200MP ಕ್ಯಾಮೆರಾ ಹೊಂದಿರುವ 2 ಶಕ್ತಿಶಾಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಹಾನರ್; ಫಸ್ಟ್ ಲುಕ್ ನೋಡಿ

ಈ ಎರಡೂ ಹಾನರ್ ಫೋನ್‌ಗಳು OLED ಡಿಸ್ಪ್ಲೇಯೊಂದಿಗೆ ಬರುತ್ತವೆ, ಇದು 120Hz ಹೆಚ್ಚಿನ ರಿಫ್ರೆಶ್ ರೇಟ್‌ಅನ್ನ ಬೆಂಬಲಿಸುತ್ತದೆ. ಹಾನರ್ 400 6.55-ಇಂಚಿನ ಫ್ಲಾಟ್ ಡಿಸ್ಪ್ಲೇಯನ್ನು ಹೊಂದಿದ್ದು, ಗರಿಷ್ಠ ಹೊಳಪು 5000 ನಿಟ್‌ಗಳವರೆಗೆ ಇರುತ್ತದೆ.

Written by - Puttaraj K Alur | Last Updated : May 23, 2025, 10:35 PM IST
  • ಜಾಗತಿಕವಾಗಿ ಹಾನರ್ 400 & ಹಾನರ್ 400 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆ
  • 200MP ಕ್ಯಾಮೆರಾವನ್ನು ಹೊಂದಿರುವ ಈ ಶಕ್ತಿಶಾಲಿ ಸ್ಮಾರ್ಟ್‌ಫೋನ್‌ಗಳು
  • 5300mAh ಬ್ಯಾಟರಿ ಜೊತೆಗೆ AI ವೈಶಿಷ್ಟ್ಯಗಳನ್ನು ಹೊಂದಿರುವ ಫೋನ್‌
200MP ಕ್ಯಾಮೆರಾ ಹೊಂದಿರುವ 2 ಶಕ್ತಿಶಾಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಹಾನರ್; ಫಸ್ಟ್ ಲುಕ್ ನೋಡಿ

Honor 400 & Honor 400 Pro: ಹಾನರ್ 400 ಮತ್ತು ಹಾನರ್ 400 ಪ್ರೊ ಸ್ಮಾರ್ಟ್‌ಫೋನ್‌ಗಳನ್ನ ಜಾಗತಿಕವಾಗಿ ಬಿಡುಗಡೆ ಮಾಡಲಾಗಿದೆ. ಪ್ಯಾರಿಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಚೀನಾದ ಬ್ರ್ಯಾಂಡ್ 200MP ಕ್ಯಾಮೆರಾ ಹೊಂದಿರುವ ಈ ಶಕ್ತಿಶಾಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಈ ಎರಡೂ ಹಾನರ್ ಫೋನ್‌ಗಳು AI ಸಕ್ರಿಯಗೊಳಿಸಿದ ವೈಶಿಷ್ಟ್ಯಗಳು, OLED ಡಿಸ್ಪ್ಲೇ, 512GB ಸ್ಟೋರೇಜ್‌ನಂತಹ ಶಕ್ತಿಶಾಲಿ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಇದು ಕಂಪನಿಯು ಇಲ್ಲಿಯವರೆಗೆ ಬಿಡುಗಡೆ ಮಾಡಿರುವ ಅತ್ಯಂತ ಅದ್ಭುತವಾದ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದ್ದು, 5300mAh ಕಾರ್ಬನ್ ಸಿಲಿಕಾನ್ ಬ್ಯಾಟರಿಯನ್ನು ಹೊಂದಿದೆ.

Add Zee News as a Preferred Source

ಹಾನರ್ 400 12GB RAM ಜೊತೆಗೆ 256GB ಮತ್ತು 512GB ಎಂಬ ಎರಡು ಸ್ಟೋರೇಜ್‌ ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಆರಂಭಿಕ ಬೆಲೆ 499 ಯುರೋಗಳು ಅಂದರೆ ಸರಿಸುಮಾರು 48,000 ರೂ. ಆಗಿದೆ. ಅದೇ ರೀತಿ ಇದರ ಉನ್ನತ ರೂಪಾಂತರವು 549 ಯುರೋಗಳಿಗೆ ಬರುತ್ತದೆ, ಅಂದರೆ ಸರಿಸುಮಾರು 53,000 ರೂ. ಆಗುತ್ತದೆ. ಹಾನರ್ 400 ಪ್ರೊವನ್ನು 12GB RAM ಮತ್ತು 512GB ಸ್ಟೋರೇಜ್ ಸಾಮರ್ಥ್ಯದ ಒಂದೇ ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಬೆಲೆ 799 ಯುರೋಗಳು ಅಂದರೆ ಸರಿಸುಮಾರು 77,000 ರೂ. ಆಗಿರುತ್ತದೆ. 

