)
ಇತ್ತೀಚೆಗೆ, ನೇಪಾಳವು 26 ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನಿಷೇಧ ಹೇರಿದೆ. ಇದರಲ್ಲಿ ಯೂಟ್ಯೂಬ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಮತ್ತು ಎಕ್ಸ್ನಂತಹ 26 ಅಪ್ಲಿಕೇಶನ್ಗಳು ಸೇರಿವೆ. ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಷೇಧಿಸಿದ ನಂತರ, ನೇಪಾಳದ ಜನರ ಕೋಪ ಭುಗಿಲೆದ್ದಿತು. ನೇಪಾಳ ಸರ್ಕಾರದ ಈ ನಿರ್ಧಾರದ ವಿರುದ್ಧ ಜನರು ಪ್ರತಿಭಟಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಟರ್ಕಿ ಕೂಡಾ ಇದೇ ರೀತಿಯ ಕ್ರಮ ಕೈಗೊಂಡಿದೆ. ಇಸ್ತಾನ್ಬುಲ್ನಲ್ಲಿ ಪೊಲೀಸರು ಮತ್ತು ವಿರೋಧ ಪಕ್ಷದ ಬೆಂಬಲಿಗರ ನಡುವಿನ ಘರ್ಷಣೆಯ ನಂತರ, ಟರ್ಕಿ ಸರ್ಕಾರವು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಟರ್ಕಿ ಸರ್ಕಾರವು ಯೂಟ್ಯೂಬ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಮತ್ತು ಎಕ್ಸ್ನಂತಹ ಪ್ರಮುಖ ಸೈಟ್ ಗಳಿಗೆ ಪ್ರವೇಶವನ್ನು ಸ್ಥಗಿತಗೊಳಿಸಿದೆ.
ಇಂಟರ್ನೆಟ್ ಸೇವೆ 12 ಗಂಟೆಗಳ ಕಾಲ ಸ್ಥಗಿತ :
ವರದಿಯ ಪ್ರಕಾರ, ಟರ್ಕಿಯಲ್ಲಿ ಅನೇಕ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ದೇಶಾದ್ಯಂತ ಇಂಟರ್ನೆಟ್ ಅನ್ನು ನಿರ್ಬಂಧಿಸಲಾಗಿದೆ. ರಿಪಬ್ಲಿಕನ್ ಪೀಪಲ್ಸ್ ಪಾರ್ಟಿ (CHP) ಯ ಪ್ರಧಾನ ಕಚೇರಿಯಲ್ಲಿ ಸರ್ಕಾರವು ಟ್ರಸ್ಟಿಯನ್ನು ನೇಮಿಸಿದೆ. ಸರ್ಕಾರದ ವಿರುದ್ಧದ ಪ್ರತಿಭಟನೆಯ ನಂತರ ಈ ನಿಷೇಧ ಹೇರಲಾಗಿದೆ. ಪ್ರತಿಭಟನಾಕಾರರನ್ನು ಅಲ್ಲಿಂದ ತೆಗೆದುಹಾಕಲು ಭದ್ರತಾ ಪಡೆಗಳು ಪೆಪ್ಪರ್ ಸ್ಪ್ರೇ ಬಳಸಿದವು. ನಂತರ, ಸರ್ಕಾರ ಈ ನಿರ್ಬಂಧಗಳನ್ನು ವಿಧಿಸಿತು. ಈ ನಿಷೇಧವನ್ನು ತಪ್ಪಿಸಲು ಅನೇಕ ಜನರು VPN ಅನ್ನು ಬಳಸುತ್ತಿದ್ದಾರೆ.
ಇದನ್ನೂ ಓದಿ: ನಭೋ ಮಂಡಲದಲ್ಲಿ ಅಪರೂಪದ ಚಮತ್ಕಾರ
ಇದರ ಹಿಂದಿನ ಕಾರಣವೇನು? :
ಇಸ್ತಾನ್ಬುಲ್ ಪ್ರಧಾನ ಕಚೇರಿಯನ್ನು ಪಕ್ಷದ ಬೆಂಬಲಿಗರು ಸುತ್ತುವರೆದಿದ್ದಾರೆ. ಈ ಕಾರಣಕ್ಕಾಗಿ, ಟರ್ಕಿಯಲ್ಲಿ ಸಾಮಾಜಿಕ ಮಾಧ್ಯಮ ಸೈಟ್ಗಳಿಗೆ ಪ್ರವೇಶವನ್ನು ನಿಷೇಧಿಸಲಾಯಿತು. ಸರ್ಕಾರ ನೇಮಿಸಿದ ಟ್ರಸ್ಟಿ ಗುರ್ಸಲ್ ಟೆಕಿನ್ ಪ್ರಾಂತೀಯ ಆಡಳಿತದ ಮೇಲೆ ಹಿಡಿತ ಸಾಧಿಸುವುದನ್ನು ತಡೆಯಲು ಪಕ್ಷದ ಬೆಂಬಲಿಗರು ಬಯಸಿದ್ದರು. ಇತ್ತೀಚೆಗೆ, ನೇಪಾಳದಲ್ಲಿಯೂ ಇದೇ ರೀತಿಯ ಘಟನೆ ನಡೆದಿದೆ. ಇದರಲ್ಲಿ ಸರ್ಕಾರ 26 ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ನಡೆದವು. ಇದರಿಂದಾಗಿ ಕರ್ಫ್ಯೂ ಕೂಡಾ ವಿಧಿಸಬೇಕಾಯಿತು.
ಟರ್ಕಿಯಲ್ಲಿ ನಿಷೇಧದಿಂದಾಗಿ ಜನರು ಅಸಮಾಧಾನ :
ಆ್ಯಪ್ ಅಥವಾ ವೆಬ್ಸೈಟ್ ನಿರ್ಬಂಧಿಸಿದಾಗ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಪ್ರಾಧಿಕಾರ (ಬಿಟಿಕೆ) ಮಾಹಿತಿ ನೀಡುತ್ತದೆ. ಆದರೆ ಈ ಬಾರಿ ಈ ವಿಷಯದ ಬಗ್ಗೆ ಮೌನವನ್ನು ಕಾಯ್ದುಕೊಳ್ಳಲಾಗಿದೆ. ಬಿಟಿಕೆಯ ಅಧಿಕೃತ ವೆಬ್ಸೈಟ್ ಪರಿಶೀಲನಾ ಸಾಧನವು ಸಹ ಯಾವುದೇ ನಿಷೇಧವನ್ನು ತೋರಿಸುತ್ತಿಲ್ಲ. ಆದರೆ ಇದರ ಹೊರತಾಗಿಯೂ, ಇಸ್ತಾನ್ಬುಲ್ನಲ್ಲಿ ಸೋಮವಾರ ಸಂಜೆ 5 ಗಂಟೆಯ ಹೊತ್ತಿಗೆ ಯುಟ್ಯೂಬ್, ಇನ್ಸ್ಟಾಗ್ರಾಮ್, ಎಕ್ಸ್ ಮತ್ತು ವಾಟ್ಸಾಪ್ನಂತಹ ಹಲವು ಪ್ಲಾಟ್ಫಾರ್ಮ್ಗಳಿಗೆ ಅಕ್ಸೆಸ್ ಸಿಗುತ್ತಿಲ್ಲ. ಇದರಿಂದ ಜನರು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಈ ಹಿನ್ನೆಲೆಯಲ್ಲಿ ಇದೀಗ ಟರ್ಕಿಯಲ್ಲಿ ರಾಜಕೀಯ ಕೋಲಾಹಲ ಉಂಟಾಗಿದೆ.