Samsung Galaxy S24 Ultra 5G: ನೀವು ರಿಯಾಯಿತಿ ಕೊಡುಗೆ ನೋಡಿ Samsung Galaxy S23 Ultra 5G ಖರೀದಿಸಲು ಯೋಜಿಸುತ್ತಿದ್ದರೆ ಸ್ವಲ್ಪ ಕಾಯಿರಿ. Galaxy S23 Ultra 5G ಖಂಡಿತ ಪ್ರೀಮಿಯಂ ಫೋನ್ ಆಗಿದೆ. ಆದರೆ ಈ ಸಮಯದಲ್ಲಿ ಅದನ್ನು ಖರೀದಿಸುವುದು ನಿಮಗೆ ನಷ್ಟವಾಗುತ್ತದೆ. ಈ ಸ್ಮಾರ್ಟ್‌ಫೋನ್ ಇದೀಗ ಹಳೆಯದಾಗಿದ್ದು, ಇದಕ್ಕಿಂತ ಕಡಿಮೆ ಬೆಲೆಗೆ ನೀವು ಇತ್ತೀಚಿನ Samsung Galaxy S24 Ultra 5G ಪಡೆಯಬಹುದು.
ಕಂಪನಿಯು 2024ರಲ್ಲಿಯೇ Samsung Galaxy S24 Ultra 5Gಯನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ನೀವು Galaxy S23 Ultra 5Gಗಿಂತ ಹೆಚ್ಚು ಸುಧಾರಿತ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. ನೀವು ವಿಭಾಗದಲ್ಲಿ ಉನ್ನತ ದರ್ಜೆಯ ಕಾರ್ಯಕ್ಷಮತೆ ಪಡೆಯುವ ಸ್ಮಾರ್ಟ್‌ಫೋನ್ ಬಯಸಿದರೆ Galaxy S24 Ultra 5G ಖರೀದಿಸಬಹುದು.
ಇದನ್ನೂ ಓದಿ: EPFO: ನಿಮ್ಮ UAN ಸಂಖ್ಯೆಯನ್ನು ಮರೆತಿದ್ದೀರಾ? ಅದನ್ನು ಸುಲಭವಾಗಿ ಪಡೆಯುವ ಮಾರ್ಗ ಇಲ್ಲಿದೆ..!
ಅಮೆಜಾನ್ ಭರ್ಜರಿ ಆಫರ್!
ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್ ತನ್ನ ಲಕ್ಷಾಂತರ ಗ್ರಾಹಕರಿಗೆ ದೊಡ್ಡ ಉಡುಗೊರೆ ನೀಡಿದೆ. Samsung Galaxy S24 Ultra 5Gನಲ್ಲಿ ಲಭ್ಯವಿರುವ ಆಫರ್‌ಗಳಲ್ಲಿ ಕಂಪನಿಯು ದೊಡ್ಡ ಬದಲಾವಣೆ ಮಾಡಿದೆ. ಕೆಲವು ದಿನಗಳ ಹಿಂದಿನವರೆಗೂ ಕಂಪನಿಯು ಈ ಫೋನ್‌ನಲ್ಲಿ 22,800 ರೂ.ಗಳ ವಿನಿಮಯ ಕೊಡುಗೆ ನೀಡುತ್ತಿತ್ತು. ಆದರೆ ಈಗ ಅದನ್ನು ಹೆಚ್ಚಿಸಲಾಗಿದೆ. ಹೊಸ ಎಕ್ಸ್‌ಚೇಂಜ್ ಆಫರ್‌ನ ಲಾಭವನ್ನು ಪಡೆದುಕೊಳ್ಳುವ ಮೂಲಕ ನೀವು 1.5 ಲಕ್ಷ ರೂ. ಮೌಲ್ಯದ ಈ ಫೋನ್ ಅನ್ನ ಕೇವಲ 40 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.
Samsung Galaxy S24 Ultra 5G ಬೆಲೆ ಕುಸಿತ
ಸದ್ಯ Samsung Galaxy S24 Ultra 5G ಪ್ರೀಮಿಯಂ ಸ್ಮಾರ್ಟ್‌ಫೋನ್‌ಅನ್ನ ಅಮೆಜಾನ್‌ನಲ್ಲಿ 1,34,999 ರೂ.ಗೆ ಪಟ್ಟಿ ಮಾಡಲಾಗಿದೆ. ಪ್ರಸ್ತುತ ಈ ಸ್ಮಾರ್ಟ್‌ಫೋನ್ ಮೇಲೆ 32%ರಷ್ಟು ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಫ್ಲಾಟ್ ರಿಯಾಯಿತಿ ಕೊಡುಗೆಯ ನಂತರ ವೆಬ್‌ಸೈಟ್‌ನಲ್ಲಿ ಇದರ ಬೆಲೆ 91,729 ರೂ. ಆಗುತ್ತದೆ. ಅಮೆಜಾನ್ ತನ್ನ ಗ್ರಾಹಕರಿಗೆ 4,500 ರೂ.ಗಿಂತ ಹೆಚ್ಚಿನ ಕ್ಯಾಶ್‌ಬ್ಯಾಕ್ ಸಹ ನೀಡುತ್ತಿದೆ. ನೀವು ಈ ಕೊಡುಗೆಯನ್ನು ಪಡೆದುಕೊಂಡರೆ ಅದನ್ನ ಇನ್ನಷ್ಟು ಕಡಿಮೆ ಬೆಲೆಗೆ ಖರೀದಿಸಬಹುದು.
