಿ ಇನ್ನೂರು ಶತಕೋಟಿಗಿಂತ ಹೆಚ್ಚು ನಕ್ಷತ್ರಗಳಿವೆ ಎಂದು ಹೇಳಲಾಗುತ್ತದೆ.