ಬೇಸಿಗೆಯಲ್ಲಿ ಕರೆಂಟ್ ಬಿಲ್ ಜಾಸ್ತಿ ಬರ್ತಿದ್ಯಾ? ಚಿಂತೆಬಿಡಿ, ಈ ಟಿಪ್ಸ್ ಅನುಸರಿಸಿ ಮುಂದಿನ ತಿಂಗಳಿಂದಲೇ ವಿದ್ಯುತ್ ವೆಚ್ಚ ಕಡಿಮೆಯಾಗುತ್ತೆ..!

Electricity Bill: ಬೇಸಿಗೆಯಲ್ಲಿ ಫ್ಯಾನ್, ಕೂಲರ್, ಎಸಿ ಬಳಕೆಯಿಂದ ವಿದ್ಯುತ್ ಬಿಲ್ ಹೆಚ್ಚಿಗೆ ಬರುತ್ತೆ ಎಂದು ಜನ ನಂಬುತ್ತಾರೆ. ಆದರೆ, ಮನೆಯಲ್ಲಿ ಮಾಡುವ ಕೆಲವು ಸಣ್ಣ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ವ್ಯಯವಾಗುವುದರ ಜೊತೆಗೆ ಕರೆಂಟ್ ಬಿಲ್ ಸಹ ಹೆಚ್ಚು ಬರುತ್ತೆ. 

Written by - Yashaswini V | Last Updated : Apr 3, 2025, 11:31 AM IST
  • ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿರುತ್ತದೆ.
  • ಆದರೂ, ಇದಕ್ಕಾಗಿ ಹಲವು ನಿಯಮಗಳನ್ನು ಅನ್ವಯಿಸಲಾಗಿದೆ.
  • ಇನ್ನೂ ಬೇಸಿಗೆ ಕಾಲದಲ್ಲಿ ಬೇರೆ ಋತುಗಳಿಗಿಂತ ವಿದ್ಯುತ್ ಬಿಲ್ ಹೆಚ್ಚಾಗಿಯೇ ಬರುವುದರಿಂದ ವಿದ್ಯುತ್ ಶುಲ್ಕ ಹೆಚ್ಚಳವು ಜನರ ಜೇಬಿನ ಮೇಲೆ ನೇರ ಪರಿಣಾಮ ಉಂಟುಮಾಡುತ್ತದೆ.
ಬೇಸಿಗೆಯಲ್ಲಿ ಕರೆಂಟ್ ಬಿಲ್ ಜಾಸ್ತಿ ಬರ್ತಿದ್ಯಾ? ಚಿಂತೆಬಿಡಿ, ಈ ಟಿಪ್ಸ್ ಅನುಸರಿಸಿ ಮುಂದಿನ ತಿಂಗಳಿಂದಲೇ ವಿದ್ಯುತ್ ವೆಚ್ಚ ಕಡಿಮೆಯಾಗುತ್ತೆ..!

Electricity Bill Saving Tips: ರಾಜ್ಯದಲ್ಲೀಗ ಬೆಲೆ ಏರಿಕೆಯದ್ದೇ ಸದ್ದು... ಕರ್ನಾಟಕದ ಜನತೆಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದ ಸಿಎಂ ಸಿದ್ದರಾಮಯ್ಯ ಸರ್ಕಾರ ಇದೀಗ ಕೆಲವು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು ಜನಸಾಮಾನ್ಯರ ಬೇಸರಕ್ಕೆ ಕಾರಣವಾಗಿದೆ. ಹಾಲು-ಮೊಸರಿನ ದರ ಮಾತ್ರವಲ್ಲದೆ ಬಸ್ ದರ, ಮೆಟ್ರೋ ದರ ಏರಿಕೆಯಿಂದಾಗಿ ನಿತ್ಯ ಜೀವನ ನಡೆಸುವುದು ಹೇಗಪ್ಪಾ ಎಂಬ ಸ್ಥಿತಿ ಜನಸಾಮಾನ್ಯರದ್ದಾಗಿದೆ. ಏತನ್ಮಧ್ಯೆ, ವಿದ್ಯುತ್ ಶುಲ್ಕ ಹೆಚ್ಚಳವು ಗಾಯದ ಮೇಲೆ ಬರೆ ಎಳೆದಂತಾಗಿದೆ. 