ಇದನ್ನೂ ಓದಿ: EPFO ​​New Rules: ಈಗ ಪಿ‌ಎಫ್ ಹಣ ಹಿಂಪಡೆಯಲು ಈ 5 ಷರತ್ತುಗಳನ್ನು ಪೂರೈಸಲೇಬೇಕು!

ಈ ಎರಡೂ ಹಾನರ್ ಫೋನ್‌ಗಳು OLED ಡಿಸ್ಪ್ಲೇಯೊಂದಿಗೆ ಬರುತ್ತವೆ, ಇದು 120Hz ಹೆಚ್ಚಿನ ರಿಫ್ರೆಶ್ ರೇಟ್‌ಅನ್ನ ಬೆಂಬಲಿಸುತ್ತದೆ. ಹಾನರ್ 400 6.55-ಇಂಚಿನ ಫ್ಲಾಟ್ ಡಿಸ್ಪ್ಲೇಯನ್ನು ಹೊಂದಿದ್ದು, ಗರಿಷ್ಠ ಹೊಳಪು 5000 ನಿಟ್‌ಗಳವರೆಗೆ ಇರುತ್ತದೆ. ಅದೇ ರೀತಿ ಹಾನರ್ 400 ಪ್ರೊ 6.7-ಇಂಚಿನ ಬಾಗಿದ OLED ಡಿಸ್ಪ್ಲೇಯನ್ನು ಹೊಂದಿದ್ದು, ಇದರ ಗರಿಷ್ಠ ಹೊಳಪು 5000 ನಿಟ್‌ಗಳವರೆಗೆ ಇರುತ್ತದೆ.

ಹಾನರ್ 400 ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್‌ನೊಂದಿಗೆ ಬರುತ್ತದೆ. ಅದೇ ರೀತಿ 400 ಪ್ರೊನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ನೀಡಲಾಗಿದೆ. ಈ ಎರಡೂ ಫೋನ್‌ಗಳು 12GB RAM ಮತ್ತು 512GB ವರೆಗಿನ ಸ್ಟೋರೇಜ್‌ನೊಂದಿಗೆ ಬರುತ್ತವೆ. ಇವು ಆಂಡ್ರಾಯ್ಡ್ 15 ಆಧಾರಿತ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಇದು 5300mAh ಕಾರ್ಬನ್ ಸಿಲಿಕಾನ್ ಬ್ಯಾಟರಿಯನ್ನು ಹೊಂದಿದೆ. ಹಾನರ್ 400 66W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿರುತ್ತದೆ. ಅದೇ ರೀತಿ 400 ಪ್ರೊ 50W ವೈರ್‌ಲೆಸ್ ಚಾರ್ಜಿಂಗ್ ಜೊತೆಗೆ 100W ವೇಗದ ಚಾರ್ಜಿಂಗ್ ಅನ್ನು ಹೊಂದಿದೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಬೊಂಬಾಟ್‌ ಸುದ್ದಿ... ಗ್ರಾಚ್ಯುಟಿ ಮಿತಿ ಹೆಚ್ಚಿಸಿ ಆದೇಶ ಹೊರಡಿಸಿದ ಕೇಂದ್ರ! ಈ ದಿನದಂದು ನಿಮ್ಮ ಕೈ ಸೇರಲಿದೆ ಇಷ್ಟು ಮೊತ್ತದ ಹಣ

ಹಾನರ್ 400 ಸರಣಿಯ ಈ ಎರಡೂ ಫೋನ್‌ಗಳು 200MP ಮುಖ್ಯ ಕ್ಯಾಮೆರಾದೊಂದಿಗೆ ಬರುತ್ತವೆ, ಇದು OIS ಮತ್ತು EIS ಅನ್ನು ಬೆಂಬಲಿಸುತ್ತದೆ. ಇದಲ್ಲದೆ ಇದು 12MP ಅಲ್ಟ್ರಾ ವೈಡ್ ಕ್ಯಾಮೆರಾವನ್ನು ಹೊಂದಿದೆ. ಪ್ರೊ ಮಾದರಿಯು 50MP ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದ್ದು, ಇದು 3x ಆಪ್ಟಿಕಲ್ ಜೂಮ್ ಅನ್ನು ಬೆಂಬಲಿಸುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಈ ಎರಡೂ ಫೋನ್‌ಗಳು 50MP ಕ್ಯಾಮೆರಾವನ್ನು ಹೊಂದಿದ್ದು, ಇದು 4K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News