ಹೋಟೆಲ್ ಕೋಣೆಯಲ್ಲಿ ಈ ರೀತಿಯ ಬಲ್ಬ್ ಇದ್ದರೆ, ನಿಮ್ಮ ಖಾಸಗಿ ಕ್ಷಣಗಳು ರೆಕಾರ್ಡ್ ಆಗುತ್ತಿದೆ ಎಂದರ್ಥ

How To Find Hidden Camera In Hotel Room: ಹಲವು ಬಾರಿ ಇಂತಹ ಕ್ಯಾಮೆರಾಗಳನ್ನು ಹೋಟೆಲ್‌ಗಳು ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗುತ್ತದೆ. ಇದು ಜನರ ಗೌಪ್ಯತೆಗೆ ಹಾನಿ ಉಂಟು ಮಾಡುತ್ತದೆ.   

Written by - Ranjitha R K | Last Updated : Mar 3, 2025, 03:03 PM IST
  • ತಂತ್ರಜ್ಞಾನವು ದಿನದಿಂದ ದಿನಕ್ಕೆ ಮುಂದುವರಿಯುತ್ತಿದೆ.
  • ಅದರೊಂದಿಗೆ ಅನೇಕ ಹೊಸ ಸಾಧನಗಳು ಸಹ ಮಾರುಕಟ್ಟೆಗೆ ಬರುತ್ತಿವೆ.
  • ಅದರ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ.
ಹೋಟೆಲ್ ಕೋಣೆಯಲ್ಲಿ ಈ ರೀತಿಯ ಬಲ್ಬ್ ಇದ್ದರೆ, ನಿಮ್ಮ ಖಾಸಗಿ ಕ್ಷಣಗಳು ರೆಕಾರ್ಡ್ ಆಗುತ್ತಿದೆ ಎಂದರ್ಥ

How To Find Hidden Camera In Hotel Room : ತಂತ್ರಜ್ಞಾನವು ದಿನದಿಂದ ದಿನಕ್ಕೆ ಮುಂದುವರಿಯುತ್ತಿದೆ. ಅದರೊಂದಿಗೆ ಅನೇಕ ಹೊಸ ಸಾಧನಗಳು ಸಹ ಮಾರುಕಟ್ಟೆಗೆ ಬರುತ್ತಿವೆ. ಆದರೆ ಅದರ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ. ಅಂತಹ ಒಂದು ಸಾಧನವೆಂದರೆ ಸಿಸಿಟಿವಿ ಬಲ್ಬ್, ಇದು ಬೆಳಕನ್ನು ನೀಡುವುದಲ್ಲದೆ ವೀಡಿಯೊವನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಭದ್ರತಾ ಉದ್ದೇಶಗಳಿಗಾಗಿ ರಚಿಸಲಾದ ಈ ಸಾಧನಗಳನ್ನು ದುರುಪಯೋಗಪಡಿಸಿಕೊಳ್ಳುವವರೂ ಇದ್ದಾರೆ.  ಹಲವು ಬಾರಿ ಇಂತಹ ಕ್ಯಾಮೆರಾಗಳನ್ನು ಹೋಟೆಲ್‌ಗಳು ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗುತ್ತದೆ. ಇದು ಜನರ ಗೌಪ್ಯತೆಗೆ ಹಾನಿ ಉಂಟು ಮಾಡುತ್ತದೆ. 

Add Zee News as a Preferred Source

ಇತ್ತೀಚಿನ ದಿನಗಳಲ್ಲಿ ಜನರ ಖಾಸಗಿ ಕ್ಷಣಗಳನ್ನು ದಾಖಲಿಸಿ ದುರುಪಯೋಗಪಡಿಸಿಕೊಂಡಿರುವ ಅನೇಕ ಘಟನೆಗಳು ಬೆಳಕಿಗೆ ಬಂದಿವೆ. ನೀವು ಕೂಡಾ ಹೋಟೆಲ್ ಅಥವಾ ಅಪರಿಚಿತ ಸ್ಥಳದಲ್ಲಿ ತಂಗಿದ್ದರೆ, ಜಾಗರೂಕರಾಗಿರುವುದು ಬಹಳ ಮುಖ್ಯ.ಕೆಲವು ಸುಲಭ ವಿಧಾನಗಳ ಮೂಲಕ ನಿಮ್ಮ ಕೋಣೆಯಲ್ಲಿ ಸೀಕ್ರೆಟ್ ಕ್ಯಾಮೆರಾ ಇಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಬಹುದು.

