ಈ ರೀತಿ ಮಾಡಿದರೆ ಎಸಿ ಬಳಸಿದರೂ ವಿದ್ಯುತ್ ಬಿಲ್ ಕಡಿಮೆ ಬರುತ್ತದೆ !
Power saving Tips :ಕೆಲವು ಉಪಯುಕ್ತ ಸೆಟ್ಟಿಂಗ್‌ಗಳನ್ನು ಬಳಸುವ ಮೂಲಕ ವಿದ್ಯುತ್ ಬಿಲ್ ಕಡಿಮೆ ಬರುವಂತೆ ಮಾಡಬಹುದು.
Power saving Tips : ಹಲವು ಬಾರಿ ಹವಾನಿಯಂತ್ರಣವು ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಬಳಸುತ್ತದೆ. ಹೀಗಾದಾಗ ಬೇಸಿಗೆಯಲ್ಲಿ ಮನೆಯಲ್ಲಿ 2ರಿಂದ 3 ಹವಾನಿಯಂತ್ರಣಗಳನ್ನು ಬಳಸಿದರೆ, ವಿದ್ಯುತ್ ಬಿಲ್ ಕೂಡಾ ಅತಿ ಹೆಚ್ಚು ಬರುತ್ತದೆ. ಇದನ್ನು ತಪ್ಪಿಸಬೇಕಾದರೆ ಕೆಲವೊಂದು ಸರಳ ವಿಧಾನಗಳನ್ನು ಅನುಸರಿ ಸಬಹುದು. ಈ ವಿಧಾನಗಳನ್ನು ಅನುಸರಿಸಿದರೆ ಎಷ್ಟೇ ಎಸಿ ಬಳಸಿದರೂ ವಿದ್ಯುತ್ ಬಿಲ್ ಹೆಚ್ಚು ಬರುವುದಿಲ್ಲ. ಹಾಗಾಗಿ ಕೆಲವು ಉಪಯುಕ್ತ ಸೆಟ್ಟಿಂಗ್‌ಗಳನ್ನು ಬಳಸುವ ಮೂಲಕ ವಿದ್ಯುತ್ ಬಿಲ್ ಕಡಿಮೆ ಬರುವಂತೆ ಮಾಡಬಹುದು.
ನೀವು ಹವಾನಿಯಂತ್ರಣವನ್ನು ನಿರಂತರವಾಗಿ ಬಳಸುತ್ತಿದ್ದರೆ, ತಾಪಮಾನವನ್ನು 24 ° C ನಿಂದ 26 ° C ವರೆಗೆ ಹೊಂದಿಸಿಕೊಳ್ಳಿ. ಹೀಗೆ ಮಾಡುವುದರಿಂದ ವಿದ್ಯುತ್ ಬಳಕೆ ಕೂಡಾ ಕಡಿಮೆ ಮಾಡಬಹುದು. ಪ್ರತಿ 1 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಡಿಮೆ ಮಾಡುವ ಮೂಲಕ, ವಿದ್ಯುತ್ ಬಳಕೆಯನ್ನು 6% ರಷ್ಟು ಹೆಚ್ಚಿಸಬಹುದು ಎಂದು ಹೇಳಬಹುದು.
ಇದನ್ನೂ ಓದಿ :Smartphone Charging Mistakes: ಚಾರ್ಜಿಂಗ್ ವೇಳೆ ಈ ತಪ್ಪುಗಳಿಂದ ಬಾಂಬ್‌ನಂತೆ ಸ್ಫೋಟಗೊಳ್ಳುತ್ತೆ ಫೋನ್
ಏರ್ ಫಿಲ್ಟರ್ ಅನ್ನು ನಿಯಮಿತವಾಗಿ ಸ್ವಚ್ಛವಾಗಿರಿಸಿದರೆ, ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬಹುದು. ಡರ್ಟಿ ಫಿಲ್ಟರ್‌ಗಳು ಗಾಳಿಯ ಹರಿವನ್ನು ಕಡಿಮೆ ಮಾಡುತ್ತದೆ ಮಾತ್ರವಲ್ಲ ವಿದ್ಯುತ್ ಬಳಕೆಯನ್ನು ಕೂಡಾ ಹೆಚ್ಚಿಸುತ್ತದೆ.
ರಾತ್ರಿಯಲ್ಲಿ ಸ್ಲೀಪ್ ಮೋಡ್ ಅನ್ನು ಬಳಸಿದರೆ ತಾಪಮಾನವನ್ನು ಹೆಚ್ಚಿಸುತ್ತದೆ ಮತ್ತು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುತ್ತದೆ.ಹೀಗೆ ಮಾಡಿದರೆ ವಿದ್ಯುತ್ ಬಳಕೆ ಕಡಿಮೆ ಇರುತ್ತದೆ.
ನೀವು ಏರ್ ಕಂಡಿಷನರ್ ಅನ್ನು ಹೆಚ್ಚಿನ ಫ್ಯಾನ್ ವೇಗದಲ್ಲಿ ಇರಿಸಿದರೆ, ಹೆಚ್ಚಿನ ವಿದ್ಯುತ್ ಬಳಕೆಯಾಗುತ್ತದೆ. ಹೀಗಾಗಿ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ನೀವು ಫ್ಯಾನ್ ವೇಗವನ್ನು ನಿಧಾನಗೊಳಿಸಬೇಕು.
ಇದನ್ನೂ ಓದಿ : ಮಲಗುವಾಗ ನೀವು ಕೂಡಾ ತಲೆಯ ಬಳಿಯೇ ಮೊಬೈಲ್ ಇಟ್ಟು ಕೊಳ್ಳುತ್ತೀರಾ? ಆ ತಪ್ಪು ಮಾಡಲೇ ಬೇಡಿ !
ನೀವು ಕೋಣೆಯಲ್ಲಿ ಇಲ್ಲದಿರುವಾಗ ಎಸಿ ಆಫ್ ಮಾಡಿ ಅಥವಾ ಟೈಮರ್ ಬಳಸಿ.ಈ ರೀತಿಯಾಗಿ ಕನಿಷ್ಟ ಶಕ್ತಿಯ ಬಳಕೆಯನ್ನು ಇರಿಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