ಈಗ ಅಮೆಜಾನ್‌ನ ಇತ್ತೀಚಿನ ವಿನಿಮಯ ಕೊಡುಗೆಯ ಬಗ್ಗೆ ತಿಳಿದುಕೊಳ್ಳೋಣ. ಈ ಪ್ರೀಮಿಯಂ ಸ್ಮಾರ್ಟ್‌ಫೋನ್ ಮೇಲೆ ಅಮೆಜಾನ್ ಈಗ ಗ್ರಾಹಕರಿಗೆ 52,200 ರೂ.ಗಳ ವಿನಿಮಯ ಕೊಡುಗೆ ನೀಡುತ್ತಿದೆ. ನೀವು ನಿಮ್ಮ ಹಳೆಯ ಫೋನ್‌ಅನ್ನ ವಿನಿಮಯ ಮಾಡಿಕೊಂಡು ಆಫರ್‌ನ ಸಂಪೂರ್ಣ ಲಾಭ ಪಡೆದರೆ, Samsung Galaxy S24 Ultra 5G ಅನ್ನ ಕೇವಲ 39,529 ರೂ.ಗೆ ಖರೀದಿಸಬಹುದು. ಆದರೆ ಅಮೆಜಾನ್ ಹಳೆಯ ಫೋನಿನ ಸ್ಥಿತಿಯ ಆಧಾರದ ಮೇಲೆ ಮಾತ್ರ ವಿನಿಮಯ ಮೌಲ್ಯವನ್ನು ನೀಡುತ್ತದೆ.
Samsung Galaxy S24 Ultra 5G ವಿಶೇಷಣಗಳು
* Samsung Galaxy S24 Ultra 5G ಟೈಟಾನಿಯಂ ಫ್ರೇಮ್ ಹೊಂದಿದ್ದು, ಇದರ ಹಿಂಭಾಗದಲ್ಲಿ ಗಾಜಿನ ಫಲಕವಿದೆ.
* ಈ ಸ್ಮಾರ್ಟ್‌ಫೋನ್ 6.8-ಇಂಚಿನ ಡೈನಾಮಿಕ್ LTPO AMOLED ಪ್ಯಾನೆಲ್ ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್ ಹೊಂದಿದೆ.
* ಡಿಸ್ಪ್ಲೇಯನ್ನು ರಕ್ಷಿಸಲು ಕಾರ್ನಿಂಗ್ ಗೊರಿಲ್ಲಾ ಆರ್ಮರ್ ಒದಗಿಸಲಾಗಿದೆ.
* ಹೆಚ್ಚಿನ ಕಾರ್ಯಕ್ಷಮತೆಗಾಗಿ ಇದು ಸ್ನಾಪ್‌ಡ್ರಾಗನ್ 8 Gen 3 ಪ್ರೊಸೆಸರ್ ಹೊಂದಿದೆ.
* ಸ್ಯಾಮ್‌ಸಂಗ್ ಈ ಸ್ಮಾರ್ಟ್‌ಫೋನ್‌ನಲ್ಲಿ 12GBವರೆಗೆ RAM ಮತ್ತು 1TBವರೆಗೆ ಸ್ಟೋರೇಜ್ ಒದಗಿಸಿದೆ.
* ಛಾಯಾಗ್ರಹಣಕ್ಕಾಗಿ ಇದು 200+10+50+12 ಮೆಗಾಪಿಕ್ಸೆಲ್‌ಗಳ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ.
* ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 12MP ಕ್ಯಾಮೆರಾವನ್ನು ಹೊಂದಿದೆ.
* Samsung Galaxy S24 Ultraಗೆ ಶಕ್ತಿ ತುಂಬಲು 5000mAh ಬ್ಯಾಟರಿ ಒದಗಿಸಲಾಗಿದ್ದು, ಇದು 45W ವೇಗದ ಚಾರ್ಜಿಂಗ್ ಅನ್ನ ಬೆಂಬಲಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