ಇದನ್ನೂ ಓದಿ : ಜಿಯೋ ಗ್ರಾಹಕರಿಗೆ ಮುಖೇಶ್ ಅಂಬಾನಿಯಿಂದ ಬಂಪರ್ ಗಿಫ್ಟ್! ಏರ್‌ಟೆಲ್‌ಗಿಂತಲೂ 50ರೂ. ಕಡಿಮೆ ಬೆಲೆಯ ಪ್ರಿಪೇಯ್ಡ್ ಪ್ಲಾನ್ ರಿಲೀಸ್

ನೀವು ಹೋಟೆಲ್ ಕೋಣೆಯಲ್ಲಿ ತಂಗಿದ್ದರೆ, ಮೊದಲು ಅಲ್ಲಿ ಅಳವಡಿಸಲಾದ ಬಲ್ಬ್‌ಗಳನ್ನು ಎಚ್ಚರಿಕೆಯಿಂದ ನೋಡಿ. ಬಲ್ಬ್‌ನಲ್ಲಿ ಯಾವುದೇ ಸಣ್ಣ ರಂಧ್ರ ಕಂಡುಬಂದರೂ ಅದನ್ನು ಪರಿಶೀಲಿಸಿ. ಹಲವು ಬಾರಿ ಸಿಸಿಟಿವಿ ಬಲ್ಬ್ ಸಾಮಾನ್ಯ ಬಲ್ಬ್‌ನಂತೆ ಕಾಣುತ್ತದೆ. ಆದರೆ ಅದು ನಿಮ್ಮ ಪ್ರತಿಯೊಂದು ಚಟುವಟಿಕೆಯನ್ನು ರೆಕಾರ್ಡ್ ಮಾಡುತ್ತಾ ಇರಬಹುದು. ಇದಲ್ಲದೆ, ಗೋಡೆ ಗಡಿಯಾರಗಳು, ಸ್ಮೋಕ್ ಡಿ ಟೆಕ್ಟರ್, ಟಿಶ್ಯೂ ಬಾಕ್ಸ್, ಶೌಚಾಲಯ, ನಾನಗೃಹಗಳು, ಮೇಜಿನ ಮೇಲಿರುವ ಗಿಡಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳ ಮೇಲೆ ನಿಗಾ ಇರಿಸಿ ಏಕೆಂದರೆ ಇವುಗಳಲ್ಲಿ ಗುಪ್ತ ಕ್ಯಾಮೆರಾಗಳು ಇರಬಹುದು.

ಈ ಬಲ್ಬ್ ಅನ್ನು ಎಚ್ಚರಿಕೆಯಿಂದ ನೋಡಿ : 
ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳು ಅತಿಗೆಂಪು ಬೆಳಕನ್ನು ಹೊಂದಿದ್ದು, ಅದು ಕತ್ತಲೆಯಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಕೋಣೆಯಲ್ಲಿರುವ ಎಲ್ಲಾ ದೀಪಗಳನ್ನು ಆಫ್ ಮಾಡಿ ಬಲ್ಬ್ ಅನ್ನು ಎಚ್ಚರಿಕೆಯಿಂದ ನೋಡಬೇಕು. ಅದರಲ್ಲಿ ಮಸುಕಾದ ಬೆಳಕು ಅಥವಾ ಮಿನುಗುವ ಕೆಂಪು ದೀಪ ಕಂಡುಬಂದರೆ, ಅದು ಸೀಕ್ರೆಟ್ ಕ್ಯಾಮೆರಾದ ಸಂಕೇತವಾಗಿರಬಹುದು. 

ಇದನ್ನೂ ಓದಿ : ಶೀಘ್ರದಲ್ಲೇ ಬರಲಿದೆ ಇನ್‌ಸ್ಟಾಗ್ರಾಮ್‌ನಂತೆ ವಾಟ್ಸಾಪ್ ನಲ್ಲಿಯೂ ಹೆಚ್ಚಿನ ಫೋಟೋಗಳ ಸ್ಟೇಟಸ್ ಹಾಕುವ ಅಪಡೇಟ್ ..!

ಮೊಬೈಲ್ ಅಪ್ಲಿಕೇಶನ್‌ ಸಹಾಯ ಪಡೆಯಿರಿ : 
ಕೋಣೆಯಲ್ಲಿ ಗುಪ್ತ ಕ್ಯಾಮೆರಾ ಇರಬಹುದೆಂದು ಅನುಮಾನ ಬಂದರೆ ಗುಪ್ತ ಕ್ಯಾಮೆರಾ ಡಿಟೆಕ್ಟರ್ ಅಪ್ಲಿಕೇಶನ್‌ಗಳನ್ನು ಬಳಸಬಹುದು.ಗುಪ್ತ ಕ್ಯಾಮೆರಾಗಳನ್ನು ಪತ್ತೆಹಚ್ಚಲು ಸಹಾಯ ಮಾಡುವ ಹಲವು ಥರ್ಡ್ ಪಾರ್ಟಿ  ಅಪ್ಲಿಕೇಶನ್‌ಗಳು Google Play Store ಅಥವಾ Apple App Storeನಲ್ಲಿ ಲಭ್ಯವಿದೆ.ಆದರೆ ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೊದಲು, ಅದರ ರೇಟಿಂಗ್ ಪರಿಶೀಲಿಸಿ. 

