WhatsApp Feature - ಟೈಪ್ ಮಾಡದೆಯೇ WhatsApp ಮೂಲಕ Text ಸಂದೇಶ ಕಳುಹಿಸುವುದು ಹೇಗೆ?
WhatsApp Feature - ವಿಶ್ವದಲ್ಲಿ ಲಕ್ಷಾಂತರ ಜನರು ಇನ್ಸ್ಟಂಟ್ ಮೆಸೇಜಿಂಗ್ ಆಪ್ WhatsApp ಬಳಕೆ ಮಾಡುತ್ತಾರೆ. ಇಂತಹುದರಲ್ಲಿ ನಿತ್ಯ ಅಸಂಖ್ಯಾತ ಸಂದೇಶಗಳು ರವಾನೆಯಾಗುವುದು ಸಹಜ. ಟೈಪ್ ಮಾಡಿ ಮೆಸೇಜ್ ಕಳುಹಿಸುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.
ನವದೆಹಲಿ: WhatsApp Feature - ವಿಶ್ವದಲ್ಲಿ ಲಕ್ಷಾಂತರ ಜನರು ಇನ್ಸ್ಟಂಟ್ ಮೆಸೇಜಿಂಗ್ ಆಪ್ WhatsApp ಬಳಕೆ ಮಾಡುತ್ತಾರೆ. ಇಂತಹುದರಲ್ಲಿ ನಿತ್ಯ ಅಸಂಖ್ಯಾತ ಸಂದೇಶಗಳು ರವಾನೆಯಾಗುವುದು ಸಹಜ. ಟೈಪ್ ಮಾಡಿ ಮೆಸೇಜ್ ಕಳುಹಿಸುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಆದರೆ ಇಂದು ನಾವು ನಿಮಗೆ ಟೈಪ್ ಮಾಡದೆಯೇ ಟೆಕ್ಸ್ಟ್ ಸಂದೇಶ ಹೇಗೆ ಕಳುಹಿಸಬೇಕು ಎಂಬುದನ್ನು ಹೇಳಿಕೊಡಲಿದ್ದೇವೆ. ನೀವು ಈ ಟ್ರಿಕ್ (WhatsApp Trick) ಬಳಕೆಯನ್ನು ಕೇವಲ ವಾಟ್ಸ್ ಆಪ್ ನಲ್ಲಿ ಮಾತ್ರ ಅಲ್ಲ ಇತರೆ ಆಪ್ ಗಳಲ್ಲಿಯೂ ಮಾಡಬಹುದು. ಇದಕ್ಕಾಗಿ ನೀವು ಟೈಪ್ ಮಾಡಬೇಕಾದ ಅವಶ್ಯಕತೆ ಇಲ್ಲ.
ಈ ವೈಶಿಷ್ಟ್ಯ ನಿಮ್ಮ ಧ್ವನಿಯನ್ನು ಆಧರಿಸಿ ಕೆಲಸ ಮಾಡುತ್ತದೆ. ಅಂದರೆ ನೀವು ಕಳುಹಿಸ ಬೇಕಾದ ಸಂದೇಶವನ್ನು ನೀವು ಕೇವಲ ಮಾತನಾಡುವ ಮೂಲಕ ಹೇಳಬೇಕು ಮತ್ತು ನೀವು ಹೇಳಿದ್ದು ಸ್ವಯಂಚಾಲಿತವಾಗಿ ಟೈಪ್ ಆಗುತ್ತದೆ. ಒಂದು ಬಾರಿ ಮೆಸೇಜ್ ಟೈಪ್ ಆದ ಮೇಲೆ ನೀವು ಅದನ್ನು ಪರಿಶೀಲಿಸಿ ಸೆಂಡ್ ಗುಂಡಿಯನ್ನು ಒತ್ತಬೇಕು. ಇದರಲ್ಲಿ ನಿಮ್ಮ ಫೋನ್ ಕೀಬೋರ್ಡ್ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಉದಾಹರಣೆಗಾಗಿ ಒಂದು ವೇಳೆ ನಿಮ್ಮ ಬಳಿ ಸ್ಯಾಮ್ ಸಂಗ್ ಫೋನ್ ಇದ್ದು, ಅದರಲ್ಲಿ ನೀವು ಸ್ಯಾಮ್ ಸಂಗ್ ಕೀಬೋರ್ಡ್ ಬಳಸುತ್ತಿದ್ದರೆ, ನೀವು ಗೂಗಲ್ ಪ್ಲೇ ಸ್ಟೋರ್ (Google Play Store) ನಿಂದ google indic keyboard ಅನ್ನುಡೌನ್ ಲೋಡ್ ಮಾಡಿ ಬಳಸಬೇಕು. ಇದು ಕನ್ನಡ ಭಾಷೆಗೂ ಕೂಡ ಸಪೋರ್ಟ್ ಮಾಡುತ್ತದೆ.