Add Zee News as a Preferred Source

ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿರುತ್ತದೆ. ಆದರೂ, ಇದಕ್ಕಾಗಿ ಹಲವು ನಿಯಮಗಳನ್ನು ಅನ್ವಯಿಸಲಾಗಿದೆ. ಇನ್ನೂ ಬೇಸಿಗೆ ಕಾಲದಲ್ಲಿ ಬೇರೆ ಋತುಗಳಿಗಿಂತ ವಿದ್ಯುತ್ ಬಿಲ್ ಹೆಚ್ಚಾಗಿಯೇ ಬರುವುದರಿಂದ ವಿದ್ಯುತ್ ಶುಲ್ಕ ಹೆಚ್ಚಳವು ಜನರ ಜೇಬಿನ ಮೇಲೆ ನೇರ ಪರಿಣಾಮ ಉಂಟುಮಾಡುತ್ತದೆ.

ವಾಸ್ತವವಾಗಿ, ಬೇಸಿಗೆಯಲ್ಲಿ ಫ್ಯಾನ್, ಕೂಲರ್, ಎಸಿ ಬಳಕೆಯಿಂದ ವಿದ್ಯುತ್ ಬಿಲ್ ಹೆಚ್ಚಿಗೆ ಬರುತ್ತೆ ಎಂದು ಜನ ನಂಬುತ್ತಾರೆ. ಆದರೆ, ಮನೆಯಲ್ಲಿ ಮಾಡುವ ಕೆಲವು ಸಣ್ಣ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ವ್ಯಯವಾಗುವುದರ ಜೊತೆಗೆ ಕರೆಂಟ್ ಬಿಲ್ ಸಹ ಹೆಚ್ಚು ಬರುತ್ತೆ. ಆದರೆ, ಕೆಲವು ಸಿಂಪಲ್ ಸಲಹೆಗಳನ್ನು ಮೈಗೂಡಿಸಿಕೊಂಡರೆ ಮುಂದಿನ ತಿಂಗಳಿನಿಂದಲೇ ನಿಮ್ಮ ಮನೆಯ ವಿದ್ಯುತ್ ಬಿಲ್ ಕಡಿಮೆ ಬರುತ್ತದೆ. 

ಇದನ್ನೂ ಓದಿ- WhatsApp Account Ban: ಭಾರತದಲ್ಲಿ ಬರೋಬ್ಬರಿ 9.7ಮಿಲಿಯನ್ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್...

ವಿದ್ಯುತ್ ಬಿಲ್ ಉಳಿತಾಯಕ್ಕಾಗಿ ಸಿಂಪಲ್ ಟ್ರಿಕ್ಸ್: 
* ರೆಫ್ರಿಜರೇಟರ್ ನಿರ್ವಹಣೆ: 