ಮೊಬೈಲ್ ಕರೆಗಳನ್ನು ಪರೀಕ್ಷಿಸಿ : 
ಗುಪ್ತ ಕ್ಯಾಮೆರಾಗಳು ಅಥವಾ ಸಿಸಿಟಿವಿ ಕ್ಯಾಮೆರಾಗಳು ಸಾಮಾನ್ಯವಾಗಿ ರೇಡಿಯೋ ತರಂಗಾಂತರಗಳನ್ನು ಉತ್ಪಾದಿಸುತ್ತವೆ.ಇದು ಮೊಬೈಲ್ ಸಿಗ್ನಲ್‌ಗಳಿಗೆ ಅಡ್ಡಿಪಡಿಸಬಹುದು.ಒಂದು ಸ್ಥಳದಲ್ಲಿ ಕ್ಯಾಮೆರಾ ಇದೆ ಎನ್ನುವ  ಅನುಮಾನ ಬಂದರೆ, ಅಲ್ಲಿ ನಿಂತು ಕರೆ ಮಾಡಲು ಪ್ರಯತ್ನಿಸಿ. ಕರೆ ಮಾಡುವಾಗ ಸಿಗ್ನಲ್‌ನಲ್ಲಿ ವಿಚಿತ್ರವಾದ ಕ್ರ್ಯಾಕ್ಲಿಂಗ್ ಶಬ್ದ ಅಥವಾ ಅಡಚಣೆ ಉಂಟಾದರೆ, ಅಲ್ಲಿ ಸೀಕ್ರೆಟ್ ಕ್ಯಾಮೆರಾ ಇರುವ ಸಾಧ್ಯತೆಯಿದೆ.

ಇದನ್ನೂ ಓದಿ : ಇನ್ಮುಂದೆ ಜಾಹೀರಾತುಗಳ ಕಿರಿಕಿರಿಯಿಲ್ಲ - Youtube ನಿಂದ ಹೊಸ ನಿಯಮ

ವೈ-ಫೈ ನೆಟ್‌ವರ್ಕ್‌ಗಳನ್ನು ಸ್ಕ್ಯಾನ್ ಮಾಡಿ : 
ಹೆಚ್ಚಿನ ಗುಪ್ತ ಕ್ಯಾಮೆರಾಗಳು ವೈ-ಫೈ ಅಥವಾ ಬ್ಲೂಟೂತ್ ಮೂಲಕ ಸಂಪರ್ಕಗೊಂಡಿರುತ್ತವೆ.ನಿಮ್ಮ ಸ್ಮಾರ್ಟ್‌ಫೋನ್‌ನ ವೈ-ಫೈ ಲಿಸ್ಟ್ ಅಥವಾ ಬ್ಲೂಟೂತ್ ಸಾಧನಗಳನ್ನು ಪರಿಶೀಲಿಸಬೇಕು.ಯಾವುದೇ ಅಪರಿಚಿತ ಅಥವಾ ಅನುಮಾನಾಸ್ಪದ ಸಾಧನ ಸಂಪರ್ಕಗೊಂಡಿರುವುದು ಕಂಡುಬಂದರೆ, ಅದು ಗುಪ್ತ ಕ್ಯಾಮೆರಾದ ಸಂಕೇತವಾಗಿರಬಹುದು.

ಫೋನ್‌ನ ಫ್ಲ್ಯಾಶ್‌ಲೈಟ್ ಬಳಸಿ : 
ನಿಮ್ಮ ಫೋನ್‌ನ ಫ್ಲ್ಯಾಶ್‌ಲೈಟ್ ಬಳಸಿ ಗುಪ್ತ ಕ್ಯಾಮೆರಾಗಳನ್ನು ಪರಿಶೀಲಿಸಬಹುದು. ರಾತ್ರಿಯಲ್ಲಿ ಕೋಣೆಯ ದೀಪಗಳನ್ನು ಆಫ್ ಮಾಡಿ ಮತ್ತು ನಿಮ್ಮ ಮೊಬೈಲ್‌ನ ಟಾರ್ಚ್ ಅನ್ನು ಬಲ್ಬ್,ಗಡಿಯಾರ, ಅಥವಾ ಇತರ ಅನುಮಾನಾಸ್ಪದ ಸ್ಥಳಗಳ ಮೇಲೆ ಬೆಳಗಿಸಿ. ಅಲ್ಲಿಂದ ಯಾವುದೇ ಪ್ರತಿಫಲನ ಅಥವಾ ಸಣ್ಣ ಬೆಳಕು ಕಂಡುಬಂದರೆ, ಅದು ಕ್ಯಾಮೆರಾ ಆಗಿರಬಹುದು.

ಎಚ್ಚರದಿಂದಿರಿ ಮತ್ತು ತಕ್ಷಣ ಕ್ರಮ ಕೈಗೊಳ್ಳಿ :
ನಿಮ್ಮ ಕೋಣೆಯಲ್ಲಿ ಯಾವುದೇ ಅನುಮಾನಾಸ್ಪದ ಸಾಧನ ಕಂಡುಬಂದರೆ, ಮೊದಲು ಹೋಟೆಲ್ ಸಿಬ್ಬಂದಿಗೆ ತಿಳಿಸಿ. ಹೋಟೆಲ್ ಆಡಳಿತವು ಈ ವಿಷಯವನ್ನು ಹಗುರವಾಗಿ ಪರಿಗಣಿಸಿದರೆ, ನೀವು ಪೊಲೀಸರಿಗೆ ದೂರು ನೀಡಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News