ಟೈಪ್ ಮಾಡದೆ ಈ ರೀತಿ ಟೆಕ್ಸ್ಟ್ ಮೆಸೇಜ್ ಕಳುಹಿಸಿ
- ಇದಕ್ಕಾಗಿ ಮೊದಲು ನೀವು ನಿಮ್ಮ ವಾಟ್ಸ್ ಆಪ್ ಅನ್ನು ತೆರೆಯಬೇಕು. ಬಳಿಕ ನೀವು ಸಂದೇಶ ಕಳುಹಿಸಬೇಕೆನ್ನುವವರ ಚಾಟ್ ಗೆ ಹೋಗಿ.
- ಈಗ ಸಂದೇಶ ಬರೆಯಲು ಕೀಬೋರ್ಡ್ ತೆರೆಯಿರಿ. ಹೆಚ್ಚುವರಿ ಕೀಬೋರ್ಡ್ ಗಳ ಮೇಲೆ ಮೇಲ್ಭಾಗದಲ್ಲಿ ಮೈಕ್ (Mic) ಸೈನ್ ಇರುತ್ತದೆ. ಅದನ್ನು ಟ್ಯಾಪ್ ಮಾಡಿ.
- ಆದರೆ, ವಾಟ್ಸ್ ಆಪ್ ನಲ್ಲಿ ವೈಸ್ ಮೆಸೇಜ್ ಕಳುಹಿಸಲು ಕೂಡ ಮೈಕ್ ನೀಡಲಾಗಿದೆ ಎಂಬುದರ ಮೇಲೆ ಗಮನವಿರಲಿ. ನೀವು ಆ ಮೈಕ್ ನ ಬಳಕೆ ಮಾಡಬೇಡಿ. ಕೀಬೋರ್ಡ್ ನಲ್ಲಿರುವ ಮೈಕ್ ಮಾತ್ರ ನೀವು ಉಪಯೋಗಿಸಬೇಕು.
ಇದನ್ನೂ ಓದಿ- Privacy ಧಕ್ಕೆಯ ಭಯ ಬಿಟ್ಟು ಇನ್ಮುಂದೆ ಫೋನ್ ನಂಬರ್ ಹಂಚಿಕೊಳ್ಳದೆ ಈ ರೀತಿ WhatsApp ಬಳಸಿ
- ಇದೀಗ ನಿಮ್ಮ ಮುಂದೆ ಒಂದು ಮೈಕ್ ಪ್ರಕಟವಾಗಲಿದೆ. ಈಗ ನಿಮಗೆ ಮಾತನಾಡಲು (Try To Say Something) ಹೇಳಲಾಗುವುದು.
- ನೀವು ಕಳುಹಿಸಬೇಕೆನ್ನುವ ಸಂದೇಶವನ್ನು ಕೇವಲ ಮಾತನಾಡುವ ಮೂಲಕ ಹೇಳಿ. ನಿಮ್ಮ ಸಂದೇಶ ಪೂರ್ಣಗೊಂಡ ಬಳಿಕ ಮೈಕ್ ಐಕಾನ್ ಅನ್ನು ಟ್ಯಾಪ್ ಮಾಡಿ.
- ಇಲ್ಲಿ ವಿಶೇಷ ಎಂದರೆ ಇಂದಿನ ಬಹುತೇಕ ಕೀಬೋರ್ಡ್ ಗಳು ಇಂಗ್ಲಿಷ್ ಭಾಷೆಯ ಜೊತೆಗೆ ಪ್ರಾಂತೀಯ ಭಾಷೆಗಳನ್ನು ಸಹ ಸಮರ್ಥಿಸುತ್ತವೆ.
- ನೀವು ಮಾತನಾಡಿದ್ದೆಲ್ಲವು ಇಲ್ಲಿ ಟೈಪ್ ಆಗುತ್ತದೆ. ನಂತರ ಕೇವಲ ನೀವು ಸೆಂಡ್ ಮಾತ್ರ ಮಾಡಬೇಕು.
ಇದನ್ನೂ ಓದಿ- WhatsAppನ ಈ ಮೂರು Tricks ಬಳಸಿ ನಿಮ್ಮ ಜೀವನವನ್ನು ಸರಳಗೊಳಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.