)
ನಾಗಮಣಿಯ ಬಗ್ಗೆ ಅದೆಷ್ಟೋ ಕತೆಗಳನ್ನು ನಾವು ಕೇಳಿರುತ್ತೇವೆ. ನಾಗ ನಾಗಿಣಿ, ನಾಗಮಣಿಗೆ ಸಂಬಂಧಿಸಿದ ಅನೇಕ ಸಿನಿಮಾ, ಧಾರಾವಾಹಿಗಳನ್ನು ಕೂಡಾ ನೋಡಿರುತ್ತೇವೆ. ನಾಗಮಣಿ ಎಂದರೆಅದು ಅತ್ಯಮೂಲ್ಯವಾದ ರತ್ನ ಎಂದೇ ಹೇಳಲಾಗುತ್ತದೆ. ಯಾರ ಬಳಿ ಈ ನಾಗಮಣಿ ಲಭಿಸುತ್ತದೆಯೋ ಅವರಿಗೆ ಅಪಾರ ಪ್ರಮಾಣದ ಸಂಪತ್ತು ಲಭಿಸುತ್ತದೆ ಎಂದು ಹೇಳಲಾಗುತ್ತದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ ಹಾವು ಎಂದರೆ ಅದೊಂದು ಜೀವಿ ಅಲ್ಲ. ನಾಗರ ಹಾವಿನ ಬಗ್ಗೆ ಜನರಲ್ಲಿ ದೈವಿಕ ಭಾವನೆ ಇದೆ. ಹಾವಿನಲ್ಲಿ ದೇವರನ್ನು ಕಾಣುವ ಸಂಪ್ರದಾಯ ನಮ್ಮದು. ನಾಗರ ದೇವಾಲಯಗಳಿವೆ. ನಾಗರ ಪಂಚಮಿ ಬಂತೆಂದರೆ ಹಾವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇನ್ನು ನಾಗದೋಷ, ಸರ್ಪ ದೋಷ ಎನ್ನುವ ಕಾರಣಕ್ಕೆ ವಿವಿಧ ರೀತಿಯ ಪೂಜೆ ಸಲ್ಲಿಸಲಾಗುತ್ತದೆ.
ಪೌರಾಣಿಕ ನಂಬಿಕೆಗಳ ಪ್ರಕಾರ ನಾಗಮಣಿ ನಾಗರಹಾವಿನ ತಲೆಯ ಮೇಲಿರುತ್ತದೆ. ಒಂದು ವೇಳೆ ಯಾರಿಗಾದರೂ ಈ ಮಣಿ ಸಿಕ್ಕಿದರೆ ಅವರ ಭಾಗ್ಯ ಬೆಳಗುತ್ತದೆ ಎನ್ನಲಾಗಿದೆ. ನಾಗಮಣಿಗೆ ಸಂಬಂಧಿಸಿದ ಅನೇಕ ಪೌರಾಣಿಕ ಕತೆಗಳಿವೆ.
ಆದರೆ ವಿಜ್ಞಾನದಲ್ಲಿ ಈ ನಾಗಮಣಿಯ ಬಗ್ಗೆ ಕೇಳಿದರೆ, ಇದೊಂದು ಕೇವಲ ಕಾಲ್ಪನಿಕ ಕತೆ. ನಾಗ ಮಣಿ ಎನ್ನುವುದು ಜನರ ಕಲ್ಪನೆಯೇ ಹೊರತು ಅದರಲ್ಲಿ ಯಾವ ನೈಜತೆಯೂ ಇಲ್ಲ. ಹಾವುಗಳಿಗೆ ಈ ರೀತಿ ರತ್ನಗಳನ್ನು ರೂಪುಸುವ ಶಕ್ತಿ ಇಲ್ಲ. ಅದು ಸಾಧ್ಯವೂ ಇಲ್ಲ. ಇನ್ನು ಹಾವಿನ ತಲೆಯ ಭಾಗದಲ್ಲಿ ಕಂಡು ಬರುವ ಕಲ್ಲುಗಳು ಪಿತ್ತಗಲ್ಲುಗಳೇ ಹೊರತು ನಾಗಮಣಿಯಲ್ಲ. ಹಾವಿನಲ್ಲಿಯೂ ಮನುಷ್ಯರಂತೆ ಪಿತ್ತಗಲ್ಲುಗಳು ರೂಪುಗೊಳ್ಳುತ್ತವೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.