ಇತ್ತೀಚಿನ ದಿನಗಳಲ್ಲಿ, ಬಹುತೇಕ ಎಲ್ಲಾ ಮನೆಗಳಲ್ಲಿ ಫ್ರಿಡ್ಜ್ ಇರುತ್ತದೆ. ಕೆಲವೊಮ್ಮೆ ಫ್ರಿಡ್ಜ್ ಸರಿಯಾಗಿ ಕೂಲಿಂಗ್ ಆಗುವುದಿಲ್ಲ. ಇದರಿಂದಾಗಿ ಫ್ರಿಡ್ಜ್‌ನಲ್ಲಿ ಇರಿಸಲಾಗಿರುವ ವಸ್ತುಗಳು ಹಾಳಾಗುತ್ತವೆ. ನೀವೂ ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದರೆ ಇದೊಂದು ಕೆಲಸ ಮಾಡಿಬಿಡಿ. ತಕ್ಷಣದಿಂದಲೇ ಫ್ರಿಜ್ ಮತ್ತೆ ಕೂಲಿಂಗ್ ಆಗಲು ಶುರುವಾಗುತ್ತದೆ.
ಟೆಂಪರೆಚರ್ ಚೆಕ್ ಮಾಡಿ :
ನಿಮ್ಮ ಫ್ರಿಡ್ಜ್ ಸರಿಯಾಗಿ ಕೂಲ್ ಆಗುತ್ತಿಲ್ಲ ಎಂದಾದರೆ ಮೊದಲು ಫ್ರಿಡ್ಜ್‌ನ ತಾಪಮಾನ ಸೆಟ್ಟಿಂಗ್‌ಗಳನ್ನು ಚೆಕ್ ಮಾಡಿ ಅದನ್ನು ಸರಿಯಾಗಿ ಹೊಂದಿಸಬೇಕು. ಫ್ರಿಡ್ಜ್ ಯಾವಾಗಲೂ 4-5 ಡಿಗ್ರಿಗಳಲ್ಲಿ ಕಾರ್ಯನಿರ್ವಹಿಸಬೇಕು. ಹೀಗೆ ಮಾಡುವುದರಿಂದ, ನಿಮ್ಮ ಫ್ರಿಡ್ಜ್ ಸರಿಯಾಗಿ ತಣ್ಣಗಾಗಬಹುದು.
ಇದನ್ನೂ ಓದಿ : WhatsApp Ban: ಇಂತಹ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಬ್ಯಾನ್
ಫ್ರಿಡ್ಜ್ ಡೋರ್ ಸೀಲ್ :
ನಿಮ್ಮ ಫ್ರಿಡ್ಜ್‌ನ ತಾಪಮಾನ ಸರಿಯಾಗಿದ್ದರೆ, ಫ್ರಿಡ್ಜ್ ಡೋರ್ ಸೀಲ್ ಅನ್ನು ಪರಿಶೀಲಿಸಬೇಕು. ಫ್ರಿಡ್ಜ್ ಬಾಗಿಲಿನ ಸೀಲ್ ಸವೆದುಹೋಗಿದ್ದರೆ ಅಥವಾ ಮುರಿದಿದ್ದರೆ, ಅದು ಫ್ರಿಡ್ಜ್ ಸರಿಯಾಗಿ ತಣ್ಣಗಾಗಲು ಬಿಡುವುದಿಲ್ಲ.
ಕಂಡೆನ್ಸರ್ ಕಾಯಿಲ್ :
ರೆಫ್ರಿಜರೇಟರ್ ಸರಿಯಾಗಿ ಕೂಲ್ ಆಗುತ್ತಿಲ್ಲ ಎಂದಾದರೆ, ರೆಫ್ರಿಜರೇಟರ್‌ನ ಕಂಡೆನ್ಸರ್ ಕಾಯಿಲ್ ಅನ್ನು ಸ್ವಚ್ಛಗೊಳಿಸಬಹುದು. ಕಂಡೆನ್ಸರ್ ಕಾಯಿಲ್ ಮೇಲೆ ಕೊಳೆ ಸಂಗ್ರಹವಾಗುವುದರಿಂದ ರೆಫ್ರಿಜರೇಟರ್ ಸರಿಯಾಗಿ ಕೂಲ್ ಆಗುವುದಿಲ್ಲ. ಅದನ್ನು ಮೃದುವಾದ ಬ್ರಷ್ ಅಥವಾ ವ್ಯಾಕ್ಯೂಮ್ ಬಳಸಿ ಸ್ವಚ್ಚಗೊಳಿಸಬೇಕು.
ಇದನ್ನೂ ಓದಿ : ಕುಕ್ಕರ್ ಗ್ಯಾಸ್ಕೆಟ್ ಲೂಸ್ ಆಗಿ ನೀರೆಲ್ಲಾ ಚೆಲ್ಲುತ್ತಿದ್ದರೆ ಈ ಟ್ರಿಕ್ ಬಳಸಿ! ಎರಡೇ ನಿಮಿಷದಲ್ಲಿ ರಬ್ಬರ್ ಟೈಟ್ ಆಗಿ ವಿಸಿಲ್ ಬರುವುದು
(ಸೂಚನೆ : ಈ ಸುದ್ದಿಯನ್ನು ಬರೆಯುವಾಗ ನಾವು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ಜೀ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ. )