ಮನೆಯಲ್ಲಿ ಫ್ರಿಡ್ಜ್/ರೆಫ್ರಿಜರೇಟರ್ ದಿನ 24ಗಂಟೆಯೂ ಕಾರ್ಯನಿರ್ವಹಿಸುತ್ತದೆ. ವಸ್ತುಗಳನ್ನು ಹಾಳಾಗದಂತೆ ಇಡಲು ಸಹಕಾರಿಯಾಗಿರುವ ರೆಫ್ರಿಜರೇಟರ್‌ ಒಳಗೆ ಕೂಲಿಂಗ್ ಮಾಡಲು ಹಿಂಭಾಗದಿಂದ ಬಿಸಿ ಗಾಳಿಯನ್ನು ಹೊರ ಸೂಸುತ್ತದೆ. ಆದರೆ, ಇದನ್ನು ಗೋಡೆಗೆ ಅಂಟಿಸಿದಂತೆ ಇಟ್ಟಾಗ ಫ್ರಿಡ್ಜ್ ನ ಕೂಲಿಂಗ್ ದಕ್ಷತೆ ಕಡಿಮೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಹೆಚ್ಚಿನ ವಿದ್ಯುತ್ ಬಳಸುವುದರಿಂದ ಕರೆಂಟ್ ಬಿಲ್ ಹೆಚ್ಚಾಗಿ ಬರುತ್ತದೆ. ಇದನ್ನು ತಪ್ಪಿಸಲು, ಮನೆಯಲ್ಲಿ ಫ್ರಿಡ್ಜ್ ಇಡುವಾಗ ಗೋಡೆ ಹಾಗೂ ಫ್ರಿಡ್ಜ್ ನಡುವೆ ಅಂತರವಿರುವಂತೆ ನಿಗಾವಹಿಸಿ. 

* ಅನಗತ್ಯವಾಗಿ ಲೈಟ್ ಬಳಕೆ: 
ಮನೆ ಕತ್ತಲಿರಬಾರದು ಎಂಬ ಕಾರಣಕ್ಕೆ ಅಥವಾ ಎಲ್ಲೆಡೆ ಬೆಳಕು ಇರಲಿ ಎಂಬ ಕಾರಣದಿಂದ ಹಲವು ಮನೆಗಳಲ್ಲಿ ಸದಾ ಜೀರೋ ವ್ಯಾಟ್ ಇಲ್ಲವೇ 5ವ್ಯಾಟ್ ಬಲ್ಬ್ ಬಳಸುತ್ತಾರೆ. ಒಂದು ಮನೆಯಲ್ಲಿ ಈ ರೀತಿಯ ಕನಿಷ್ಠ 5 ಬಲ್ಬ್ ಬಳಸಿದರೂ ಗಂಟೆ 25 ವ್ಯಾಟ್‌ ವಿದ್ಯುತ್ ವ್ಯರ್ಥವಾಗುತ್ತದೆ. ನೀವು ಮನೆಯಲ್ಲಿ ಸದಾ ಬೆಳಕಿರಬೇಕು ಎಂದು ಬಯಸಿದರೆ ನೈಸರ್ಗಿಕವಾಗಿ ಬೆಳಕು ಲಭ್ಯವಿಲ್ಲದಿದ್ದರೆ ಎಲ್ಇಡಿ ಬಲ್ಬ್ ಗಳನ್ನು ಬಳಸಿ. ಇವು ಕಡಿಮೆ ಪವರ್ ಬಳಸುವುದರಿಂದ ವಿದ್ಯುತ್ ಬಿಲ್ ಸಹ ಕಡಿಮೆ ಬರುತ್ತದೆ. 

* ಟಿವಿ: 
ಬಹುತೇಕ ಜನರು ಟಿವಿ ನೋಡಿದ ಬಳಿಕ ಜಸ್ಟ್ ರಿಮೋಟ್ ನಲ್ಲಿ ಟಿವಿ ಆರಿಸಿ ಪ್ಲಾಗ್ ಆಫ್ ಮಾಡುವುದನ್ನು ಬರೆಯುತ್ತಾರೆ. ಹೀಗಿರುವಾಗ ಟಿವಿ ಊಫ್ ಆಗಿದ್ದರೂ ಆಂತರಿಕವಾಗಿ ಸಕ್ರಿಯವಾಗಿರುತ್ತದೆ. ಇದು ಅನಗತ್ಯ ವಿದ್ಯುತ್ ಬಳಕೆಯಾಗಿ ಕರೆಂಟ್ ಬಿಲ್ ಸಹ ಅಧಿಕವಾಗಿಯೇ ಬ್ವರುತ್ತದೆ. ಇದನ್ನು ತಪ್ಪಿಸಲು ಟಿವಿ ಆಫ್ ಮಾಡಿದಾಗ ಮರೆಯದೇ ಅದರ ಸ್ವಿಚ್ ಸಹ ಆಫ್ ಮಾಡಿ. ಒಂದೊಮ್ಮೆ ನೀವು ಸ್ಮಾರ್ಟ್ ಟಿವಿ ಬಳಸುತ್ತಿದ್ದರೆ ಇಕೋ ಮೂಡ್ ಬಳಸಿ. ಇದು ಕಡಿಮೆ ವಿದ್ಯುತ್ ಬಳಸುತ್ತದೆ.

* ಮೊಬೈಲ್ ಚಾರ್ಜಿಂಗ್: 
ಟಿವಿಯಂತೆಯೇ ಮೊಬೈಲ್ ಚಾರ್ಜ್ ಮಾಡಿದ ನಂತರವೂ ಚಾರ್ಜರ್ ಪ್ಲಗ್ ಇನ್ ಆಗಿಯೇ ಇರುತ್ತದೆ. ಜೊತೆಗೆ ಸ್ವಿಚ್ ಆಫ್ ಸಹ ಆಗಿರುವುದಿಲ್ಲ. ಇದೂ ಕೂಡ ವಿದ್ಯುತ್ ವ್ಯರ್ಥಕ್ಕೆ ಹಾಗೂ ವಿದ್ಯುತ್ ಬಿಲ್ ಹೆಚ್ಚುಬರಲು ಕಾರಣವಾಗಿದೆ. ಇದನ್ನು ತಪ್ಪಿಸಲು ಚಾರ್ಜ್ ಮಾಡಿದ ಕೂಡಲೇ ಮೊಬೈಲ್ ಚಾರ್ಜರ್ ತೆಗೆದಿಡಿ. 

ಇದನ್ನೂ ಓದಿ- ಕೇವಲ 75ರೂ.ಗೆ ಸೂಪರ್ ರಿಚಾರ್ಜ್ ಆಫರ್ ಬಿಡುಗಡೆ ಮಾಡಿದ Jio: ಅನ್ಲಿಮಿಟೆಡ್ ಕಾಲ್, ಎಸ್ಎಂಎಸ್, ಡೇಟಾ ಎಲ್ಲವೂ ಲಭ್ಯ

* ಎಸಿ ಬಳಕೆ: 
ಎಸಿಯನ್ನು ಸರಿಯಾದ ರೀತಿಯಲ್ಲಿ ಬಳಸಿದರೂ ಸಹ ವಿದ್ಯುತ್ ಬಿಲ್ ಬಹುಮಟ್ಟಿಗೆ ಕಡಿಮೆಯಾಗುತ್ತದೆ. ಬೆಂಗಳೂರಿನಂತಹ ವಾತಾವಾರಣ ಇರುವಲ್ಲಿ ಎಸಿಯ ತಾಮಮಾನವನ್ನು24-26°C ಗೆ  ಹೊಂದಿಸಿ. ಸೀಲಿಂಗ್ ಫ್ಯಾನ್ ಇರುವ ಎಸಿ ಬಳಸಿದರೆ ಇದು ರೂಮಿನ ತುಂಬಾ ವೇಗವಾಗಿ ತಂಪನ್ನು ಹರಡುತ್ತದೆ. ಜೊತೆಗೆ ಒಂದೆರಡು ವಾರಕ್ಕೊಮ್ಮೆ ಫಿಲ್ಟರ್ ಸ್ವಚ್ಛಗೊಳಿಸಿ. ಕನಿಷ್ಠ ಮೂರ್ನಾಲ್ಕು ತಿಂಗಳಿಗೊಮ್ಮೆ ಎಸಿ ಸರ್ವಿಸ್ ಮಾಡಿಸಿ. ಇದರಿಂದ ಎಸಿ ಹೆಚ್ಚು ವಿದ್ಯುತ್ ಬಳಸುವುದನ್ನು ತಪ್ಪಿಸಬಹುದು. ವಿದ್ಯುತ್ ಬಿಲ್ ಕೂಡ ಕಡಿಮೆ ಬರುತ್ತದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News